ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಪ್ರಮುಖ ತೋಟಗಾರಿಕಾ ಬೆಳೆ ಟೊಮೆಟೊಗೆ ಈಗ ಬಂಪರ್ ಬೆಲೆ ಬಂದಿದೆ. ಜೂನ್, ಜುಲೈನಲ್ಲಿ ಉತ್ತಮ ದರವಿತ್ತು. ಆ ನಂತರ ದರ ಕುಸಿಯಿತು.

ಈಗ ಮತ್ತೆ ಉತ್ತಮ ದರ ಬಂದಿದೆ. ಇದರಿಂದ ಸಹಜವಾಗಿ ರೈತರ ಮುಖದಲ್ಲಿ ಸಂತಸ ಮೂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ದರ್ಜೆಯ ಒಂದು ಕೆ.ಜಿ ಟೊಮೆಟೊ ಬೆಲೆ ₹ 80ರಿಂದ 85 ಇದೆ. ಗುಣಮಟ್ಟದ ಹಣ್ಣು ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ರವಾನೆ ಆಗುತ್ತಿದೆ. ಇದೇ ತೂಕದ ಮಧ್ಯಮ ಗುಣಮಟ್ಟದ ಟೊಮೆಟೊ ₹ 700ರಿಂದ 800, ಮೂರನೇ ದರ್ಜೆಯ ಟೊಮೆಟೊ 300ರಿಂದ 350 ಮಾರಾಟವಾಗುತ್ತಿದೆ.

ಎರಡು ವಾರಗಳ ಹಿಂದೆ ಬೆಲೆಯು ಈಗಿನ ಬೆಲೆಯ ಅರ್ಧದಷ್ಟಿತ್ತು. ಹೀಗೆ ಬೆಲೆ ಹೆಚ್ಚಳವಾಗುತ್ತಿರುವ ಕಾರಣ ಕಳಪೆ ಟೊಮೆಟೊಗಳಿಗೂ ಬೇಡಿಕೆ ಕುದುರಿದೆ.

ಚಿಕ್ಕಬಳ್ಳಾಪುರದ ಬಜಾರ್ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಟೊಮೆಟೊ ಬೆಲೆ ₹ 80ರಿಂದ 85 ಇದೆ. ಆದರೆ ಈ ಟೊಮೆಟೊ ಮಧ್ಯಮ ಗುಣಮಟ್ಟದ್ದಾಗಿದೆ. ಉತ್ತಮ ಗುಣಮಟ್ಟದ ಟೊಮೆಟೊವನ್ನು ಇಲ್ಲಿ ಮಾರಾಟ ಮಾಡುತ್ತಿಲ್ಲ. ಅದು ಜಿಲ್ಲೆಯಿಂದ ಹೊರ ಹೋಗುತ್ತಿದೆ ಎನ್ನುತ್ತಾರೆ ರೈತರು.

‘ಒಂದು ಕೆರೆಯಲ್ಲಿ ಟೊಮೆಟೊ ಬೆಳೆದಿದ್ದೇವೆ. ಮೂರು ದಿನಕ್ಕೆ ಒಮ್ಮೆ 100ರಿಂದ 120 ಬಾಕ್ಸ್ ಹಣ್ಣು ಕೀಳುತ್ತಿದ್ದೇವೆ. ಟೊಮೆಟೊಗೆ ಬೇಡಿಕೆ ಹೆಚ್ಚಿದೆ. ₹ 80 ಸಾವಿರದಿಂದ ₹ 90 ಸಾವಿರ ವೆಚ್ಚ ಮಾಡಿದ್ದೇವೆ. ಈ ಹಿಂದಿನ ಬೆಳೆಗಳಲ್ಲಿ ನಷ್ಟ ಅನುಭವಿಸಿದ್ದೆವು. ಈ ಬಾರಿ ಖುಷಿ ತಂದಿದೆ’ ಎಂದು ಗುಡಿಬಂಡೆ ತಾಲ್ಲೂಕಿನ ಕೊಂಡರೆಡ್ಡಿ ಹಳ್ಳಿಯ ರೈತರ ಗಣೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹತ್ತು ದಿನಗಳ ಹಿಂದೆ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಟೊಮೆಟೊ ಬೆಲೆ ₹ 50 ಇತ್ತು. ಈಗ ₹ 80 ಆಗಿದೆ. ಮಳೆ ಮತ್ತು ರೋಗದ ಕಾರಣದಿಂದ ಬೆಲೆ ಹೆಚ್ಚಿರಬಹುದು’ ಎನ್ನುತ್ತಾರೆ ಚಿಕ್ಕಬಳ್ಳಾಪುರ ತರಕಾರಿ ವ್ಯಾಪಾರಿ ನಾಗೇಶ್.

ರಾಜ್ಯದಲ್ಲಿಯೇ ಟೊಮೆಟೊ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು. ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಬಾಗೇಪಲ್ಲಿ ಮಾರುಕಟ್ಟೆಗಳಿಂದ ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಟೊಮೆಟೊ ರವಾನೆ ಆಗುತ್ತದೆ.

ಜನವರಿವರೆಗೆ ಬೆಲೆ ಸ್ಥಿರ

‘ಜನವರಿಯವರೆಗೆ ಇದೇ ಬೆಲೆ ಇರುತ್ತದೆ ಎಂದು ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಹೇಳುತ್ತಿದ್ದಾರೆ. ಈಗ ಕೆಲವು ರೈತರು ಟೊಮೆಟೊ ನಾಟಿ ಮಾಡಿದ್ದಾರೆ. ಆ ಹಣ್ಣು ಮಾರುಕಟ್ಟೆಗೆ ಬರುವವರೆಗೂ ಬೆಲೆ ಹೆಚ್ಚಿರುತ್ತದೆ’ ಎಂದು ಗಣೇಶ್ ತಿಳಿಸಿದರು. ಈಗ ಊಜಿ ನೊಣ ಮತ್ತು ಕಾಯಿಯ ಮೇಲೆ ಚುಕ್ಕೆ ಬರುವ ರೋಗ ಹೆಚ್ಚಿದೆ. ಫಸಲು ಕಡಿಮೆ ಇರುವ ಕಾರಣ ಹಣ್ಣಿಗೆ ಬೇಡಿಕೆ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.