ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯ ಗೌರಸಮುದ್ರ ಮಾರಮ್ಮನ ಜಾತ್ರಾ ಸ್ಥಳ ತುಮಲು ಪ್ರದೇಶದಲ್ಲಿ ಚೆಲ್ಲಿದ್ದ ಹಳಸಿದ ಅನ್ನ ತಿಂದು ಭಾನುವಾರ 17 ಮೇಕೆಗಳು ಸಾವನ್ನಪ್ಪಿದ್ದು, 10 ಮೇಕೆಗಳು ಅಸ್ವಸ್ಥಗೊಂಡಿವೆ.

‘ಕಾವಲು ಪ್ರದೇಶದ ನರಸಿಂಹಪ್ಪ ಅವರ ಮೇಕೆಗಳಾಗಿದ್ದು, ₹ 1.70 ಲಕ್ಷ ನಷ್ಟವಾಗಿದೆ ಎಂದು ಆಂದಾಜಿಸಲಾಗಿದೆ’ ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಬಿ.ರೇವಣ್ಣ ತಿಳಿಸಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಗೌರಸಮುದ್ರ ಪಶು ಆಸ್ಪತ್ರೆಯ ಪಶುವೈದ್ಯಾಧಿಕಾರಿ ಮಣಿಮಾಲಾ, ಅಸ್ವಸ್ಥಗೊಂಡ 10 ಮೇಕೆಗಳ ತಪಾಸಣೆ ನಡೆಸಿ ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ.

‘ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಗೌರಸಮುದ್ರದ ತಮಲು ಪ್ರದೇಶದಲ್ಲಿ ಮಾರಮ್ಮನ ಮರಿ ಪರಿಸೆ ನಡೆದಿತ್ತು. ಆ ದಿನ ನೂರಾರು ಭಕ್ತರು ಊಟ ಮಾಡಿ ಹೆಚ್ಚುವರಿಯಾಗಿದ್ದ ಅನ್ನವನ್ನು ಜಾತ್ರಾ ಸ್ಥಳದಲ್ಲಿ ಬಿಸಾಡಿದ್ದರು. ಆ ಅನ್ನ ಹಳಸಿತ್ತು. ಆ ಅನ್ನ ತಿಂದು 17 ಮೇಕೆಗಳು ಸತ್ತಿವೆ. ಸರ್ಕಾರದ ಅನುಗ್ರಹ ಯೋಜನೆಯಡಿ ಮೃತ ಮೇಕೆಗಳಿಗೆ ತಲಾ ₹ 5,000 ಪರಿಹಾರ ನೀಡಲಾಗುವುದು’ ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.