ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: ತುಂತುರು ಮಳೆ

ಫಾಲೋ ಮಾಡಿ
Comments

ಮೊಳಕಾಲ್ಮುರು:ವಾಯುಭಾರ ಕುಸಿತ ಪರಿಣಾಮ ಶನಿವಾರ ತಾಲ್ಲೂಕಿನಾದ್ಯಂತ ಜಿಟಿಜಿಟಿ ಮಳೆಯಾಯಿತು. ಜನರು ಮನೆಯಿಂದ ಹೊರಬರಲಿಲ್ಲ.

ವಾತಾವರಣ ತೀವ್ರ ತಂಪಾಗಿದ್ದು, ಚಳಿಗಾಳಿ ಬೀಸುತ್ತಿದೆ.ಶುಕ್ರವಾರ ರಾತ್ರಿಯಿಂದಲೇ ತುಂತುರು ಮಳೆ ಆರಂಭವಾಗಿತ್ತು. ಶನಿವಾರ ಬೆಳಿಗ್ಗೆ ಹೆಚ್ಚಿದ ಮಳೆ ಮಧ್ಯಾಹ್ನದ ನಂತರ ಜೋರಾಯಿತು. ರಾತ್ರಿಯವರೆಗೂ ಮಳೆಯಾಯಿತು.

ತಾಲ್ಲೂಕಿನಾದ್ಯಂತ ಮುಂಗಾರುಹಂಗಾಮಿನ ಶೇಂಗಾ ಕಟಾವು ನಡೆದಿದ್ದು, ಬಳ್ಳಿಯನ್ನು ಮನೆ ಮುಂಭಾಗ, ಕಣದಲ್ಲಿ ಹಾಕಲಾಗಿದೆ. ಮಳೆಯಿಂದ ಬಳ್ಳಿ,ಕಾಯಿಯನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಸಲ್ಪ ನೆನೆದರೂ ಕಾಯಿ, ಬಳ್ಳಿ ಕಪ್ಪಾಗುವ ಆತಂಕ ಎದುರಾಗಿದೆ ಎಂದು ರೈತ ತಿಪ್ಪೇಸ್ವಾಮಿಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT