ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಬ್ಬದ ಸಂದರ್ಭದಲ್ಲಿ ಹೆಚ್ಚುವ ಬೇಡಿಕೆ: ರೈತನ ಜೇಬು ತುಂಬಿದ ಚೆಂಡು ಹೂ, ಸೇವಂತಿ

Published : 19 ಸೆಪ್ಟೆಂಬರ್ 2024, 5:56 IST
Last Updated : 19 ಸೆಪ್ಟೆಂಬರ್ 2024, 5:56 IST
ಫಾಲೋ ಮಾಡಿ
Comments

ಬಾಗೇಪಲ್ಲಿ: ಸೆಪ್ಟೆಂಬರ್ ತಿಂಗಳಲ್ಲಿ ಸಾಲು–ಸಾಲು ಹಬ್ಬಗಳಿಗೆ ಚೆಂಡುಹೂವು ಅವಶ್ಯ. ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ರೈತ ಚಂದ್ರಪ್ಪ ಅವರು ತಮ್ಮ ಹೊಲದಲ್ಲಿ ಚೆಂಡುಹೂವು, ಸೇವಂತಿಗೆ ಬೆಳೆದು ಯಶಸ್ವಿಯಾಗಿದ್ದಾರೆ. ದೀಪಾವಳಿಗೆ ಮತ್ತಷ್ಟು ಬೆಳೆಯುವ ನಿರೀಕ್ಷೆ ಹೊಂದಿದ್ದಾರೆ.

ಚಂದ್ರಪ್ಪ ಕೃಷಿ ಬೆಳೆ ಜೊತೆಗೆ ಹೂವಿನ ಬೆಳೆಯನ್ನು ಒಂದು ಎಕರೆಯಲ್ಲಿ, ಸೇವಂತಿಗೆಯನ್ನು  ಒಂದು ಎಕರೆಯಲ್ಲಿ ಬೆಳೆದಿದ್ದಾರೆ. ಹಬ್ಬಗಳ ಸಂದರ್ಭ ಗಳಲ್ಲಿ ಹೂವನ್ನು ಮಾರಾಟ ಮಾಡಿ ಲಾಭ ಗಳಿಸಿದ್ದಾರೆ.

ಚಿಕ್ಕಬಳ್ಳಾಪುರ, ಬೆಂಗಳೂರು ಮಾರುಕಟ್ಟೆಗೆ ಚೆಂಡುಹೂ, ಸೇವಂತಿಗೆ ತಲುಪಿಸುತ್ತಾರೆ. ಅಂತೆಯೇ ಹೈದರಾಬಾದ್‌ನ ಹೂವಿನ ಮಾರುಕಟ್ಟೆಗೆ ಚೆಂಡುಹೂ, ಸೇವಂತಿಯನ್ನು ಸಾಗಿಸುತ್ತಾರೆ. ಹೂವು ಕೀಳಲು ಕೂಲಿ ಮಹಿಳೆಯರಿಗೆ ದಿನಕ್ಕೆ ₹300 ರಿಂದ ₹400 ನೀಡುತ್ತಾರೆ.

ಹೈದರಾಬಾದ್ ಮಾರುಕಟ್ಟೆಯಲ್ಲಿ ಪ್ರತಿ 1 ಕೆ.ಜಿಗೆ ₹40 ರಿಂದ ₹50ಕ್ಕೆ ಚೆಂಡುಮಲ್ಲಿಗೆ, ಸೇವಂತಿಗೆ ಹೂವುಗಳು ಮಾರಾಟವಾಗುತ್ತಿದೆ. ಮಾರುಕಟ್ಟೆ ಯಲ್ಲಿ ಹೂವುಗಳಿಗೆ ಭಾರಿ ಬೇಡಿಕೆ ಇದೆ ಎನ್ನುತ್ತಾರೆ ರೈತ ಚಂದ್ರಪ್ಪ.

‘ಪ್ರತಿ 10 ದಿನಗಳಿಗೊಮ್ಮೆ ಒಂದು ಟನ್ ಚೆಂಡುಮಲ್ಲಿಗೆ, ಸೇವಂತಿಗೆಯನ್ನು ಹೈದರಾಬಾದ್‌ಗೆ ಸಾಗಿಸುತ್ತೇನೆ. ಒಂದು ಟನ್ ಹೂವು ಮಾರಾಟ ಮಾಡಿದರೆ ₹30 ರಿಂದ ₹40 ಸಾವಿರ ಲಾಭ ಬರುತ್ತದೆ ಎಂದು ರೈತ ಚಂದ್ರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕೃಷಿ ಬೆಳೆಗಳ ಜೊತೆಗೆ ಹೂ ಬೆಳೆಯಿಂದ ಉತ್ತಮ ಲಾಭ ಗಳಿಸಬಹುದು. ರೈತರು ಬೆಳೆ ನಷ್ಟ ಎಂದು ಹೇಳುವುದು ಬಿಡಬೇಕು. ತಮ್ಮ ಹೊಲ ಗದ್ದೆಗಳಲ್ಲಿ ಕೃಷಿ ಬೆಳೆಗಳ ಜೊತೆಗೆ ಹೂವು, ಹಣ್ಣು, ತರಕಾರಿ ಬೆಳೆಯಬೇಕು. ಒಂದೊಂದು ಬಾರಿ ಬೆಳೆ ನಷ್ಟ ಆದರೂ, ಮತ್ತೊಂದು ಬಾರಿ ಲಾಭ ಪಡೆಯಬಹುದು’ ಎಂದು ರೈತ ಚಂದ್ರಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT