ಮಹದೇಶ್ವರಬೆಟ್ಟ: ಮಹದೇಶ್ವರಬೆಟ್ಟ ಕೇಂದ್ರಸ್ಥಾನದಲ್ಲಿ ಕಸ, ತ್ಯಾಜ್ಯ ವಸ್ತುಗಳ ರಾಶಿಯಿಂದ ಅನೈರ್ಮಲ್ಯ ತಾಂಡವವಾಡುತ್ತಿದ್ದು, ಇದನ್ನು ತೆರವು ಗಳಿಸಿ ಸ್ವಚ್ಛಗೊಳಿಸಬೇಕು ಎಂದು ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಒತ್ತಾಯಿಸಿದ್ದಾರೆ.

‘ಶ್ರೀ ಮಲೆ ಮಹದೇಶ್ವರಬೆಟ್ಟ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಜಾಗ’ ಎಂಬ ಫಲಕ ಇಲ್ಲಿ ನೆಟ್ಟಿದ್ದು, ಖಾಲಿ ಜಾಗದ ಸುತ್ತ ಜಾಲಿ ಮುಳ್ಳು, ಗಿಡಗಂಟಿಗಳು ಬೆಳೆದಿದೆ. ಅಲ್ಲಿನ ಮನೆ ನಿವಾಸಿಗಳು ಗೃಹ ತ್ಯಾಜ್ಯ ವಸ್ತುಗಳನ್ನೂಎಸೆಯುತ್ತಿದ್ದು, ಕೊಳಚೆ ನೀರು ಸಹ ಹರಿಯುತ್ತಿದೆ.

ತಂಬಡಿಗೇರಿ ರಸ್ತೆಯಲ್ಲಿ ಗುರುನಗರದ ಬಳಿ ಕಸ , ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇನ್ನಿತರ ವಸ್ತುಗಳ ರಾಶಿ ಹರಡಿದ್ದು, ಅಶುಚಿತ್ವದಿಂದ ಕೂಡಿದೆ. ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಿರಿಯ ಅಧಿಕಾರಿಗಳು ಸ್ವಚ್ಚತೆ ಕಾಪಾಡಲು ಸೂಚನೆ ನೀಡಬೇಕು ಚಂದ್ರು ಎಂದು ಆಗ್ರಹಿಸಿದ್ದಾರೆ.

ಗುರುನಗರ ಗ್ರಾಮದ ಕಸ ವಿಲೇವಾರಿ ಮಾಡದೆ ಇರುವಂತಹ ಜಾಗದ ಆಸು ಪಾಸಿನಲ್ಲಿ ಸುಮಾರು 150 ರಿಂದ 200 ಮನೆಗಳಿದ್ದು ಇವರೆಲ್ಲರೂ ಅದೇ ಮಾರ್ಗದಲ್ಲಿ ಸಂಚರಿಸಬೇಕು. ಅಲ್ಲದೆ ಇದರ ಪಕ್ಕದಲ್ಲೇ ಕುಡಿಯುವ ಕಿರು ನೀರಿನ ತೊಂಬೆ ಇದೆ. ತೊಂಬೆಯಿಂದಲೇ ಕುಡಿಯಲು ಕಲುಷಿತ ನೀರನ್ನು ಪ್ರತಿ ದಿನ ಕೊಂಡೂಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿವ ನೀರಿನಿಂದ ಕಾಲರಾ, ಡೆಂಗಿ, ಮಲೇರಿಯ ಸಂಕ್ರಾಮಿಕ ರೋಗಹರಡುವ ಭೀತಿ ಇದೆ. ಇದೇ ರಸ್ತೆಯಲ್ಲಿ ಮಕ್ಕಳು, ಮಹಿಳೆಯರು, ಗರ್ಭಿಣಿಯರು,ವೃದ್ಧರು ಸೇರಿದಂತೆ ತಿರುಗಾಡುವ ದುಸ್ಥಿತಿ ಇದೆ. ತ್ಯಾಜ್ಯ, ಹಳಸಿದ ಆಹಾರ ಪದಾರ್ಥದ ರಾಶಿಯಲ್ಲಿ ರಾತ್ರಿ ವೇಳೆ ಕಾಡು ಹಂದಿಗಳು ಬರುತ್ತಿವೆ. ಸಂಚರಿ ಭಯ ಪಡುವ ಸ್ಥಿತಿ ಎದುರಾಗಿದೆ ಎಂದು ಅವರು ತಿಳಿಸಿದರು.

