ಬೀದರ್: 2021ನೇ ವರ್ಷದಲ್ಲಿ ಕೋವಿಡ್ ಹಾಗೂ ಚುನಾವಣೆ ನೀತಿ ಸಂಹಿತೆಯೇ ಅಭಿವೃದ್ಧಿಗೆ ತೊಡಕಾಯಿತು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಹಾಗೂ ಕೆಲ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆದವು. ಚುನಾವಣೆಯಲ್ಲಿನ ಕೆಸರೆರಚಾಟ ರಾಜಕೀಯ ಮುಖಂಡರ ಸಂಬಂಧಗಳು ಹಳಸುವಂತೆ ಮಾಡಿದವು.

ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಈ ವರ್ಷವೂ ಕನಸಾಗಿಯೇ ಉಳಿಯಿತು. ಹೊಸ ತಾಲ್ಲೂಕುಗಳು ಅಭಿವೃದ್ಧಿಯ ಮುಖ ನೋಡಲಿಲ್ಲ. ಕೋವಿಡ್ ಜಿಲ್ಲೆಯ ಜನರನ್ನು ಬಿಟ್ಟು ಬಿಡದಂತೆ ಕಾಡಿತು. ಜಿಲ್ಲಾ ಕೇಂದ್ರ ಕಾರಾಗೃಹ, ಮಿನಿ ವಿಧಾನಸೌಧ, ಅನುಭವ ಮಂಟಪ ನಿರ್ಮಾಣ ಕಾರ್ಯ ಆರಂಭವಾಗಲಿಲ್ಲ. ಜಿಲ್ಲಾ ಕ್ರೀಡಾಂಗಣ, ಹೆದ್ದಾರಿ ನಿರ್ಮಾಣ ಕಾರ್ಯವೂ ಪೂರ್ಣಗೊಳ್ಳಲಿಲ್ಲ.

ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ಸುರಿದ ಭಾರಿ ಮಳೆಯಿಂದಾಗಿ 58,183 ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ಕೃಷಿ ಬೆಳೆಗಳು ಹಾಳಾದವು. ಮಳೆಯ ಅಬ್ಬರಕ್ಕೆ 687 ರೈತರ 528 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ ಹಾನಿಗೀಡಾದವು. ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಬೀದರ್ ತಾಲ್ಲೂಕಿನ ರೈತರು ಅತಿ ಹೆಚ್ಚು ನಷ್ಟ ಅನುಭವಿಸಿದರು.

ಜನವರಿ

01. ಹತ್ತು ತಿಂಗಳ ನಂತರ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಶುರು.

06. ಬಸವಕಲ್ಯಾಣದಲ್ಲಿ ₹ 500 ಕೋಟಿ ವೆಚ್ಚದ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಶಂಕುಸ್ಥಾಪನೆ

26. ಬೀದರ್ ನಗರದಲ್ಲಿ ‘ಬೇಟಿ ಸರ್ಕಲ್’ ಉದ್ಘಾಟನೆ

ಫೆಬ್ರುವರಿ

01.ಅನರ್ಹ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಿದ ಏಳು ಪಿಡಿಒಗಳ ಅಮಾನತು

11.ಭಾಲ್ಕಿ ತಾಲ್ಲೂಕಿನಲ್ಲಿ ವಸತಿ ಅಕ್ರಮ ಆರೋಪ: 65 ಅಧಿಕಾರಿಗಳ ತಂಡದಿಂದ ವಿಚಾರಣೆ

21. ಬೀದರ್ ನಗರದಲ್ಲಿ 40 ಜನರಿಗೆ ಕಚ್ಚಿದ ಹುಚ್ಚು ನಾಯಿ

22. ಕಮಲನಗರ ತಾಲ್ಲೂಕಿನ ಸಂಗಮದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಗ್ರಾಮ ವಾಸ್ತವ್ಯ

