ಶಿಡ್ಲಘಟ್ಟ: ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ತಯಾರಿ ಮತ್ತು ಮಾರಾಟವನ್ನು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದಲ್ಲಿ ನಿಷೇಧಿಸಿದೆ. ಆದರೂ ಮಾರಾಟಕ್ಕೆ ಯತ್ನಿಸುತ್ತಿದ್ದವರಿಂದ ಮೂರ್ತಿಗಳನ್ನು ವಶಪಡಿಸಿಕೊಂಡು, ಆರೋಪಿಗಳಿಗೆ ದಂಡ ವಿಧಿಸಲಾಗಿದೆ ಎಂದು ನಗರಸಭೆ ಆಯುಕ್ತ ಚಲಪತಿ ತಿಳಿಸಿದರು.

ನಗರದಲ್ಲಿ ಬುಧವಾರ ನಗರಸಭೆ ಅಧಿಕಾರಿಗಳು ಒಂದು ಕ್ವಿಂಟಲ್ನಷ್ಟು ಪ್ಲಾಸ್ಟಿಕ್ ಮತ್ತು ಆರು ಪಿಒಪಿ ಗಣಪನ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾರಾಟ ಮಾಡುತ್ತಿದ್ದವರಿಗೆ ತಲಾ ₹ 1000 ದಂಡ ವಿಧಿಸಲಾಗಿದೆ ಎಂದು ಅವರು ಹೇಳಿದರು.

ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿಗಳನ್ನು ಮಾರಬಾರದು. ಬಣ್ಣ ಹಚ್ಚದ ಪರಿಸರಪೂರಕ ಮಣ್ಣಿನ ಗಣೇಶನ ಮೂರ್ತಿಗಳನ್ನಷ್ಟೇ ಮಾರಬೇಕು. ಮೂರ್ತಿಗಳನ್ನು ಮಾರುವವರು ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.

ಪರಿಸರ ಕಾಪಾಡುವುದು ಎಲ್ಲರ ಹೊಣೆ. ಹಬ್ಬದ ಆಚರಣೆಯಲ್ಲಿಯೂ ಪರಿಸರ ಪ್ರೇಮ ವ್ಯಕ್ತಪಡಿಸಬೇಕು. ಪ್ಲಾಸ್ಟಿಕ್ ಬಳಕೆ ಹಾಗೂ ಬಣ್ಣಗಳ ಬಳಕೆ ಮಾಡದೆ ಹಬ್ಬ ಆಚರಿಸುವುದು ಎಲ್ಲರ ಆಶಯವಾಗಬೇಕು ಎಂದರು.

ಪರಿಸರ ಎಂಜಿನಿಯರ್ ದಿಲೀಪ್, ಆರೋಗ್ಯ ಅಧಿಕಾರಿ ಸಯೀದಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.