ಹೊಸದುರ್ಗ: ಇಲ್ಲಿನ ಹಾಲು ರಾಮೇಶ್ವರ ಉತ್ಸವದಲ್ಲಿ ಜನರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಗೀತಕ್ಕೆ ಜನರು ಮಾರು ಹೋದರು.

ಫೆ. 14ರಿಂದ ಆರಂಭವಾಗಿದ್ದ ಹಾಲು ರಾಮೇಶ್ವರ ಉತ್ಸವದಲ್ಲಿ ನಿತ್ಯ ಹಾಡುಗಾರರು ತಮ್ಮ ಸುಮಧುರ ಗಾಯನದ ಮೂಲಕ ಜನರನ್ನು ರಂಜಿಸಿ ದ್ದರು. ಕೊನೆಯ ದಿನವಾದ ಶನಿವಾರ ಸಾವಿರಾರು ಜನರು ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಅರ್ಜುನ್ ಜನ್ಯ ಅವರು ವೇದಿಕೆಯಲ್ಲಿ ಬರುತ್ತಿದ್ದಂತೆ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ‘ಜೈ ಭಜರಂಗಿ’ ಹಾಡಿಗೆ ಹೆಜ್ಜೆ ಹಾಕದವರೇ ಇರಲಿಲ್ಲ. ‘ಅ ಬ್ರದರ್ ಫ್ರಮ್ ಅನದರ್ ಮದರ್’ ಹಾಡಿಗೆ ಯುವಕರು ಶಿಳ್ಳೆ, ಚಪ್ಪಾಳೆಯೊಂದಿಗೆ ಸಂಭ್ರಮಿಸಿದರು. ಸರಿಗಮಪ ಖ್ಯಾತಿಯ ರಜತ್, ಪುರುಷೋತ್ತಮ, ವಿಜೇತ್, ಜಮೀರ್ ಅವರು ಶಿವನ ಕುರಿತು ಹಾಡಿದ ಹಾಡಿಗೆ ಭಕ್ತಿಯೇ ಮನೆ ಮಾಡಿದಂತಿತ್ತು.

‘ವೇದ’ ಚಿತ್ರದ ಜುಂಜಪ್ಪ ಹಾಡನ್ನು ಮೋಹನ್ ಮಾಡುತ್ತಿದ್ದಂತೆ ನೆರೆದಿದ್ದ ಜನರೆಲ್ಲಾ ಕುಣಿದು ಕುಪ್ಪಳಿಸಿದರು. ಸಿಂಚನಾ ದೀಕ್ಷಿತ್ ಅವರು ಪ್ರತಿಯೊಂದು ಹಾಡು ಕೂಡ ವಿಶೇಷವಾಗಿತ್ತು. ಎಲ್ಲರನ್ನು ರಂಜಿಸಿದರು. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಖ್ಯಾತಿಯ ರಾಹುಲ್ ಮತ್ತು ರೋಷಿಣಿ ಅವರ ‘ಸೋಜುಗಾದ ಸೂಜಿ ಮಲ್ಲಿಗೆ’ ಹಾಡಿನ ನೃತ್ಯ ನಿಜಕ್ಕೂ ಶಿವ ಪಾರ್ವತಿ ನೃತ್ಯದಂತಿತ್ತು. ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.