ಚಿಕ್ಕಜಾಜೂರು: ಶಿಥಿಲಾವಸ್ಥೆಯಲ್ಲಿರುವ ಸುಮಾರು 70 ವರ್ಷ ಹಳೆಯದಾದ ಸರ್ಕಾರಿ ಶಾಲೆಗೆ ಆಧುನಿಕ ಸ್ಪರ್ಶ ನೀಡಬೇಕು ಎಂಬ ಕೂಗು ಗ್ರಾಮಸ್ಥರು ಹಾಗೂ ಎಸ್ಡಿಎಂಸಿ ಸದಸ್ಯರಿಂದ ಕೇಳಿಬಂದಿದೆ.

ಸಮೀಪದ ಉಡೊಗೆರೆ ಗ್ರಾಮದಲ್ಲಿ 1949–50ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದನ್ನು ಆಗಿನ ಸರ್ಕಾರ ಆರಂಭಿಸಿತು. ಆರಂಭದ ದಿನಗಳಲ್ಲಿ ತರಗತಿ ನಡೆಸಲು ಸ್ವಂತ ಕಟ್ಟಡವಿಲ್ಲದಿದ್ದರಿಂದ ಗ್ರಾಮದ ದೇವಸ್ಥಾನದಲ್ಲಿಯೇ ಶಿಕ್ಷಕರು
ಗ್ರಾಮದ ಮಕ್ಕಳಿಗೆ ಪಾಠವನ್ನು ಆರಂಭಿಸಿದರು. ಒಂದು ವರ್ಷದ ನಂತರದಲ್ಲಿ ಕೆಂಪು ಹೆಂಚಿನ ಚಾವಣಿ ಹೊಂದಿದ ಎರಡು ಕೊಠಡಿಗಳ ಕಟ್ಟಡವನ್ನು ಸರ್ಕಾರ ನಿರ್ಮಿಸಿಕೊಟ್ಟಿತು. ಇಂದಿಗೂ ಇದರಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಈ ಎರಡೂ ಕೊಠಡಿಗಳು ಮಳೆ ಬಂದರೆ ಸೋರುತ್ತವೆ. ಕಿಟಕಿಗಳಿಗೆ ಬಾಗಿಲುಗಳೂ ಸರಿಯಾಗಿ ಇಲ್ಲ. ಮಳೆ ಬಂದಾಗ ಸೋರುತ್ತದೆ. ತರಗತಿಗಳಲ್ಲಿ ನೀರು ನಿಲ್ಲುತ್ತದೆ. ಮಕ್ಕಳು ಕುಳಿತುಕೊಳ್ಳಲೂ ಆಗುವುದಿಲ್ಲ ಮತ್ತು ಶಿಕ್ಷಕರು ಪಾಠ ಮಾಡುವುದೂ ಕಷ್ಟವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಹೊಸ ಕೊಠಡಿ ನಿರ್ಮಾಣ: 2004 ಮತ್ತು 2005ರಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರಿಂದ 2006-07ನೇ ಸಾಲಿನಲ್ಲಿ ಒಂದು ಕೊಠಡಿಯನ್ನು ಇಲಾಖೆ ವತಿಯಿಂದ ಕಟ್ಟಿಸಿ ಕೊಡಲಾಗಿದೆ. ಆದರೆ, ಹೊಸ ಕಟ್ಟಡದಲ್ಲಿ ಒಂದರಿಂದ ಮೂರನೇ ತರಗತಿವರೆಗೆ ಪಾಠಗಳು ನಡೆಯುತ್ತಿವೆ. ಹಳೆಯ ಕಟ್ಟಡದಲ್ಲಿ ಒಂದರಲ್ಲಿ ನಾಲ್ಕು ಮತ್ತು ಐದನೇ ತರಗತಿಗಳು ನಡೆಯುತ್ತಿದ್ದರೆ, ಮತ್ತೊಂದರಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಕಚೇರಿಯನ್ನು ಮಾಡಿಕೊಳ್ಳಲಾಗಿದೆ. ಸದ್ಯ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ಒಟ್ಟು 33 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಒಬ್ಬರು ಮುಖ್ಯಶಿಕ್ಷಕರು ಹಾಗೂ ಒಬ್ಬ ಸಹ ಶಿಕ್ಷಕ ಇದ್ದಾರೆ. ಪಾಠ ಪ್ರವಚನ ಚೆನ್ನಾಗಿ ನಡೆಯುತ್ತಿದೆ ಎನ್ನುತ್ತಾರೆ ಎಸ್ಡಿಎಂಸಿ ಅದ್ಯಕ್ಷ ಎಚ್. ಶಿವಣ್ಣ.

ಹೊಸ ಕೊಠಡಿ ನಿರ್ಮಾಣ ಭರವಸೆ: ಈಚೆಗೆ ಶಾಸಕರು ಖಾಸಗಿ ಕಾರ್ಯಕ್ರಮದ ನಿಮಿತ್ತ ಗ್ರಾಮಕ್ಕೆ ಬಂದಿದ್ದಾಗ, ಗ್ರಾಮಸ್ಥರು ಶಾಲೆಯ ಕಟ್ಟಡದ ಸ್ಥಿತಿಯನ್ನು ಗಮನಕ್ಕೆ ತಂದಿದ್ದರು. ಹೊಸ ಕಟ್ಟಡವನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು.

ಅದಕ್ಕೆ ಶಾಸಕರು, ಈಗಿರುವ ಹಳೆಯ ಕೊಠಡಿಗಳನ್ನು ಕೆಡವಿ, ಎರಡು ಕೊಠಡಿಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ, ಮಳೆಗಾಲ ಆರಂಭವಾಗುವ ಮುನ್ನ ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಟ್ಟರೆ ಒಳಿತಾಗುವುದು ಎಂದು ಎಸ್ಡಿಎಂಸಿ ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ಮಂಜಪ್ಪ, ನಾಗರಾಜ್, ಸರಸ್ವತಿ, ರೂಪಾ, ದೀಪಾ ಶಾಸಕರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.