ಬಾಗೇಪಲ್ಲಿ: ಕಟ್ಟಡ ಹಾಗೂ ಇತರೆ ಕಾರ್ಮಿಕರಿಗೆ ಮದುವೆ, ಹೆರಿಗೆ, ಮರಣ ಹಾಗೂ ಅಪಘಾತ ಹೊಂದಿದವರಿಗೆ ಸರ್ಕಾರದಿಂದ ಸೌಲಭ್ಯ ಸಿಗುತ್ತಿಲ್ಲ. ಕಾರ್ಮಿಕರಿಗೆ ಹೊಸ ನೊಂದಣಿ ಮಾಡಿಸಬೇಕು ಎಂದು ಒತ್ತಾಯಿಸಿ ಸೂರ್ಯೋದಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮಂಗಳವಾರ ತಾಲ್ಲೂಕು ಕಾರ್ಮಿಕ ನಿರೀಕ್ಷಕ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.

ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ಹೊರಟ ಪ್ರತಿಭಟನಾಕಾರರು ಮುಖ್ಯರಸ್ತೆಯಲ್ಲಿ ಸಂಚರಿಸಿ, ಕಾರ್ಮಿಕ ನಿರೀಕ್ಷಕರ ಕಚೇರಿಯವರಿಗೂ ಮೆರವಣಿಗೆ ಮಾಡಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಆಂಜನೇಯರೆಡ್ಡಿ ಮಾತನಾಡಿ, ‘ತಾಲ್ಲೂಕು ಅತಿ ಹಿಂದುಳಿದಿದೆ. ಮಳೆ ಇಲ್ಲದೆ ಕೃಷಿಕರು ಹೊಲ, ಗದ್ದೆಗಳಲ್ಲಿ ಬೆಳೆ ಇಡಲು ಆಗಿಲ್ಲ. ಕೃಷಿಕರು ಇದೀಗ ಕಟ್ಟಡ ಹಾಗೂ ಇತರೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕಾರ್ಮಿಕ ಇಲಾಖೆಯಿಂದ ನೂತನ ಸದಸ್ಯತ್ವಕ್ಕೆ ಅರ್ಜಿ ಹಾಕಿದ್ದರೂ ಕಾರ್ಡ್ ವಿತರಿಸಿಲ್ಲ’ ಎಂದು ಆರೋಪಿಸಿದರು.

ಅಧಿಕಾರಿಗಳು ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲವಾದರೆ ಅನಿರ್ದಿಷ್ಟ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕು ಕಾರ್ಮಿಕ ನಿರೀಕ್ಷಕ ರಾಕೇಶ್ ಆಗಮಿಸಿ, ಹಂತ ಹಂತದಲ್ಲಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಸಂಘಟನೆಯ ರಾಜ್ಯ ಅಧ್ಯಕ್ಷ ನಂದಾ, ಜಿಲ್ಲಾ ಕಾರ್ಯದರ್ಶಿ ರಾಮಾಂಜಿ, ಮನ್ಸೂರ್ ಸೈಯ್ಯದ್, ಲಕ್ಷ್ಮಿಪತಿ, ಮಂಜುನಾಥ, ಮೂರ್ತಿ, ಷಫೀವುಲ್ಲಾ, ಅಮರನಾಥ, ಅಶೋಕ, ಆನಂದಾಚಾರಿ, ಶಿವಕುಮಾರ್, ಚೇಳೂರು ಅಮರನಾಥ್, ನರಸಿಂಹಮೂರ್ತಿ, ಜಿ.ಲಕ್ಷ್ಮಿನಾರಾಯಣ, ಕೃಷ್ಣಪ್ಪ, ನರಸಿಂಹಪ್ಪ, ಕಲಿಮುಲ್ಲಾ, ಶಫೀವುಲ್ಲಾ, ಜಿಲಾನ್, ಜಿಜಾಮುದ್ದೀನ್ ಖಾನ್, ಕೇಶವಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.