ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಾಯಕಾರಿಯಾದ ಸಿಲ್ವರ್ ಮರಗಳು

Published 26 ಜುಲೈ 2024, 14:02 IST
Last Updated 26 ಜುಲೈ 2024, 14:02 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನಲ್ಲಿ ಶುಕ್ರವಾರ ಭಾರಿ ಗಾಳಿಯೊಂದಿಗೆ, ಮಳೆ ಸುರಿದಿದೆ.  ಪಟ್ಟಣ ವ್ಯಾಪ್ತಿಯಲ್ಲಿ 14.10 ಸೆಂ.ಮೀ ಮಳೆ ದಾಖಲಾಗಿದೆ. ಹರಂದೂರು ಗ್ರಾಮದ ಪ್ರಮೀಳಾ ಎಂಬುವರ ಮನೆ ಮೇಲೆ ಮರಬಿದ್ದು ಚಾವಣಿಗೆ ಹಾನಿಯಾಗಿದೆ.  ಅಮ್ಮಡಿಯಲ್ಲಿ ಕಾಫಿ ಎಸ್ಟೇಟ್ ಪಕ್ಕದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಕಾಫಿ ಎಸ್ಟೇಟ್‌ದ ಸಿಲ್ವರ್ ಮರಗಳು ನಿರಂತರವಾಗಿ ರಸ್ತೆಗೆ ಉರುಳುತ್ತಿದ್ದು, ಇಲ್ಲಿ ಸಾಕಷ್ಟು ವಿದ್ಯುತ್ ಕಂಬಗಳೂ ಮುರಿದಿವೆ. ಹೆದ್ದಾರಿ ಪಕ್ಕದಲ್ಲಿ ಸಾಕಷ್ಟು ಮರಗಳು ರಸ್ತೆಗೆ ವಾಲಿ ನಿಂತಿದ್ದು, ಅಪಾಯಕಾರಿಯಾಗಿವೆ. ಸಾರ್ವಜನಿಕರು ಭಯದಿಂದ ಓಡಾಡುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT