ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಳಿಗಿರಿಬೆಟ್ಟ: ಭಕ್ತರಿಂದ ಗರುಡೋತ್ಸವ ಸೇವೆ

Published 15 ಜೂನ್ 2024, 14:25 IST
Last Updated 15 ಜೂನ್ 2024, 14:25 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಶನಿವಾರ ಭಕ್ತರಿಂದ ಗರುಡೋತ್ಸವ ಸೇವೆ ಸಾಂಗವಾಗಿ ನೆರವೇರಿತು. ಸಾವಿರಾರು ಭಕ್ತರು ಸೇವೆ ಸಲ್ಲಿಸಿ ಧನ್ಯತೆ ಮೆರೆದರು.

ಮುಂಜಾನೆ ದೇವಾಲಯದಲ್ಲಿ ಸ್ವಾಮಿಗೆ ಮಂಗಳಾರತಿ ಬೆಳಗಲಾಯಿತು. ಜೇಷ್ಠ ಶುದ್ಧ ನವಮಿ ಉತ್ತರ ನಕ್ಷತ್ರದಲ್ಲಿ ಅರ್ಚಕರು ಕುಂಕುಮ, ಅರಿಶಿನ ಹಾಗೂ ಗಂಧಾಕ್ಷತೆ ಸಿಂಚನಮಾಡಿ, ಹೂ ಹಾರಗಳಿಂದ ಸಿಂಗರಿಸಿದರು. ನಂತರ ಭಕ್ತರ ದರ್ಶನಕ್ಕೆ ದೇವಳವನ್ನು ಮುಕ್ತಗೊಳಿಸಲಾಯಿತು.

ಶನಿವಾರ ದಾಸರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಆದರೆ, ಶಾಲಾ-ಕಾಲೇಜು ಪ್ರಾರಂಭವಾದ ನಂತರ ಪ್ರವಾಸಿಗರ ಸಂಖ್ಯೆ ತಗ್ಗಿದೆ. ಹಾಗಾಗಿ, ಭಕ್ತ ದಟ್ಟಣೆ ಕುಸಿದಿದೆ. ಸ್ಥಳೀಯರು ದೇಗುಲದಲ್ಲಿ ಆಯೋಜಿಸಿದ್ದ ಗರುಡ ಸೇವೆಯಲ್ಲಿ ಪಾಲ್ಗೊಂಡಿದ್ದರು. ಬ್ಯಾಟಮನೆ ಉತ್ಸವ ಮತ್ತು ರಂಗನಾಥಸ್ವಾಮಿ ಸಮೇತ ಲಕ್ಷ್ಮಿ ಮತ್ತು ತುಳಸಮ್ಮನ ಉತ್ಸವ ಮೂರ್ತಿಯನ್ನು ಗುಡಿಯ ಸುತ್ತಲೂ ಮೆರವಣಿಗೆ ಮಾಡಲಾಯಿತು ಎಂದು ದೇವಾಲಯದ ಪಾರುಪತ್ತೆಗಾರ ರಾಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT