ಚಳ್ಳಕೆರೆ: ಬೇಸಿಗೆ ಬಿರು ಬಿಸಿಲು ಹಾಗೂ ನೀರಿನ ಕೊರತೆಯಿಂದ ನಗರದ ಚಿತ್ರದುರ್ಗ ರಸ್ತೆ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಒಣಗುತ್ತಿದ್ದ ನೂರಾರು ಗಿಡ–ಮರಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಅನುದಾನದಲ್ಲಿ ಪ್ರಾಂಶುಪಾಲ ಪ್ರೊ.ಬಿ.ಎಸ್. ಮಂಜುನಾಥ್ ಗುರುವಾರ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದರು.

ಸಾಮಾಜಿಕ ವಲಯ ಅರಣ್ಯ ಇಲಾಖೆ ಮತ್ತು ಎನ್‍ಎಸ್‍ಎಸ್, ರೆಡ್‌ಕ್ರಾಸ್, ರೋವರ್ಸ್ ರೇಂಜರ್ಸ್ ಘಟಕದಿಂದ ಹೊಂಗೆ, ಬೇವು, ತ್ಯಾಗ, ಬೀಟೆ, ಜೀವೆ, ಆಲ, ಅರಳಿ ಸೇರಿ ಒಟ್ಟು ಮೂರು ಸಾವಿರಕ್ಕೂ ಹೆಚ್ಚು ನಾಟಿ ಮಾಡಿದ ಗಿಡಗಳ ರಕ್ಷಣೆಗೆ ಕಳ್ಳೆ ಕಟ್ಟಿ, 10–15 ವರ್ಷಗಳ ವರೆಗೆ ನೀರು ನಿರ್ವಹಣೆ ಮೂಲಕ ಕಾಲೇಜು ಆವರಣದಲ್ಲಿ ಬೆಳೆಸಲಾಗಿದೆ.

‘ಬಿಸಿಲಿಗೆ ಒಣಗುತ್ತಿರುವ ಗಿಡ– ಮರಗಳನ್ನು ಉಳಿಸಿಕೊಳ್ಳಲು ಹರಸಹಾಸ ಪಡುವಂತಾಗಿದೆ. 2– 3 ತಿಂಗಳಿಂದ ನೂರಾರು ಟ್ಯಾಂಕರ್ ಮೂಲಕ ಗಿಡ– ಮರಗಳಿಗೆ ನೀರು ಉಣಿಸುತ್ತಿದ್ದೇವೆ. ಮಳೆ ಬೀಳುವವರೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸಹಕಾರ ನೀಡಬೇಕು’ ಎಂದು ಸಂಘ ಸಂಸ್ಥೆ ಹಾಗೂ ಪರಿಸರ ಆಸಕ್ತರಲ್ಲಿ ಪ್ರಾಂಶುಪಾಲರು ಮನವಿ ಮಾಡಿದ್ದಾರೆ.

ಅಧೀಕ್ಷಕ ಈ.ವಿನೇಶ್, ಸಹಾಯಕ ಹನುಮಂತ, ಗಿರಿಜಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.