ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹೈಟೆಕ್ ಕಟ್ಟಡದಂತಿರುವ ತಾಯಿ– ಮಕ್ಕಳ ಆಸ್ಪತ್ರೆಯ ಸ್ಥಿತಿ ‘ಮೇಲೆ ಥಳುಕು ಒಳಗೆಲ್ಲಾ ಹುಳುಕು’ ಎಂಬ ಮಾತಿನಂತಾಗಿದೆ. ಆಸ್ಪತ್ರೆಯ ಬಹುತೇಕ ಕೊಠಡಿಗಳು ಖಾಲಿ ಉಳಿದಿದ್ದು ಗರ್ಭಿಣಿಯರು ಹೆರಿಗೆಗೆ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸುವಂತಾಗಿದೆ.

ಆಸ್ಪತ್ರೆ ಆವರಣದಲ್ಲಿ ಕಿಷ್ಕಿಂದೆಯಂತಿದ್ದ ಹೆರಿಗೆ ವಿಭಾಗವನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಎರಡೂವರೆ ವರ್ಷಗಳ ಹಿಂದೆಯೇ ಹೊಸದಾಗಿ ತಾಯಿ– ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗಿತ್ತು. ಉಪ ಕಾರಾಗೃಹವಿದ್ದ ಜಾಗದಲ್ಲಿ ‘ಜಿ ಪ್ಲಸ್–3’ ಮಹಡಿಯ ಕಟ್ಟಡ ನಿರ್ಮಾಣ ಮಾಡಲಾಗಿತ್ತು. 100 ಹಾಸಿಗೆ ಸಾರ್ಮಥ್ಯದ ಹೆರಿಗೆ ಆಸ್ಪತ್ರೆಯನ್ನು 250 ಹಾಸಿಗೆ ಸಾಮರ್ಥ್ಯಕ್ಕೆ ಏರಿಸುವುದು ಹೊಸ ಕಟ್ಟಡದ ಮುಖ್ಯ ಉದ್ದೇಶವಾಗಿತ್ತು.

ಆದರೆ, ತಾಯಿ– ಮಕ್ಕಳ ಸುಸಜ್ಜಿತ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿದ್ದರೂ ಈಗಲೂ 100 ಹಾಸಿಗೆ ಸಾಮರ್ಥ್ಯದಲ್ಲೇ ಮುಂದವರಿಸುತ್ತಿರುವ ಕಾರಣ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ವರ್ಷಕ್ಕೆ 30,000ಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ. ಆದರೆ, ತಾಯಿ– ಮಕ್ಕಳ ಆಸ್ಪತ್ರೆಯಲ್ಲಿ ಮಾಸಿಕ ಹೆರಿಗೆಗಳ ಸಂಖ್ಯೆ 600 ಮೀರುತ್ತಿಲ್ಲ. ಹೀಗಾಗಿ ಬಹುತೇಕ ಗರ್ಭಿಣಿಯರು ಹೆರಿಗೆಗಾಗಿ ಖಾಸಗಿ ನರ್ಸಿಂಗ್ ಹೋಂಗಳಿಗೆ ತೆರಳುತ್ತಿದ್ದಾರೆ.

ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಕೋವಿಡ್ ಆರಂಭವಾಯಿತು. ಇಡೀ ಕಟ್ಟಡವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಬಳಕೆ ಮಾಡಿಕೊಳ್ಳಲಾಯಿತು. ನಂತರ ಅದನ್ನು ತಾಯಿ– ಮಕ್ಕಳ ಆಸ್ಪತ್ರೆಯನ್ನಾಗಿ ಬಳಸಿಕೊಳ್ಳಲಾಯಿತಾದರೂ ಅದಕ್ಕೆ ಉದ್ಘಾಟನೆ ಭಾಗ್ಯ ಇರಲಿಲ್ಲ. ಲೋಕಸಭಾ ಚುನಾವಣೆ ಆರಂಭಕ್ಕೂ ಮೊದಲು ಆಸ್ಪತ್ರೆಗೆ ಚಾಲನೆ ನೀಡಲಾಯಿತು.

