ಚಿಕ್ಕಜಾಜೂರು: ಚಿಕ್ಕಜಾಜೂರಿನ ರೈಲ್ವೆ ನಿಲ್ದಾಣಕ್ಕೆ ಹೋಗಲು ಸುಸಜ್ಜಿತವಾದ ರಸ್ತೆಯನ್ನು ನಿರ್ಮಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಇಲ್ಲಿನ ಮುಖ್ಯ ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆ ಮಣ್ಣಿನ ರಸ್ತೆಯಾಗಿದ್ದು, ಮಳೆಗಾಲದಲ್ಲಿ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ಹೋಗುವುದೇ ದುಸ್ತರವಾಗಿದೆ. ಚಿಕ್ಕಜಾಜೂರು ಜಿಲ್ಲೆಯ ಏಕೈಕ ರೈಲ್ವೆ ಜಂಕ್ಷನ್ ಆಗಿದ್ದು, ನಿತ್ಯ ಹತ್ತಾರು ಲೋಕಲ್ ಹಾಗೂ ಎಕ್ಸ್ಪ್ರೆಸ್ ರೈಲುಗಳು ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಮುಂಬಯಿ, ಚಿತ್ರದುರ್ಗ, ಹೊಸಪೇಟೆ, ಬಳ್ಳಾರಿ, ಚೆನ್ನೈ, ಪಂಡರಾಪುರ ಮೊದಲಾದ ಕಡೆಗಳಿಗೆ ಹೋಗುವ ರೈಲುಗಳು ಇಲ್ಲಿ ನಿಲುಗಡೆಯಾಗುತ್ತವೆ. ಈ ರೈಲುಗಳಲ್ಲಿ ಪ್ರಯಾಣಿಸಲು ಗ್ರಾಮದ ಮತ್ತು ಹೊಳಲ್ಕೆರೆ ತಾಲ್ಲೂಕು ಮತ್ತು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಹಾಗೂ ಪಕ್ಕದ ಚನ್ನಗಿರಿ ತಾಲ್ಲೂಕಿನ ಸಾವಿರಾರು ಪ್ರಯಾಣಿಕರು ಚಿಕ್ಕಜಾಜೂರಿನ ರೈಲು ನಿಲ್ದಾಣಕ್ಕೆ ಬಂದು ರೈಲನ್ನು ಹತ್ತಿ ಪ್ರಯಾಣಿಸಬೇಕಿದೆ.

ಆದರೆ, ದಾವಣಗೆರೆ-ಹೊಳಲ್ಕೆರೆ ಮುಖ್ಯ ರಸ್ತೆಯಿಂದ ರೈಲು ನಿಲ್ದಾಣಕ್ಕೆ ಹೋಗಲು ಮಾತ್ರ ಸರಿಯಾದ ರಸ್ತೆ ಇಲ್ಲ. ಇಲ್ಲಿನ ಪೊಲೀಸ್ ಠಾಣೆಯ ಮುಂಭಾಗದಿಂದ ರಸ್ತೆ ಇದೆ. ಆದರೆ, ಹೊಳಲ್ಕೆರೆ-ದಾವಣಗೆರೆ ಮುಖ್ಯ ರಸ್ತೆಯಲ್ಲಿರುವ ರೈಲು ನಿಲ್ದಾಣಕ್ಕೆ 300-400 ಮೀಟರ್ ದೂರ ಕ್ರಮಿಸಿ ನಿಲ್ದಾಣಕ್ಕೆ ಹೋಗಲು ಮಣ್ಣಿನ ರಸ್ತೆಯನ್ನು ನಿರ್ಮಿಸಿದ್ದಾರೆ. ಇಲಾಖೆಯ ವಾಹನಗಳು, ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಬರುವ ಟ್ಯಾಂಕರ್ಗಳು, ಪ್ರಯಾಣಿಕರನ್ನು ಕರೆತರುವ ಆಟೋ ಮತ್ತಿತರ ವಾಹನಗಳು ಇಲ್ಲಿ ಸಂಚರಿಸುವುದರಿಂದ, ತಗ್ಗು ಗುಂಡಿಗಳಾಗಿವೆ. ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣವಾಗಿ ಕೆಸರಿನ ಗದ್ದೆಯಂತಾಗಿ, ರೈಲಿನಿಂದ ಇಳಿದು ಬರುವ ಹಾಗೂ ರೈಲನ್ನು ಹತ್ತಲು ಹೋಗುವ ಪ್ರಯಾಣಿಕರು ತಮ್ಮ ಲಗೇಜುಗಳನ್ನು ಹಿಡಿದು ನಿಲ್ದಾಣದಿಂದ ಮುಖ್ಯ ರಸ್ತೆಗೆ ಬರುವುದಾಗಲಿ ಅಥವಾ ರೈಲು ಹತ್ತಲು ಹೋಗುವ ಪ್ರಯಾಣಿಕರಿಗಂತೂ ರಸ್ತೆ ನರಕ ದರ್ಶನವನ್ನು ತೋರಿಸುವಂತಿದೆ.

ಆದ್ದರಿಂದ, ರೈಲ್ವೆ ಇಲಾಖೆಯವರು ಪ್ರಯಾಣಿಕರ ಅನುಕೂಲಕ್ಕೆ ಉತ್ತಮ ರಸ್ತೆ ನಿರ್ಮಿಸಿ, ಪ್ರಯಾಣಿಕರಿಗಾಗುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದು ಚಿಕ್ಕಜಾಜೂರು, ಹೊಳಲ್ಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಪ್ರಯಾಣಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.