ಮಿಟ್ಟೇಮರಿ(ಬಾಗೇಪಲ್ಲಿ): ತಾಲ್ಲೂಕಿನ ಮಿಟ್ಟೇಮರಿ ಹೋಬಳಿ ಕೇಂದ್ರದಲ್ಲಿ ಆರಂಭಿಸಿದ ಡಿಜಿಟಲ್ ಕೇಂದ್ರ ಗ್ರಂಥಾಲಯದಲ್ಲಿ ಮೇಲ್ವಿಚಾರಕರು ಹಾಗೂ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಕೇಂದ್ರದಲ್ಲಿ ಸಿಬ್ಬಂದಿ ಇಲ್ಲದೇ 2 ಕೊಠಡಿಗಳಿಗೆ ಬೀಗ ಜಡಿಯಲಾಗಿದೆ.

ಹೋಬಳಿ ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿಯ ಹಿಂದೆ ಹಳೆ ಕಟ್ಟಡ ಪಾಳು ಬಿದ್ದಿತ್ತು. ಈ ಕಟ್ಟಡದಲ್ಲಿ ಸರ್ಕಾರದ ಯೋಜನೆ, ಸೌಲಭ್ಯ ಪಡೆಯಲು ಹಾಗೂ ಗ್ರಾಮೀಣ ಜನರಿಗೆ ಡಿಜಿಟಲ್ ಗ್ರಂಥಾಲಯ ಸಿಗುವ ಉದ್ದೇಶದಿಂದ ಕೇಂದ್ರವನ್ನು ನವೀಕರಣ ಮಾಡಲಾಗಿದೆ.

ಆದರೆ ಡಿಜಿಟಲ್ ಕೇಂದ್ರ ಗ್ರಂಥಾಲಯಕ್ಕೆ ಜಿಲ್ಲಾ ಪಂಚಾಯಿತಿಯವರು ಒಂದು ವರ್ಷದಿಂದ ಸಿಬ್ಬಂದಿ ನೇಮಕ ಮಾಡಿಲ್ಲ. ಇದರಿಂದ ಗ್ರಾಮೀಣ ಜನರಿಗೆ ಡಿಜಿಟಲ್ ಗ್ರಂಥಾಲಯದಲ್ಲಿ ದಿನಪತ್ರಿಕೆ, ಪುಸ್ತಕ ಓದಲು ಆಗುತ್ತಿಲ್ಲ. ಪಕ್ಕದ ಕೊಠಡಿಯಲ್ಲಿ ಆನ್ಲೈನ್ ಸೇವೆ, ಸರ್ಕಾರದ ಯೋಜನೆ, ಸೌಲಭ್ಯ ಪಡೆಯಲು ಹಾಗೂ ವಿವಿಧ ಸರ್ಕಾರಿ ದಾಖಲೆ ಸಿಗದೇ ಪರದಾಡುತ್ತಿದ್ದಾರೆ. ಸರ್ಕಾರಿ ದಾಖಲೆಗಳಿಗೆ, ಸೌಲಭ್ಯಕ್ಕೆ ತಾಲ್ಲೂಕು ಕೇಂದ್ರದ ಆನ್ಲೈನ್ ಸೇವಾ ಕೇಂದ್ರಕ್ಕೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಕೇಂದ್ರದಲ್ಲಿ ಕೃಷಿ ಸೇವಾ ಸೌಲಭ್ಯ, ಪಾನ್ಕಾರ್ಡ್, ಆಧಾರ್, ಪಾಸ್ಪೋರ್ಟ್, ರೈಲು, ಬಸ್ ಟಿಕೆಟ್ ಬುಕ್ಕಿಂಗ್, ಉದ್ಯೋಗ ನೋಂದಣಿ, ಕೌಶಲ ತರಬೇತಿ ಕೇಂದ್ರ, ಹೊಲಿಗೆ ತರಬೇತಿ, ಸೌಂದರ್ಯವರ್ಧಕ, ಕಂಪ್ಯೂಟರ್ ಕಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಮಿಟ್ಟೇಮರಿ ಕೇಂದ್ರದಲ್ಲಿ ಸಿಬ್ಬಂದಿ ಇಲ್ಲ. ಹೀಗಾಗಿ ಕೇಂದ್ರದ ಬಾಗಿಲು ಮುಚ್ಚಲಾಗಿದೆ.

ಸರ್ವಿಸ್ ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ ಇಲ್ಲ. ಮಿಟ್ಟೇಮರಿ ಸೇರಿದಂತೆ ವಿವಿಧ ಕಡೆಗಳ ಡಿಜಿಟಲ್ ಗ್ರಂಥಾಲಯಗಳಿಗೆ ಖಾಸಗಿ ಕಂಪನಿಯವರು ಕಂಪ್ಯೂಟರ್, ಕಟ್ಟಡ ನವೀಕರಣ ಮಾಡಿಸಿದ್ದಾರೆ. ಆದರೆ ಸರ್ಕಾರ ಅಗತ್ಯ ಸಿಬ್ಬಂದಿ ನೇಮಕ ಮಾಡಿಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ ಎಂದು ಜೂಲಪಾಳ್ಯ ಗ್ರಾಮ ಪಂಚಾಯಿತಿ ಸದಸ್ಯ ಪೈಪಾಳ್ಯ ಜಗನ್ನಾಥ್ ಹೇಳಿದರು.

ಮೇಲ್ವಿಚಾರಕರ ನೇಮಕಕ್ಕೆ ಕ್ರಮ ಒಂದು ವರ್ಷದಿಂದ ಮಿಟ್ಟೇಮರಿ ಡಿಜಿಟಲ್ ಕೇಂದ್ರ ಗ್ರಂಥಾಲಯಗಳಲ್ಲಿ ಮೇಲ್ವಿಚಾರಕರು ಇಲ್ಲ. ಕೆಲವೇ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಜೊತೆ ಚರ್ಚಿಸಿ ಮೇಲ್ವಿಚಾರಕನ್ನು ನೇಮಕ ಮಾಡಿಸಿ ಕೇಂದ್ರವು ಜನರ ಬಳಕೆಗೆ ನೀಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.