ಆಸ್ಪತ್ರೆ ಹೊಸದಾಗಿ ಉದ್ಘಾಟನೆಯಾಗಿ 6 ತಿಂಗಳಾಗುತ್ತಿದ್ದರೂ ತಾಯಿ– ಮಕ್ಕಳ ಆಸ್ಪತ್ರೆಯನ್ನಾಗಿ ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ತಳ ಮಹಡಿಯಲ್ಲಿ ಹೊರರೋಗಿಗಳ ವಿಭಾಗ, ವೈದ್ಯರ ಕೊಠಡಿಗಳಿವೆ. ಕೆಲ ಕೊಠಡಿಗಳು ಖಾಲಿ ಉಳಿದಿದ್ದು ಸರಿವಾಗಿ ಬಳಕೆಯಾಗಿಲ್ಲ. ಮೊದಲ ಮಹಡಿಯಲ್ಲಿ ಸಾಮಾನ್ಯ ವಾರ್ಡ್, ವಿಶೇಷ ವಾರ್ಡ್ಗಳಿವೆ.

2ನೇ ಮಹಡಿಗೆ ಏರಿದರೆ ಅಲ್ಲಿ ಆಸ್ಪತ್ರೆಯ ಒಂದು ಭಾಗವನ್ನಷ್ಟೇ ಬಳಸಿಕೊಳ್ಳಲಾಗಿದೆ. ಉಳಿದ ಇನ್ನೊಂದು ಭಾಗ ಸಂಪೂರ್ಣ ಖಾಲಿ ಉಳಿದಿದೆ. ಪೀಠೋಪಕರಣಗಳಾಗಲಿ, ಹಾಸಿಗೆಯನ್ನಾಗಲಿ ಹಾಕಿಲ್ಲ. ಕೊಠಡಿಗಳಲ್ಲಿ ಬೆಳಕೂ ಕೂಡ ಇಲ್ಲ ಕಾರಣ ಅಲ್ಲಿ ಸದಾ ಕತ್ತಲೆ ಕವಿದಿರುತ್ತದೆ.

ನರ್ಸಿಂಗ್ ಕಾಲೇಜು:

ತಾಯಿ– ಮಕ್ಕಳ ಆಸ್ಪತ್ರೆಯ 3ನೇ ಮಹಡಿ ಕೂಡ ಸಂಪೂರ್ಣ ಖಾಲಿ ಉಳಿದಿದೆ. ಅಲ್ಲಿಯ 5 ಕೊಠಡಿಗಳನ್ನು ನರ್ಸಿಂಗ್ ಕಾಲೇಜಿಗೆ ತಾತ್ಕಾಲಿಕವಾಗಿ ಬಿಟ್ಟುಕೊಡಲಾಗಿದೆ. ಕಟ್ಟಡವನ್ನು ಸಂಪೂರ್ಣ ತಾಯಿ– ಮಕ್ಕಳ ಆಸ್ಪತ್ರೆಯಾಗಿ ಬಳಸುವ ಉದ್ದೇಶವೇ ವಿಫಲವಾಗಿದ್ದು ರೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಹೆರಿಗೆಗಾಗಿ ಬರುವ ಗರ್ಭಿಣಿಯರನ್ನು ಸಲ್ಲದ ನೆಪ ಹೇಳಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಾರೆ. ಹಲವು ಸಂದರ್ಭಗಳಲ್ಲಿ ಹಾಸಿಗೆ ಇಲ್ಲ ಎಂದೇ ಹೇಳಿ ಕಳುಹಿಸುತ್ತಾರೆ. ತಾಯಿ– ಮಕ್ಕಳ ಆಸ್ಪತ್ರೆಯ 2 ಮಹಡಿಗಳು ಖಾಲಿ ಉಳಿದಿದ್ದರೂ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ’ ಎಂದು ಹೆರಿಗೆಗೆ ಬಂದಿದ್ದ ತಾಯಿಯ ಸಂಬಂಧಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಳ ಹಾಗೂ ಮೊದಲ ಮಹಡಿಯಲ್ಲಿ ಮಾತ್ರ ತಾಯಿ– ಮಕ್ಕಳ ಆಸ್ಪತ್ರೆ ನಡೆಯುತ್ತಿದೆ. ಹೊರಗಡೆಯಿಂದ ಸುಸಜ್ಜಿತ ಆಸ್ಪತ್ರೆಯಂತೆ ಕಂಡರೂ ವಾಸ್ತವವಾಗಿ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಆಧುನಿಕ ಸೌಲಭ್ಯಗಳೂ ದೊರೆಯುತ್ತಿಲ್ಲ ಎಂದು ರೋಗಿಗಳ ಸಂಬಂಧಿಕರು ಆರೋಪಿಸುತ್ತಾರೆ.