23. ಕೋವಿಡ್ ಪರೀಕ್ಷೆ ಮಾಡಿಕೊಳ್ಳದವರಿಗೆ ಪ್ರವೇಶ ನಿರ್ಬಂಧ

ಮಾರ್ಚ್

05. ರಾಜ್ಯ ಮಟ್ಟದ ನಾಟಕೋತ್ಸವ

20. ನಗರದಲ್ಲಿ 13ನೇ ರಾಜ್ಯಮಟ್ಟದ ವಿಜ್ಞಾನ ಸಮ್ಮೇಳನ

22. ಧೂಪತ್ಮಹಾಗಾಂವ ಪಂಚಾಯಿತಿ ಅಧ್ಯಕ್ಷರೊಂದಿಗೆ ಪ್ರಧಾನಿ ವಿಡಿಯೊ ಸಂವಾದ

31. ಹುಮನಾಬಾದ್ನಲ್ಲಿ ಎರಡು ಗುಂಪುಗಳ ಮಧ್ಯೆ ವಾಗ್ವಾದ ಪೊಲೀಸರಿಂದ ಗಾಳಿಯಲ್ಲಿ ಗುಂಡು

ಏಪ್ರಿಲ್

05. ಕೊರೊನಾಘಾತ: ಒಂದೇ ದಿನ 264 ಪ್ರಕರಣ ಪತ್ತೆ

07. ಸಾರಿಗೆ ನೌಕರರ ಮುಷ್ಕರ: ಒಂದೇ ದಿನದಲ್ಲಿ ₹ 48 ಲಕ್ಷ ಹಾನಿ

22. ಬೀದರ್ನಲ್ಲಿ ಭಾಗಶಃ ಲಾಕ್ಡೌನ್ ಜಾರಿ

27. ಬೀದರ್ ನಗರಸಭೆ ಚುನಾವಣೆ: ಬಿರುಸಿನ ಮತದಾನ

ಮೇ

26 ಕೇಂದ್ರ ಸರ್ಕಾರದ ದುರಾಡಳಿತ ಖಂಡಿಸಿ ಅಖಿಲ ಭಾರತ ಕಿಸಾನ್ ಸಭಾದಿಂದ ಪ್ರತಿಭಟನೆ

27 ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕಾಕರಣಕ್ಕೆ ಚಾಲನೆ

29 ಲೈಂಗಿಕ ಅಲ್ಪಸಂಖ್ಯಾತರಿಗೆ ಆಹಾರ ಕಿಟ್ ವಿತರಣೆ

ಜೂನ್

02. ಬೀದರ್ನಲ್ಲಿ ವೃತ್ತಾಕಾರದ ಕಾಮನಬಿಲ್ಲು ಕಂಡು ಬೆರಗಾದ ಜನ

06. ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ವತಿಯಿಂದ ಬ್ರಿಮ್ಸ್ ಆಸ್ಪತ್ರೆಗೆ 5 ಸಾವಿರ ಹ್ಯಾಂಡ್ ಗ್ಲೌಸ್ ಕೊಡುಗೆ

15. ಕಮಲನಗರ ತಾಲ್ಲೂಕಿನ ಗಡಿಯಲ್ಲಿ ಮರಿಗಳೊಂದಿಗೆ ಕಾಣಿಸಿಕೊಂಡ ನೀಲಗಾಯಗಳು

24. ಕೃಷಿ ಜಂಟಿ ನಿರ್ದೇಶಕಿ ವರ್ಗಾವಣೆಗೆ ಆಗ್ರಹಿಸಿ ಕೃಷಿ ಇಲಾಖೆ ಅಧಿಕಾರಿಗಳಿಂದ ಸಾಮೂಹಿಕ ರಜೆ

ಜುಲೈ

01. ಎರಡು ಸಾಮಾನ್ಯ ಸೇವಾ ಕೇಂದ್ರಗಳಿಗೆ ಬೀಗಮುದ್ರೆ

05. ದರ್ಶನಕ್ಕೆ ತೆರೆದುಕೊಂಡ ಪ್ರಾರ್ಥನಾ ಮಂದಿರಗಳು

07 ಸಂಸದ ಭಗವಂತ ಖೂಬಾ ಅವರಿಗೆ ಒಲಿದ ಕೇಂದ್ರ ಸಚಿವ ಸ್ಥಾನ

10 ಔರಾದ್, ಭಾಲ್ಕಿಯಲ್ಲಿ ಮಳೆ ಅಬ್ಬರಿಸಿ ಹೊಲಗಳಿಗೆ ನೀರು ನುಗ್ಗಿತು

14 ಕಾರಂಜಾ ಜಲಾಶಯ ಶೇ 80ರಷ್ಟು ಭರ್ತಿ

23 ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ 53 ವಿದ್ಯಾರ್ಥಿಗಳು 600ಕ್ಕೆ 600ಕ್ಕೆ ಅಂಕ ಪಡೆದು ಸಾಧನೆ ಮೆರೆದರು

ಆಗಸ್ಟ್

03. ಬೀದರ್ನ ಪಾಪನಾಶ ದೇವಸ್ಥಾನದ ಹುಂಡಿ ಒಡೆದು ನಗದು ಕಳ್ಳತನ

04. ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸಚಿವ ಪ್ರಭು ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು

23. ಬಹು ದಿನಗಳ ನಂತರ ಆರಂಭವಾದ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಬಂದರು

25. ಬೀದರ್ನಲ್ಲಿ ಅಬ್ಬರಿಸಿದ ಮಳೆ

ಸೆಪ್ಟೆಂಬರ್

02. ಬೀದರ್ನ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಬೀಗ ಹಾಕಲು ಯತ್ನಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು

03. ಬಸವಕಲ್ಯಾಣ, ಬೀದರ್ ನಗರಸಭೆಗಳ ತಲಾ ಎರಡು ವಾರ್ಡ್ಗಳಿಗೆ ಶಾಂತಿಯುತ ಮತದಾನ

20. ಕೆಸಿಇಟಿ: ಶಾಹೀನ್ ವಿದ್ಯಾರ್ಥಿನಿ ರಾಜ್ಯಕ್ಕೆ 9ನೇ ರ್ಯಾಂಕ್

24.ಮನಸೆಳೆದ ರಾಷ್ಟ್ರೀಯ ಜನಪದ ನೃತ್ಯೋತ್ಸವ

30.ಕಲಾಸಕ್ತರ ಮನ ತಣಿಸಿದ ಗಿರಿಜನ ಉತ್ಸವ

ಅಕ್ಟೋಬರ್

02. ಬೀದರ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಕುರಿತ ಪ್ರದರ್ಶನ

16.ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ (ಕೆ) ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

18.ಬೀದರ್ ತಾಲ್ಲೂಕಿನ ಚೊಂಡಿಯಲ್ಲಿ ಕರಿ ನವಿಲು ಸಮೀಕ್ಷೆ ಆರಂಭ

27–ಭಿಕ್ಷಾಟನೆ ತಡೆಗೆ ನಾಲ್ಕು ತಂಡಗಳಲ್ಲಿ ಅಧಿಕಾರಿಗಳ ಕಾರ್ಯಾಚರಣೆ

ನವೆಂಬರ್

02– ರಾಜ್ಯ ಮಟ್ಟದ ಕಲಾ ಸಂಭ್ರಮೋತ್ಸವ

09–ಬೀದರ್ ಜಿಲ್ಲೆಯ ಜನರಿಗೆ ಮಾರುತಿ ಕಾಂಪೌಂಡರ್ ಎಂದೇ ಚಿರಪರಿಚಿತರಾಗಿದ್ದ ಮಾರುತಿ ಗುಂಡಪ್ಪ ಚಂದನಹಳ್ಳಿಕರ್ ಕೊನೆಯುಸಿರೆಳೆದರು.

16 ಕಳ್ಳತನ ಹಾಗೂ ದರೋಡೆ ಪ್ರಕರಣಗಳನ್ನು ಭೇದಿಸಿ ₹ 2.25 ಕೋಟಿ ಮೌಲ್ಯದ ವಸ್ತುಗಳನ್ನು ಕಳ್ಳರಿಂದ ವಶಪಡಿಸಿಕೊಂಡು ಮಾಲೀಕರಿಗೆ ಸ್ವತ್ತು ಹಸ್ತಾಂತರ

ಡಿಸೆಂಬರ್

01. ಜಿಲ್ಲೆಯ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಆರಂಭ.

03. ನರಸಿಂಹ ಝರಣಿ ದೇವಸ್ಥಾನದಲ್ಲಿ ಅನ್ನದಾಸೋಹ ಪ್ರಾರಂಭ

14.ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ನ ಭೀಮರಾವ್ ಪಾಟೀಲ

25–ರೈತರೊಂದಿಗೆ ಕೇಂದ್ರ ಸಚಿವರ ಸಂವಾದ ಕಾರ್ಯಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.