ನಾಯಕನಹಟ್ಟಿ: ಮಕ್ಕಳಿಗೆ ಸಮತೋಲಿತ ಆಹಾರ ನೀಡುವುದರಿಂದ ದೈಹಿಕವಾಗಿ ಸದೃಢಗೊಳ್ಳುತ್ತಾರೆ. ಆರೋಗ್ಯ ಚೆನ್ನಾಗಿದ್ದರೆ ಹೆಚ್ಚಿನ ಸಾಧನೆ ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಹೇಳಿದರು.

ಪಟ್ಟಣದ ವಿದ್ಯಾವಿಕಾಸ್ ಶಾಲೆಯಲ್ಲಿ ಮಂಗಳವಾರ ನಡೆದ ನಾಯಕನಹಟ್ಟಿ ಹೋಬಳಿಮಟ್ಟದ ಮುಖ್ಯಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

ಮಕ್ಕಳ ದೈಹಿಕ ಆರೋಗ್ಯಕ್ಕಾಗಿ ಮೊಟ್ಟೆ, ಬಾಳೆಹಣ್ಣು ಇಲ್ಲವೇ ಶೇಂಗಾ ಚಿಕ್ಕಿಯನ್ನು ವಿತರಿಸಲು ಸರ್ಕಾರ ಆದೇಶಿಸಿದೆ. ಸರ್ಕಾರದ ಸುತ್ತೋಲೆಯ ಪ್ರಕಾರವೇ ಮುಖ್ಯಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು. ಪೋಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರ ಸಭೆ ಕರೆದು ತೀರ್ಮಾನಿಸಿ ಮೊಟ್ಟೆ ಅಥವಾ ಬಾಳೆಹಣ್ಣು ಖರೀದಿ ಸಮಿತಿಯನ್ನು ರಚಿಸಿರಿ. ಸಮಿತಿಯ ಅಭಿಪ್ರಾಯದಂತೆ ಮಕ್ಕಳು ಯಾವುದನ್ನು ತಿನ್ನಲು ಇಚ್ಛಿಸುತ್ತಾರೋ ಅದನ್ನೇ ನೀಡಬೇಕು ಎಂದು ಸಲಹೆ ನೀಡಿದರು.

ಪ್ರಧಾನಮಂತ್ರಿ ಪೋಷಣ್ ನಿರ್ಮಾಣ ಯೋಜನೆಯ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ಶಿಕ್ಷಕರ ಸಂಘದ ನಿರ್ದೇಶಕ ಆರ್. ಸದಾಶಿವಯ್ಯ ಮಾತನಾಡಿದರು. ಶಿಕ್ಷಣ ಸಂಯೋಜಕ ಈರಸ್ವಾಮಿ, ಬಿ.ಎಚ್. ತಿಪ್ಪೇರುದ್ರಪ್ಪ, ಪ್ರೌಢಶಾಲಾ ಮುಖ್ಯಶಿಕ್ಷಕರಾದ ಡಿ.ಎಸ್. ಪಾಲಯ್ಯ, ಡಾ.ಆರ್. ಮಂಜುಳ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಗದೀಶ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಕೆ. ಲಿಂಗರಾಜ್, ಆರ್. ಈಶ್ವರಪ್ಪ, ಸಿ. ಹನುಮಂತಪ್ಪ, ಜಿ. ಪಾಲಯ್ಯ, ಜಗನ್ನಾಥ್, ರಮೇಶ್, ಉಮಾ, ರೂಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.