ಮೂಡಿಗೆರೆ: ತಾಲ್ಲೂಕಿನ ಗೌರೀಕೆರೆ ಗ್ರಾಮದಲ್ಲಿ ಗುರುವಾರ ನಸುಕಿನಲ್ಲಿ ಕಾಡನೆ ಹಿಂಡು ಕಾಫಿ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ.

ಈ ಕಾಡಾನೆ ಹಿಂಡು ಒಂದು ತಿಂಗಳ ಹಿಂದೆ ಇದೇ ಮಾರ್ಗದ ಮೂಲಕ ಸಂಚರಿಸಿ ಸಕಲೇಶಪುರ ಭಾಗಕ್ಕೆ ಹೋಗಿದ್ದವು. ಈಗ ಅದೇ ಮಾರ್ಗದಲ್ಲಿ ವಾಪಸ್ ಬರುತ್ತಿದ್ದು, ಗುರುವಾರ ರಾತ್ರಿ ಗೌರಿಕೆರೆ ಗ್ರಾಮದ ಉದ್ದಯ್ಯ ಎಂಬುವವರ ಕಾಫಿ ತೋಟದಲ್ಲಿ ಬೀಡುಬಿಟ್ಟು, ಫಸಲು ಬಿಟ್ಟಿದ್ದ ಕಾಫಿ ಗಿಡಗಳನ್ನು ತುಳಿದು ನೆಲಸಮಗೊಳಿಸಿವೆ. ತೋಟದಲ್ಲಿದ್ದ ಕಾಳುಮೆಣಸು, ಸಿಲ್ವರ್, ಬಾಳೆ ಗಿಡಗಳನ್ನು ನಾಶಗೊಳಿಸಿವೆ. ನಂದೀಪುರ ಮಾರ್ಗವಾಗಿ ಆಲ್ದೂರು ಭಾಗದತ್ತ ಕಾಡಾನೆಗಳು ಹೋಗಿದ್ದು, ಮಾರ್ಗದುದ್ದಕ್ಕೂ ಸಿಗುವ ಕಾಫಿ ತೋಟ, ಭತ್ತದ ಗದ್ದೆಗಳಲ್ಲಿ ಬೆಳೆ ಹಾನಿ ಮಾಡಿವೆ.

‘ನಂದೀಪುರ, ಮಾಕೋನಹಳ್ಳಿ, ಗೋಣಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನಾಲ್ಕೈದು ತಿಂಗಳಿನಿಂದಲೂ ಕಾಡಾನೆಗಳು ದಾಳಿ ನಡೆಸುತ್ತಿವೆ. ಇದರಿಂದ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಬೆಳೆಗಾರರ ಕಾಫಿ ತೋಟಗಳು ನೆಲಸಮಗೊಂಡಿವೆ. ಕಾಡಾನೆ ದಾಳಿಯ ವಿಷಯ ತಿಳಿದು ಸ್ಥಳಕ್ಕೆ ಬರುವ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕೆಲಸವನ್ನು ಮಾಡುತ್ತಾರೆ. ಅರಣ್ಯಕ್ಕೆ ಹೋಗುವ ಕಾಡಾನೆಗಳು ಮತ್ತೆ ಸುತ್ತಲಿನ ಪ್ರದೇಶಗಳ ಜಮೀನುಗಳಿಗೆ ದಾಳಿ ಮಾಡುತ್ತಿವೆ. ಈ ಬಾರಿ ಹಿಂಡಿನಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳಿದ್ದು, ಹಾನಿಯ ಪ್ರಮಾಣ ಹೆಚ್ಚಾಗಿದೆ. ಕಾಡಾನೆ ದಾಳಿ ತಡೆಯಲು ಶಾಶ್ವತ ಪರಿಹಾರ ರೂಪಿಸಬೇಕು’ ಎಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.