ಬಸವಕಲ್ಯಾಣ (ಬೀದರ್ ಜಿಲ್ಲೆ):ಇಲ್ಲಿನ ಕಾಲೇಜೊಂದರಲ್ಲಿ ಪಿಯುಸಿಅಭ್ಯಾಸ ಮಾಡಿದ್ದ ಇಬ್ಬರು ಯುವತಿಯರು ಪರಸ್ಪರ ಮದುವೆಯಾಗಿ ಸಹಜೀವನ ನಡೆಸುವ ಉದ್ದೇಶದಿಂದ ಬೆಂಗಳೂರಿಗೆ ತೆರಳಿದ್ದರು. ಪೊಲೀಸರು ಅವರನ್ನು ಕರೆತಂದಿದ್ದು, ಅವರು ತಮ್ಮ ಮನೆಗಳಿಗೆ ವಾಪಸ್ಸಾಗಿದ್ದಾರೆ.

‘ಯುವತಿಯೊಬ್ಬಳ ಪಾಲಕರು ಪೊಲೀಸ್ ಠಾಣೆಗೆ ದೂರು ನೀಡಿ ಮಗಳ ಪತ್ತೆಗೆ ಮನವಿ ಮಾಡಿದ್ದರು. ಆಗ ಇಬ್ಬರನ್ನೂ ಪತ್ತೆಹಚ್ಚಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿತ್ತು. ಪಾಲಕರ ಒತ್ತಾಯ, ಪೊಲೀಸರು ಹಾಗೂ ಆಪ್ತ ಸಮಾಲೋಚಕರು ತಿಳಿಹೇಳಿದ ನಂತರಇವರು ತಮ್ಮ ಮದುವೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಈ ಇಬ್ಬರೂ ಯುವತಿಯವರು ತಾಲ್ಲೂಕಿನ ಬೇರೆ ಬೇರೆ ಗ್ರಾಮದವರು.ಕಾಲೇಜಿನಲ್ಲಿದ್ದಾಗ ಗೆಳೆತನವಾಗಿತ್ತು. ನಂತರ ಪ್ರೀತಿ ಅಂಕುರಿಸಿ, ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು. ಆದರೆ, ಇವರಿಬ್ಬರ ವಿಚಿತ್ರ ಪ್ರೀತಿಗೆ ಪಾಲಕರು ವಿರೋಧ ವ್ಯಕ್ತಪಡಿಸಿದ್ದರಿಂದ ಇವರಬಯಕೆ ಈಡೇರಲಿಲ್ಲ. ಹೀಗಾಗಿ ಬೆಂಗಳೂರಿಗೆ ಓಡಿ ಹೋಗಿದ್ದರು’ ಎನ್ನುವುದು ಮೂಲಗಳ ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.