ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿಗಳಿಗೆ ಪ್ರಜಾವಾಣಿ ಎಸ್‌ಎಸ್‌ಎಲ್‌ಸಿ ಮಾರ್ಗದರ್ಶಿ ವಿತರಣೆ

Published 11 ಜುಲೈ 2024, 12:41 IST
Last Updated 11 ಜುಲೈ 2024, 12:41 IST
ಅಕ್ಷರ ಗಾತ್ರ

ಹುಲಸೂರ: ‘ಪತ್ರಿಕೆ ಓದುವುದರಿಂದ ಜ್ಞಾನ ಸಂಪಾದನೆಯಾಗುತ್ತದೆ. ಎಸ್‌ಎಸ್‌ಎಸ್‌ಸಿ ಪರೀಕ್ಷೆಗೆ ಸಹಾಯಕವಾಗುವ ಸಂಗತಿಗಳನ್ನು ‘ಪ್ರಜಾವಾಣಿ’ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಿರುವುದು ಸಂತೋಷದ ವಿಷಯ’ ಎಂದು ಮುಚಳoಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋನಿಯಾ ಸಿದ್ದಾರೂಢ ಹೇಳಿದರು.

ಮುಚಳoಬ ಗ್ರಾಮ ಪಂಚಾಯಿತಿ ವತಿಯಿಂದ ಎಸ್‌ಏಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ ಎಸ್‌ಎಸ್‌ಎಲ್‌ಸಿ ಮಾರ್ಗದರ್ಶಿ’ ವಿತರಿಸಿ ಅವರು ಮಾತನಾಡಿದರು.

‘ವಸ್ತುನಿಷ್ಠ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪತ್ರಿಕೆ ನೀಡುತ್ತಿದೆ. ಶಾಲೆಯಲ್ಲಿ ಪಾಠ ಕೇಳಿದ ನಂತರ ಪತ್ರಿಕೆಯಲ್ಲಿ ಪ್ರಕಟವಾಗುವ ಅದೇ ವಿಷಯದ ಪಾಠವನ್ನು ಮತ್ತೊಮ್ಮೆ ಓದಿದರೇ ಹೆಚ್ಚು ಅರ್ಥವಾಗುತ್ತದೆ. ಇದರಿಂದ ಹೆಚ್ಚಿನ ಅಂಕ ಗಳಿಸಲು ಗಳಿಸಬಹುದು’ ಎಂದರು.

ಪಿಡಿಒ ಸಂದೀಪ ಮಾತನಾಡಿ, ‘ಪಂಚಾಯಿತಿ ವತಿಯಿಂದ ಪತ್ರಿಕೆಗಳನ್ನು ಉಚಿತವಾಗಿ ಶಾಲೆಗೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸಬೇಕು’ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವ ಪಾಟಿಲ ಮಾತನಾಡಿದರು.

ಜಿಲ್ಲಾ ಪತ್ರಿಕಾ ವಿತರಕ ಮುಖಂಡ ಉಮಾಕಾಂತ ಡಕಾಲಿ ಮಾತನಾಡಿ, ‘ತಾ.ಪಂ ಇಒ ಮಹದೇವ ಬಾಬಳಗಿ, ಮುಚಳoಬ, ಬೇಲೂರ, ಗೋರಟಾ, ತೊಗಲುರ, ಮೀರಖಲ, ಹುಲಸೂರ ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒ ಅವರ ಶೈಕ್ಷಣಿಕ ಕಾಳಜಿಯಿಂದ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮಾರ್ಗದರ್ಶಿ ಲಭ್ಯವಾಗುತ್ತಿದೆ’ ಎಂದರು.

ಈ ವೇಳೆ ಮುಖ್ಯಶಿಕ್ಷಕ ರವಿ ಬಿರಾದಾರ, ವಿಜಯಕುಮಾರ ಪಟ್ನೇ, ಅನೋಜಕುಮಾರ, ಮಿಲ್ಲಿಕ್ ಸಾಬ್, ಬಸವರಾಜ ಜೀರೋಬೆ, ಶಿವಶಂಕರ ಪತಂಗೆ, ಬೇಬಿ ಬಿರಾದಾರ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT