ಚಿಕ್ಕಮಗಳೂರು: ವಿಶ್ವ ಹಿಂದು ಪರಿಷತ್, ಬಜರಂಗದಳದಿಂದ ಜರುಗುವ ದತ್ತ ಮಾಲಾ ಅಭಿಯಾನದ ಅಂಗವಾಗಿ ನಗರದ ಕಾಮಧೇನು ಗಣಪತಿ ದೇಗುಲದಲ್ಲಿ ಸೋಮವಾರ ಮಾಲಾಧಾರಣೆ ಕೈಂಕರ್ಯ ನೆರವೇರಿತು.

ಶ್ರೀಗುರುದತ್ತಾತ್ರೇಯ ಸ್ವಾಮಿಗೆ ಪೂಜೆ ನೆರವೇರಿಸಲಾಯಿತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಜರಂಗದಳ ಪ್ರಾಂತಸಹಸಂಚಾಲಕ ರಘುಸಕಲೇಶಪುರ ಸಹಿತ ಹಲವರು ಮಾಲೆ ಧಾರಣೆ ಮಾಡಿದರು. ಸುರೇಶ ಜ.ಪೈ ಅವರ ‘ಇನಾಂ ಶ್ರೀದತ್ತಪೀಠ – ಚಿಕ್ಕಮಗಳೂರು‘ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

‘ಅರ್ಚಕರ ನೇಮಕಕ್ಕೆ ವ್ಯವಸ್ಥಾಪನಾ ಸಮಿತಿ ನಿರ್ಣಯಿಸಲಿದೆ’

‘ವ್ಯವಸ್ಥಾಪನಾ ಸಮಿತಿಯು ಸಭೆ ನಡೆಸಿ ದತ್ತ ಪೀಠಕ್ಕೆ ಹಿಂದೂ ಅರ್ಚಕರ ನೇಮಕ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

‘ತಾತ್ಕಾಲಿಕ ಅರ್ಚಕರ ನೇಮಕ ಮಾಡಿ ಪೂಜೆ ಪ್ರಾರಂಭಿಸಲು ಆತಂಕ ಇಲ್ಲ. ಸಮಿತಿ ನೇಮಕ ಮಾಡಬಹುದು’ ಎಂದು ಪ್ರತಿಪಾದಿಸಿದರು.

‘ಈ ಬಾರಿ ದತ್ತ ಜಯಂತಿಯಲ್ಲಿ ಹಿಂದೂ ಅರ್ಚಕ ಪೂಜೆ ನೆರವೇರಿಸಲಿದ್ದಾರೆ. ಬಾಬಾಬುಡನ್ ದರ್ಗಾದಲ್ಲಿ ಮುಜಾವರ್ ಹಾಗೂ ದತ್ತ ಪೀಠದಲ್ಲಿ ಹಿಂದೂ ಅರ್ಚಕ ಕೈಂಕರ್ಯ ನೆರವೇರಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ ಅವರಿಗೆ ಕುಂಕುಮ, ಕೇಸರಿ ಆಗಲ್ಲ. ಟಿಪ್ಪು, ಟೋಪಿ ಅವರಿಗೆ ಇಷ್ಟ. ಸಿದ್ರಾಮುಲ್ಲಾ ಖಾನ್ ಎಂದು ಕರೆದರೆ ಅವರಿಗೆ ಆನಂದ ಸಂಗತಿ. ಅದು ಅಸಂಸದೀಯ ಅಥವಾ ಬೈಗುಳದ ಪದವಲ್ಲ’ ಎಂದು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.