ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: 45 ಕಡೆ ಪೀರಲ ದೇವರುಗಳ ಪ್ರತಿಷ್ಠಾಪನೆ

Published : 15 ಜುಲೈ 2024, 15:07 IST
Last Updated : 15 ಜುಲೈ 2024, 15:07 IST
ಫಾಲೋ ಮಾಡಿ
Comments

ಮೊಳಕಾಲ್ಮುರು: ತಾಲ್ಲೂಕಿನ ವಿವಿದೆಡೆ ಭಾವೈಕ್ಯದ ಹಬ್ಬ ಎಂದು ಬಿಂಬಿತವಾಗಿರುವ ಪೀರಲ ಹಬ್ಬ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.

ಗಡಿಭಾಗದ ಈ ತಾಲ್ಲೂಕಿನಲ್ಲಿ ಮೊದಲಿನಿಂದಲೂ ಪೀರಲ ಹಬ್ಬವು ವೈಶಿಷ್ಟ್ಯ ಪಡೆದುಕೊಂಡಿದೆ. ನೆರೆಯ ಆಂಧ್ರಪ್ರದೇಶದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡುವ ಕಾರಣ ಗಡಿಗ್ರಾಮಗಳಲ್ಲಿ ಹೆಚ್ಚಿನ ಸಂಭ್ರಮ ಮನೆ ಮಾಡಿದೆ.

ಮೊಳಕಾಲ್ಮುರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 18 ಗ್ರಾಮಗಳಲ್ಲಿ, ರಾಂಪುರ ಪೊಲೀಸ್‌ ಠಾಣೆ ವ್ಯಾಪ್ತಿಯ 26 ಗ್ರಾಮಗಳಲ್ಲಿ ಪೀರಲ ದೇವರುಗಳನ್ನು ಪ್ರತಿಷ್ಠಾಪನೆ ಮಾಡುವ ಮಾಹಿತಿ ಇದೆ. ಈಗಾಗಲೇ ದೇವರುಗಳನ್ನು ಹೊರತಂದು ಪೀರಲ ಗುಡಿಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.

ಮಂಗಳವಾರ ಗುಡಿ ಮುಂಭಾಗದ ಅಲ್ಲಾದ ಗುಣಿಯಲ್ಲಿ ಕೆಂಡ ಹಾಕಿ ಬುಧವಾರ ಬೆಳಿಗ್ಗೆ ಮತ್ತು ಗುರುವಾರ ಸಂಜೆ ಕೆಂಡ ಸೇವೆ ನಂತರ ದೇವರುಗಳನ್ನು ನೀರಿಗೆ ಹಾಕುವ ಮೂಲಕ ಹಬ್ಬಕ್ಕೆ ತೆರೆ ಬೀಳಲಿದೆ. ಸಿದ್ದಯ್ಯನಕೋಟೆ, ಭೈರಾಪುರ, ಊಡೇವು ಗ್ರಾಮಗಳಲ್ಲಿ ಗುರುವಾರ ತೆರೆಬೀಳಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದಕ್ಕೆ ಪೂರಕವಾಗಿ ಮೊಳಕಾಲ್ಮುರು ಹಾಗೂ ರಾಂಪುರ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕವಾಗಿ ಶಾಂತಿಸಭೆಗಳನ್ನು ನಡೆಸಲಾಗಿದೆ ಎಂದು ಪಿಎಸ್‌ಐಗಳಾದ ಜಿ. ಪಾಂಡುರಂಗಪ್ಪ ಮತ್ತು ಮಹೇಶ್‌ ಹೊಸಪೇಟ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT