ಚಿಕ್ಕಮಗಳೂರು: ಬೀಟಮ್ಮ ಮತ್ತು ಭುವನೇಶ್ವರಿ ತಂಡದಿಂದ ಬೇರ್ಪಟ್ಟಿರುವ 23 ಆನೆಗಳ ಹಿಂಡು ಈಗ ಸಾರಗೋಡು ಮೀಸಲು ಅರಣ್ಯದ ಕಡೆಗೆ ಪ್ರಯಾಣ ಬೆಳೆಸಿವೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಬಳಿ ಇರುವ ಬೀಟಮ್ಮ–1, ಬೀಟಮ್ಮ–2 ಮತ್ತು ಭುವನೇಶ್ವರಿ ತಂಡದಲ್ಲಿ 50ಕ್ಕೂ ಹೆಚ್ಚು ಆನೆಗಳಿದ್ದವು. ಅವುಗಳಿಂದ ಈಗ 23 ಆನೆಗಳು ಬೇರ್ಪಟ್ಟಿವೆ. ಮೂಡಿಗೆರೆ ಗಡಿ ಮೂಲಕ ಜಿಲ್ಲೆಗೆ ಪ್ರವೇಶ ಪಡೆದಿವೆ.

ಈ ಮೂರು ತಂಡಗಳ ಮೇಲೆ ನಿಗಾ ಇರಿಸಲು ತಲಾ ಒಂದೊಂದು ಆನೆಗೆ ರೇಡಿಯೊ ಕಾಲರ್ ಅಳವಡಿಕೆ ಮಾಡಲಾಗಿತ್ತು. ಆ ಮೂರು ಆನೆಗಳು ಪ್ರತ್ಯೇಕವಾಗಿ ಬಿಕ್ಕೂಡು ಸಮೀಪವೇ ಬೀಡು ಬಿಟ್ಟಿವೆ. ಆದರೆ, ಈ ಮೂರು ತಂಡಗಳಿಂದ ಬೇರ್ಪಟ್ಟಿರುವ 23 ಆನೆಗಳು ಪ್ರತ್ಯೇಕ ತಂಡ ಕಟ್ಟಿಕೊಂಡಿವೆ.

ಚಿಕ್ಕಮಗಳೂರು ಜಿಲ್ಲೆಯತ್ತ ನವೆಂಬರ್ 1ರ ನಂತರ ಪ್ರಯಾಣ ಆರಂಭಿಸಿವೆ. ಚೀಕನಹಳ್ಳಿ ಕಡೆಯಿಂದ ಬಂದಿರುವ ಆನೆಗಳ ತಂಡ ಕಾರ್ಬೈಲ್ನಲ್ಲಿ ಒಂದು ದಿನ ತಂಗಿದ್ದವು. ಅಲ್ಲಿಂದ ಮಾಕೋನಹಳ್ಳಿ ಮಾರ್ಗವಾಗಿ ನಂದಿಪುರಕ್ಕೆ ಬಂದು ಅಲ್ಲಿಯೂ ಒಂದು ದಿನ ತಂಗಿದ್ದವು. ನೊಜ್ಜೆಪೇಟೆ, ಮಡೆನೆರಲು, ಹಳೇ ಆಲ್ದೂರು, ಆಲ್ದೂರು ಹೊಸಹಳ್ಳಿ ದಾಟಿ ತಡುಕೂರು ಭಾಗಕ್ಕೆ ಬಂದು ಗುರುವಾರ ತಂಗಿದ್ದವು. ಶುಕ್ರವಾರ ಸಂಜೆ ತನಕ ಅಲ್ಲಿಯೇ ಇದ್ದು, ರಾತ್ರಿ ಸಂಚರಿಸುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಅವು ಹೊರಟಿರುವ ದಾರಿ ನೋಡಿದರೆ ಒಂದೆರಡು ದಿನಗಳಲ್ಲಿ ಸಾರಗೋಡು ಮೀಸಲು ಅರಣ್ಯ ದಾಟುವ ಸಾಧ್ಯತೆ ಇದೆ. ಸಾರಗೋಡು ಅರಣ್ಯಕ್ಕೆ ತಲುಪಿದರೆ ಸ್ವಲ್ಪ ನಿರಾಳ. ಅಲ್ಲಿಂದಲೂ ಮುಂದೆ ಸಾಗುವ ಪ್ರಯತ್ನ ಮಾಡಿದರೆ ಮುತ್ತೋಡಿ ಕಡೆಗೆ ಸಾಗಿದರೆ ಒಳ್ಳೆಯದು. ಆನೆಗಳ ಮುಂದಿನ ನಡೆ ಕಡೆಗೆ ಗಮನ ಹರಿಸಲಾಗುತ್ತಿದೆ ಎಂದು ಅವರು ಹೇಳಿದರು.

ರೇಡಿಯೊ ಕಾಲರ್ ಇಲ್ಲ

23 ಆನೆಗಳ ಹೊಸ ತಂಡದಲ್ಲಿರುವ ಯಾವ ಕಾಡಾನೆಗೂ ರೇಡಿಯೊ ಕಾಲರ್ ಇಲ್ಲ. ಆದ್ದರಿಂದ ಅವುಗಳ ಚಲನ–ವಲನ ಗಮನಿಸುವುದು ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ರೇಡಿಯೊ ಕಾಲರ್ ಇದ್ದಿದ್ದರೆ ಆನೆಗಳ ಸಂಚಾರವನ್ನು ಕಚೇರಿಯಲ್ಲೇ ಕುಳಿತು ಬೆರಳ ತುದಿಯಲ್ಲೇ ಅಧಿಕಾರಿಗಳು ಗಮನಿಸುತ್ತಿದ್ದರು. ಸ್ಥಳದಲ್ಲಿರುವ ಆನೆ ಕಾರ್ಯಪಡೆ ಸಿಬ್ಬಂದಿಗೆ ಸೂಚನೆ ನೀಡುತ್ತಿದ್ದರು. ಈಗ ಅದು ಸಾಧ್ಯವಾಗುತ್ತಿಲ್ಲ. ಸ್ಥಳೀಯರ ಮಾಹಿತಿ ಆಧರಿಸಿಯೇ ಆನೆಯ ಚಲನವಲನ ಗಮನಿಸಬೇಕಾಗಿದೆ. ಆದರೂ, ಆನೆ ಕಾರ್ಯಪಡೆ ಸಿಬ್ಬಂದಿ ಗಜಪಡೆಯ ಹಿಂದೆ ಬಿದ್ದಿದ್ದಾರೆ. ಆನೆ ಬೀಡು ಬಿಟ್ಟಿರುವ ಕಾಡಿನ ಸುತ್ತಲೂ ಕಾವಲಿದ್ದಾರೆ. ಆನೆ ಸಂಚರಿಸುವ ವೇಳೆ ಸ್ಥಳೀಯರಿಗೆ ತಿಳುವಳಿಕೆ ನೀಡುತ್ತಿದ್ದಾರೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನಾಲ್ಕು ಮರಿಯಾನೆ; ವಿಕ್ರಾಂತ ಬೆಂಗಾವಲು

23 ಆನೆಗಳ ಹಿಂಡಿನಲ್ಲಿ ಇತ್ತೀಚೆಗೆ ಜನಿಸಿರುವ ಒಂದು ಮರಿ ಸೇರಿ ನಾಲ್ಕು ಮರಿಯಾನೆಗಳಿವೆ. ‘ವಿಕ್ರಾಂತ’ ಎಂಬ ಸಲಗ ತಂಡದ ಬೆಂಗಾವಲಾಗಿ ಹೊರಟಿದೆ. ಮರಿಯಾನೆಯನ್ನು ಸಂರಕ್ಷಿಸುವುದು ಗಜಪಡೆಯ ಬಹುದೊಡ್ಡ ಕೆಲಸವಾಗಿದೆ. ‘ವಿಕ್ರಾಂತ ಮದವೇರಿದ ಆನೆ. ಆದ್ದರಿಂದ ಜನರು ಪಟಾಕಿ ಸಿಡಿಸಿ ಆನೆಗಳನ್ನು ಗಾಬರಿಗೊಳಿಸಬಾರದು. ಅರಣ್ಯ ಸಿಬ್ಬಂದಿಯ ಸಲಹೆಗಳನ್ನು ಪಾಲಿಸಬೇಕು’ ಎಂದು ಅಧಿಕಾರಿಗಳು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.