‘ಹಿಂದೆ ಒಂದು ಹಾಸಿಗೆಯಲ್ಲಿ ಇಬ್ಬರು ತಾಯಂದಿರನ್ನು ಮಲಗಿಸುತ್ತಿದ್ದರು, ಈ ಕುರಿತ ಸುದ್ದಿ ರಾಜ್ಯದಾದ್ಯಂತ ಆಕ್ರೋಶಕ್ಕೆ ಗುರಿಯಾಗಿತ್ತು. ಇದನ್ನು ಮನಗಂಡು ತಾಯಿ– ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಯಿತು. ಆದರೆ ಕಟ್ಟಡವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಜಿಲ್ಲಾಸ್ಪತ್ರೆ ವಿಫಲವಾಗಿದೆ’ ಎಂದು ಜನಶಕ್ತಿ ಸಂಘಟನೆಯ ಮುಖಂಡ ಶಫಿಉಲ್ಲಾ ಹೇಳಿದರು.

ಸುಸಜ್ಜಿತ ಆಸ್ಪತ್ರೆ ಕಟ್ಟಡದ ಸದ್ಬಳಕೆ ಇಲ್ಲ 2ನೇ, 3ನೇ ಮಹಡಿಯ ಕೊಠಡಿ ಖಾಲಿ ಖಾಲಿ ಮೇಲ್ದರ್ಜೆಗೆ ಏರದ ತಾಯಿ– ಮಕ್ಕಳ ಆಸ್ಪತ್ರೆ

ಕಾಡುತ್ತಿದೆ ಸಿಬ್ಬಂದಿ ಕೊರತೆ ‘ವೈದ್ಯರು ಹಾಗೂ ತಂತ್ರಜ್ಞರ ಕೊರತೆಯಿಂದಾಗಿ ತಾಯಿ– ಮಕ್ಕಳ ಆಸ್ಪತ್ರೆಯ ಮೇಲ್ಮಹಡಿಗಳನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಈಗ ನೇಮಕಾತಿ ಪ್ರಕ್ರಿಯೆ ಮುಗಿಯುತ್ತಿದ್ದು 10 ದಿನಗಳಲ್ಲಿ ಆಸ್ಪತ್ರೆಯನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು‘ ಎಂದು ಜಿಲ್ಲಾ ಸರ್ಜನ್ ಡಾ.ರವೀಂದ್ರ ಹೇಳಿದರು. ‘ಹೆರಿಗೆಯಾದ ಮೇಲೆ ಬಾಣಂತಿಯರು ಆಸ್ಪತ್ರೆಯಿಂದ ಬಿಡುಗಡೆ ಹೊಂದಲು ಹಿಂಜರಿಯುತ್ತಿದ್ದಾರೆ. ಮನೆಗೆ ಹೋದರೆ ಸಂಪ್ರದಾಯದಂತೆ ಹೊರಗೆ ಇರಿಸುತ್ತಾರೆ ಎಂಬ ಭಯವೂ ಅವರನ್ನು ಕಾಡುತ್ತಿದೆ. ಹೀಗಾಗಿ ತಾಯಿ– ಮಕ್ಕಳ ಆಸ್ಪತ್ರೆ ಮೇಲೆ ಹೊರೆಯಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.