ಚಿಕ್ಕಜಾಜೂರು: ಚಿಕ್ಕಜಾಜೂರಿನಿಂದ ಗುಂತಕಲ್ವರೆಗೆ ಇದೇ ಮೊದಲ ಬಾರಿಗೆ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲು ಸಂಚಾರ ಸೋಮವಾರದಿಂದ ಆರಂಭವಾಯಿತು.

ಲೋಕೋ ಇನ್ಸ್ಪೆಕ್ಟರ್ ಏಡುಕುಂಡಲು ಅವರ ಪರಿವೀಕ್ಷಣೆ ನಂತರ ಚಾಲಕರಾದ (ಲೋಕೋ ಪೈಲೆಟ್) ಅನಂತರಾವ್ ಹಾಗೂ ಪ್ರಶಾಂತ್ಕುಮಾರ್ ಅವರು ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಿದರು. ಚಿಕ್ಕಜಾಜೂರು ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಜಯಾನಂದಮೂರ್ತಿ ಹಸಿರು ನಿಶಾನೆ ತೋರಿಸುವ ಮೂಲಕ ಮೊದಲ ವಿದ್ಯುತ್ ಚಾಲಿತ ರೈಲು ಸಂಚಾರಕ್ಕೆ ಚಾಲನೆ ನೀಡಿದರು.

ರೈಲುಗಾಡಿ ಸಂಖ್ಯೆ07585 ಚಿಕ್ಕಜಾಜೂರಿನಿಂದ ಮಧ್ಯಾಹ್ನ 2:05ಕ್ಕೆ ಹೊರಟು ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು, ರಾಯದುರ್ಗ, ಬಳ್ಳಾರಿ ಮಾರ್ಗವಾಗಿ ಸಂಜೆ 7:05 ಕ್ಕೆ ಗುಂತಕಲ್ನ್ನು ತಲುಪಲಿದೆ. ರೈಲುಗಾಡಿ ಸಂಖ್ಯೆ 07586 ಗುಂತಕಲ್ನಿಂದ ಬೆಳಿಗ್ಗೆ 7:40ಕ್ಕೆ ಹೊರಡುವ ರೈಲು ಚಿಕ್ಕಜಾಜೂರಿಗೆ ಮಧ್ಯಾಹ್ನ 1–30ಕ್ಕೆ ಬಂದು ತಲುಪುತ್ತದೆ. ಈ ರೈಲು ಸಂಚಾರ ಪ್ರತಿ ನಿತ್ಯ ಇರುತ್ತದೆ. ಈ ಮಾರ್ಗದಲ್ಲಿನ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಿಕ್ಕಜಾಜೂರು ರೈಲ್ವೆ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಕಾರಣ ಸ್ಥಗಿತಗೊಂಡಿದ್ದ ರೈಲು ಸಂಚಾರ: ಚಿಕ್ಕಜಾಜೂರಿನಿಂದ ಗುಂತಕಲ್ವರೆಗೆ ಡೀಸೆಲ್ ಅಳವಡಿತ ರೈಲು ಸಂಚಾರ ಹಲವು ವರ್ಷಗಳಿಂದ ಇತ್ತು. ಆದರೆ, ಕೊರೊನಾ ಕಾರಣ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈಗ, ಈ ಮಾರ್ಗವನ್ನು ವಿದ್ಯುತ್ ಚಾಲಿತ ಮಾರ್ಗವಾಗಿ ಪರಿವರ್ತಿಸಿದ್ದು, ಹಲವು ತಿಂಗಳುಗಳಿಂದ ಚಿಕ್ಕಜಾಜೂರಿನಿಂದ ಬಳ್ಳಾರಿ ಹಾಗೂ ಗುಂತಕಲ್ವರೆಗೆ ಗೂಡ್ಸ್ ಗಾಡಿಗಳ ಸಂಚಾರ ಇತ್ತು. ಈಗ, ಪ್ರತಿನಿತ್ಯ ಪ್ಯಾಸೆಂಜರ್ ರೈಲು ಸಂಚಾರ ಇರಲಿದೆ ಎಂದು ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಜಯಾನಂದ ಮೂರ್ತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.