ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರಿಬಿದನೂರು | ಮನೆಯಂಗಳದಲ್ಲಿ ಕನ್ನಡದ ಕಂಪು

Published 25 ಜುಲೈ 2024, 14:25 IST
Last Updated 25 ಜುಲೈ 2024, 14:25 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರದ ಉಡಮಲೋಡು ಗ್ರಾಮದ ಫ್ಲಾರೆನ್ಸ್ ( ಸವಿತ ನರಸಿಂಹಮೂರ್ತಿ) ನಿವಾಸದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಬುಧವಾರ ಸಂಜೆ ಮನೆಯಂಗಳದಲ್ಲಿ ಕನ್ನಡ ಕಂಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಲೇಖಕಿ ಆಶಾ ಜಗದೀಶ್ ಮಾತನಾಡಿ, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯವನ್ನು ಅನೇಕ ಮಂದಿ ಸಾಹಿತಿಗಳು, ಚಿಂತಕರು ಕಟ್ಟಿ ಬೆಳೆಸಿರುವುದನ್ನು ಇಂದಿನ ಯುವ ಸಮುದಾಯ ಮುಂದುವರೆಸಿಕೊಂಡು ಹೋಗಬೇಕಾಗಿದೆ. ಕನ್ನಡಿಗರಾದ ನಾವು ನಾಡು ನುಡಿಗಾಗಿ ಶ್ರಮಿಸಬೇಕಾಗಿದೆ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಂಜುಂಡಪ್ಪ ಟಿ.ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಉದ್ಯೋಗದ ಭೀತಿ ಆತಂಕದಲ್ಲಿದ್ದಾರೆ. ಕನ್ನಡ ಭಾಷೆ ಅನ್ನ ನೀಡುವ ಭಾಷೆಯಾಗಬೇಕು. ಒಂದು ಭಾಷೆ ನಶಿಸಿಹೋಗುವುದೆಂದರೆ ಒಂದು ಜನಾಂಗ ನಶಿಸಿ ಹೋದಂತೆ. ಆದ್ದರಿಂದ ಭಾಷೆ ಉಳಿಸಿ ಬೆಳೆಸಬೇಕಾಗಿದೆ ಎಂದರು.

ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಎನ್.ಬಾಲಪ್ಪ, ರಾಣಾ ಪ್ರತಾಪ್, ಡಾ.ಕೆ.ವಿ.ಪ್ರಕಾಶ್, ನಿವೃತ್ತ ಪ್ರಾಂಶುಪಾಲರಾದ ಡಾ.ನಾಗರತ್ನಮ್ಮ, ಗುಂಡಾಪುರ ಪದ್ಮ‌ಗೋವಿಂದಪ್ಪ, ನಜೀರ್ ಅಹಮದ್, ಶಿಕ್ಷಕ ಉಮಾಶಂಕರ್, ಸಿದ್ದಯ್ಯ, ಲಕ್ಷ್ಮಿನಾರಾಯಣಪ್ಪ, ಪೆದ್ದಗಂಗಪ್ಪ, ಕಲಾವಿದ ರಾಮಕೃಷ್ಣ, ಸಾಹಿತಿ ಸರ್ವಮಂಗಳ, ಸವಿತ, ನರಸಮ್ಮ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT