ಬೈರೇಗೌಡ –ರಾಧಮ್ಮ ದಂಪತಿ ಹಿರಿಯ ಪುತ್ರ ಬಿ.ನರೇಂದ್ರಬಾಬು ಕೃಷಿಯನ್ನೇ ಬದುಕನ್ನಾಗಿಸಿಕೊಂಡಿದ್ದು ಲಾಭ ಗಳಿಸುತ್ತಿದ್ದಾರೆ. ಕೃಷಿಯಲ್ಲಿ ಅಪಾರ ಜ್ಞಾನ ಹೊಂದಿರುವ ಇವರು ಇತರೆ ಕೃಷಿಕರಿಗೂ ಮಾದರಿ ಮತ್ತು ಮಾರ್ಗದರ್ಶಕರಾಗಿದ್ದಾರೆ. 44 ವರ್ಷದ ನರೇಂದ್ರಬಾಬು ತಮಗಿರುವ ಜಮೀನಿನಲ್ಲಿ ಮೊದಲು ಟೊಮೆಟೊ ಕೋಸು ಮುಂತಾದ ತರಕಾರಿ ಬೆಳೆ ಬೆಳೆಯುತ್ತಿದ್ದರು. ನಂತರ ತೋಟಗಾರಿಕೆ ಬೆಳೆಗಳತ್ತ ಆಕರ್ಷಿತರಾದರು. ಏಳೆಂಟು ಕೊಳವೆಬಾವಿ ಇರುವುದರಿಂದ ನೀರಿಗೆ ತೊಂದರೆ ಇಲ್ಲ. ಹೀಗಾಗಿ ತೋಟಗಾರಿಕೆ ಬೆಳೆ ಬೆಳೆಯುವುದನ್ನು ರೂಢಿಸಿಕೊಂಡಿದ್ದಾರೆ. ಇವರ ಕೃಷಿಗೆ ತಂದೆ ಹಾಗೂ ಸಹೋದರರು ಸಾಥ್ ನೀಡುತ್ತಿದ್ದಾರೆ. ಹೀಗಾಗಿ ನಾಲ್ಕು ಹಸು ಇಪ್ಪತ್ತು ಕುರಿಯನ್ನೂ ಸಾಕಣಿಕೆ ಮಾಡುತ್ತಿದ್ದಾರೆ.