ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೂಕಾಲು ವರ್ಷಗಳಾಗಿವೆ. ಆದರೆ ಜಿಲ್ಲೆಯಲ್ಲಿ ಬಗರ್‌ಹುಕುಂ ಅಕ್ರಮ ಸಕ್ರಮ ಸಮಿತಿಗಳಿಗೆ ಬಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ.

ವರ್ಷ ಕಳೆದರೂ ಶಾಸಕರ ನೇತೃತ್ವದ ಬಗರ್‌ಹುಕುಂ ಅಕ್ರಮ ಸಕ್ರಮ ಸಮಿತಿಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ರಚನೆಯೇ ಆಗಿಲ್ಲ. ಇದು ಸಾವಿರಾರು ಸಾಗುವಳಿದಾರರಲ್ಲಿ ನಿರಾಸೆ ಮೂಡಿಸಿದೆ.

ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಶಾಸಕರ ನೇತೃತ್ವದಲ್ಲಿ ಬಗರ್‌ಹುಕುಂ ಅಕ್ರಮ ಸಕ್ರಮ ಸಮಿತಿಗಳು ರಚನೆಯಾಗಿವೆ. ಉಳಿದಂತೆ ಗುಡಿಬಂಡೆ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ ತಾಲ್ಲೂಕು ವ್ಯಾಪ್ತಿಯಲ್ಲಿ ಇನ್ನೂ ರಚನೆಯೇ ಆಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ಫೆಬ್ರುವರಿಯಲ್ಲಿಯೇ ಸಮಿತಿ ರಚನೆಯಾಗಿದೆ. ಆದರೆ ಇಂದಿಗೂ ಒಂದೂ ಸಭೆ ನಡೆದಿಲ್ಲ.

‘ಬಗರ್ ಹುಕುಂ’ ಯೋಜನೆಯಡಿ ಜಮೀನು ಸಾಗುವಳಿ ಮಾಡುತ್ತಿರುವವರಿಗೆ ಹಕ್ಕು ಪತ್ರ ನೀಡಿ ಎಂದು ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ರೈತ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಿವೆ. ಬಗರ್ ಹುಕುಂ ಹಕ್ಕುಪತ್ರ ನೀಡಲು ಜನಪ್ರತಿನಿಧಿಗಳು ನಿರಾಸಕ್ತಿ ತೋರಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಶಾಸಕರು, ಸಚಿವರು ಮತ್ತು ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಜನಸಂಪರ್ಕ ಸಭೆ, ಜನತಾದರ್ಶನ ಸಭೆಗಳಲ್ಲಿಯೂ ಬಗರ್ ಹುಕುಂ ಹಕ್ಕುಪತ್ರಕ್ಕೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚು ಬಂದಿವೆ. ನಾವು ಉಳುಮೆ ಮಾಡುತ್ತಿರುವ ಜಮೀನನ್ನು ನಮಗೆ ಮಾಡಿಕೊಡಿ ಎಂದು ರೈತರು ಅರ್ಜಿ ಸಲ್ಲಿಸಿದ್ದಾರೆ.

ಆದರೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಆಯಾ ಶಾಸಕರು ಸಮಿತಿ ರಚನೆಗೆ ಮತ್ತು ಅರ್ಜಿಗಳ ವಿಲೇವಾರಿಗೆ ವೇಗ ನೀಡುತ್ತಿಲ್ಲ. ರಾಜ್ಯವಾರು ಅಂಕಿ ಅಂಶಗಳನ್ನು ನೋಡಿದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಮೂನೆ 50ರಡಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಶೇ 100ರಷ್ಟು ಅರ್ಜಿಗಳು ವಿಲೇವಾರಿ ಆಗಿವೆ. ನಮೂನೆ 53ರ ಅಡಿ ಶೇ 84ರಷ್ಟು ಅರ್ಜಿಗಳು ವಿಲೇವಾರಿ ಆಗಿವೆ. ನಮೂನೆ 57ರ ಅಡಿಯಲ್ಲಿ ಸಲ್ಲಿಕೆ ಆಗಿರುವ ಅರ್ಜಿಗಳಲ್ಲಿ ಶೇ 5ರಷ್ಟು ಅರ್ಜಿಗಳು ಮಾತ್ರ ವಿಲೇವಾರಿ ಆಗಿವೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 1,53,627 ಅರ್ಜಿಗಳು ಬಗರ್‌ಹುಕುಂ ಯೋಜನೆಯಡಿ ಹಕ್ಕುಪತ್ರಕ್ಕಾಗಿ ಸಲ್ಲಿಕೆ ಆಗಿವೆ. ಇವುಗಳಲ್ಲಿ 87,620 ಅರ್ಜಿಗಳು ವಿಲೇವಾರಿ ಆಗಿವೆ. 65,890 ಅರ್ಜಿಗಳು ಇನ್ನೂ ವಿಲೇವಾರಿಗೆ ಬಾಕಿ ಇವೆ. ನಮೂನೆ 53ರ ಅಡಿ 6,508 ಮತ್ತು ನಮೂನೆ 57ರ ಅಡಿ 59,499 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.

ರಾಜ್ಯದಲ್ಲಿ ಹೆಚ್ಚು ಬಗರ್‌ಹುಕುಂ ಸಾಗುವಳಿ ಹಕ್ಕುಪತ್ರ ಕೋರಿ ಸಾಗುವಳಿದಾರರು ಅರ್ಜಿ ಸಲ್ಲಿಸಿರುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಸಹ ಪ್ರಮುಖವಾದುದು. ಅಕ್ರಮ ಸಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಹಲವು ಹೋರಾಟಗಳು ನಡೆದಿವೆ. ಸಾಗುವಳಿ ಸಂಬಂಧ ಅರಣ್ಯ ಇಲಾಖೆ ಮತ್ತು ರೈತರ ನಡುವೆ ಜಿಲ್ಲೆಯಲ್ಲಿ ಜಟಾಪಟಿ ನಡೆದ ಪ್ರಸಂಗಗಳೂ ಇವೆ. ಸಮಿತಿ ರಚನೆ ಆಗಿದಿರುವುದು ರೈತರಲ್ಲಿ ಅಸಮಾಧಾನ ಮತ್ತು ಬೇಸರಕ್ಕೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯು ರಾಜಧಾನಿ ಬೆಂಗಳೂರಿಗೆ ಹತ್ತಿರವಿರುವ ಕಾರಣ ಭೂಮಿಯ ಬೆಲೆ ಹೆಚ್ಚಿದೆ. ಇದು ಸಹಜವಾಗಿ ಭೂಗಳ್ಳರ ದೃಷ್ಟಿ ಬೀಳಲು ಕಾರಣವಾಗಿದೆ. ಬಗರ್ ಹುಕುಂ ಯೋಜನೆಯಡಿ ಅನರ್ಹರು ಸಹ ಅರ್ಜಿ ಸಲ್ಲಿಸಿದ್ದಾರೆ.

ಈ ಬೆಳವಣಿಗೆಗಳ ನಡುವೆಯೇ ಅರ್ಹರಿಗೆ ಮತ್ತು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡುವಂತೆ ರೈತ ಸಂಘಟನೆಗಳು ಹಾಗೂ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ ಆಗಾಗ್ಗೆ ಪ್ರತಿಭಟನೆ ಸಹ ನಡೆಸುತ್ತಿವೆ.

‘ಬಡವರ ಬಗ್ಗೆ ಶಾಸಕರಿಗೆ ಕಾಳಜಿಯಿಲ್ಲ’

ಚುನಾಯಿತ ಪ್ರತಿನಿಧಿಗಳಿಗೆ ಜನರ ಹಿತ ಮುಖ್ಯ. ಆದರೆ ರಾಜಕೀಯ ಹಿತಾಸಕ್ತಿಗಳು ಇಲ್ಲಿ ಕೆಲಸ ಮಾಡುತ್ತಿವೆ. ರಾಜಕೀಯ ಹಿತಾಸಕ್ತಿಗೆ ಬಡವರು ಬಲಿ ಆಗುತ್ತಿದ್ದಾರೆ. ಬಡವರು ಕೂಲಿ ಕಾರ್ಮಿಕರ ಬಗ್ಗೆ ಶಾಸಕರಿಗೆ ಕಾಳಜಿ ಇಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಜಿ.ವಿ.ಗಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಬಗರ್ ಹುಕುಂ ಸಮಿತಿಗಳು ಆಶ್ರಯ ಸಮಿತಿಗಳ ರಚನೆಯಿಂದ ಜಮೀನು ಮನೆ ಬಡವರಿಗೆ ದೊರೆಯುತ್ತವೆ. ವಿಶೇಷವಾಗಿ ಭೂಮಿಯಿಂದ ವಂಚಿತವಾಗಿರುವ ಪರಿಶಿಷ್ಟ ಜಾತಿ ಪಂಗಡವರಿಗೆ ಅನುಕೂಲವಾಗುತ್ತದೆ. ಆದರೆ ಈ ವರ್ಗಗಳ ಬಗ್ಗೆ ಕಾಳಜಿಯೇ ಇಲ್ಲದ ರೀತಿಯಲ್ಲಿ ಶಾಸಕರು ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

‘ಬಂಡವಾಳಶಾಹಿಗೆ ಭೂಮಿ ನೀಡುವ ಹುನ್ನಾರ’

ದರಖಾಸ್ತು ಸಮಿತಿಗಳನ್ನು ರಚಿಸದಿರುವ ಮೂಲ ಉದ್ದೇಶ ಸರ್ಕಾರಿ ಭೂಮಿಯನ್ನು ಬಂಡವಾಳಶಾಹಿಗಳಿಗೆ ನೀಡುವುದೇ ಆಗಿದೆ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ದೂರುವರು. ಹಲವು ವರ್ಷಗಳಿಂದ ಜಮೀನು ಉಳುಮೆ ಮಾಡಿಕೊಂಡು ಬರುತ್ತಿರುವವರಿಗೆ ಇನ್ನೂ ಅಕ್ರಮ ಸಕ್ರಮದಡಿ ಜಮೀನು ನೀಡಿಲ್ಲ. ಬಡವರು ಉಳುಮೆ ಮಾಡುತ್ತಿರುವ ಜಮೀನುಗಳನ್ನು ಕೈಗಾರಿಕೆಗಳು ಸೇರಿದಂತೆ ಬಂಡವಾಳಶಾಹಿಗಳಿಗೆ ನೀಡುವ ಹುನ್ನಾರ ಇದರ ಹಿಂದೆ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.