ಶಿಡ್ಲಘಟ್ಟ (ಚಿಕ್ಕಬಳ್ಳಾಪುರ): ತಮ್ಮ ತಾಯಿಯ ಸಾವಿನ ನೋವು ಮರೆಯಲು ಸಾಧ್ಯವಾಗದೆ ಅಕ್ಕ ತಮ್ಮ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಶುಕ್ರವಾರ ಬೆಳಿಗ್ಗೆ ಶಿಡ್ಲಘಟ್ಟದಲ್ಲಿ ನಡೆದಿದೆ.

ಪ್ರೇಮನಗರದ ಪ್ರಭು (22) ಮತ್ತು ನವ್ಯಾ (24) ಮೃತರು.

ಬೆಂಗಳೂರಿನಿಂದ ಶಿಡ್ಲಘಟ್ಟ ಮಾರ್ಗವಾಗಿ ಕೋಲಾರಕ್ಕೆ ತೆರಳುತ್ತಿದ್ದ ರೈಲಿಗೆ ಶೆಟ್ಟಪ್ಪನ ತೋಪಿನ ರೈಲ್ವೆ ಹಳಿ ಬಳಿ ತಲೆ ಕೊಟ್ಟಿದ್ದಾರೆ.

ಪ್ರಭು ಮತ್ತು ನವ್ಯಾ ತಾಯಿ ಲಲಿತಮ್ಮ ಇತ್ತೀಚೆಗೆ ತೀರಿಕೊಂಡಿದ್ದರು. ಇದರಿಂದ ಈ ಇಬ್ಬರು ಮಾನಸಿಕವಾಗಿ ಕುಗ್ಗಿದ್ದರು. ತಾಯಿ ಸಾವಿನಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪ್ರಭು ಮತ್ತು ನವ್ಯಾ ಅವರ ತಂದೆ ಕೂಲಿ ಕೆಲಸ ಮಾಡುತ್ತಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.