‘ಹಲವಾರು ಭಾರಿ ಪಂಚಾಯಿತಿ ಆಡಳಿತ ಅಧಿಕಾರಿಗಳಿಗೆ ದೂರು ನೀಡಿದ್ದು, ಒಂದು ಭಾರಿ ಮಾತ್ರ ರಸ್ತೆಗೆ ಹರಡಿದ್ದ ಕಸವನ್ನು ಮಾತ್ರ ವಿಲೇವಾರಿ ಮಾಡಲಾಗಿತ್ತು. ಬಳಿಕ ಇತ್ತ ಗಮನವನ್ನು ಹರಿಸುತ್ತಿಲ್ಲ. ಇತ್ತಿಚೆಗೆ ಮಲೆ ಮಹದೇಶ್ವರ ಅಭಿವೃದ್ದಿ ಪ್ರಾಧಿಕಾರದವರು ಪ್ರಾಧಿಕಾರದ ಆಸ್ತಿ ಎಂದು ಜಾಗಕ್ಕೆ ನಾಮಫಲಕವನ್ನು ಹಾಕಿದ್ದಾರೆ. ಗ್ರಾಮಸ್ಥರು ಪಂಚಾಯಿತಿ ಅಧಿಕಾರಿಗಳಿಗೆ ಕಸದ ಬಗ್ಗೆ ದೂರು ನೀಡಿದರೆ ‘ಅದು ಪ್ರಾಧಿಕಾರದ ಜಾಗ’ ಎಂಬ ಕುಂಟು ನೆಪ ಹೇಳುತ್ತಾರೆ, ಪ್ರಾಧಿಕಾರಕ್ಕೆ ದೂರು ನೀಡಿದರೆ , ‘ಪರಿಶೀಲಿಸುತ್ತೇವೆ’ ಎಂದು ಹೇಳುತ್ತಾರೆ, ಕಂದಾಯ ಇಲಾಖೆ ದಾಖಲೆಯ ಪ್ರಕಾರ 1 ಎಕರೆ 34 ಸೆಂಟ್ಸ್ ಹಾಗೂ 3 ಏಕರೆ 36 ಸೆಂಟ್ಸ್ ಮಲೆಮಹದೇಶ್ವರ ದೇವಾಸ್ಥಾನಕ್ಕೆ ಭೂ ಸ್ವಾಧೀನ ಎಂದು ತೋರಿಸಲಾಗುತ್ತಿದೆ. ಜಾಗ ಬೇರ್ಪಡಿಸಿ ಅಧಿಕಾರಿಗೆಳೇ ಗುರುತು ಮಾಡಬೇಕು. ಗುರು ನಗರದ ನಿವಾಸಿಗಳು ಮಾತ್ರ ಗಬ್ಬೆದ್ದು ನಾರುವ ತ್ಯಾಜ್ಯಕ್ಕೆ ಮುಕ್ತಿಬಯಸುತ್ತಿದ್ದಾರೆ. ತ್ಯಾಜ್ಯವನ್ನು ವಿಲೇವಾರಿ ಮಾಡಿಕೊಡಬೇಕು ಎಂದು ಚಂದ್ರಶೇಖರ್ ಮನವಿಯನ್ನು ಮಾಡಿದ್ದಾರೆ.

ಗುರುನಗರ ಬಳಿ ಖಾಲಿ ಜಾಗದಲ್ಲಿ ತ್ಯಾಜ್ಯವಸ್ತುಗಳಿಂದ ಅನೈರ್ಮಲ್ಯ ಉಂಟಾಗಿರುವುದು ಗಮನಕ್ಕೆ ಬಂದಿದೆ. ಬಿಸಾಡಿರುವ ತ್ಯಾಜ್ಯವನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು.
ರಘು.ಎ.ಈ, ಕಾರ್ಯದರ್ಶಿ, ಮಹದೇಶ್ವರಬೆಟ್ಟ.ಅಭಿವೃದ್ಧಿ ಪ್ರಾಧಿಕಾರ

ತ್ಯಾಜ್ಯ ಯವಸ್ತುಗಳ ರಾಶಿಯನ್ನು ತೆರವುಗೊಳಿಸಿ ಸ್ವಚ್ಚತೆ ಕಾಪಾಡಲಾಗುವುದು. ಘನತ್ಯಾಜ್ಯ ವಿಲೇವಾರಿ ಮಾಡಲು ಕಸಗಳನ್ನು ಒಂದೆಡೆ ಸಂಗ್ರಹಿಸಿದ್ದು ಶೀಘ್ರದಲ್ಲೇ ವಿಲೇ ಆಗಲಿದೆ.
ಕಿರಣ್ ಕುಮಾರ್, ಪಿಡಿಒ, ಮಹದೇಶ್ವರಬೆಟ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.