ಬೀಗ ಹಾಕಿರುವ ಸಸಿಹಿತ್ಲು ಬೀಚ್‌ನಲ್ಲಿರುವ ಶೌಚಾಲಯ– ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಸಸಿಹಿತ್ಲು ಬೀಚ್ ಸೌಂದರ್ಯಕ್ಕೆ ಧಕ್ಕೆ ತರುವ ತ್ಯಾಜ್ಯ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಸಸಿಹಿತ್ಲು ಬೀಚ್‌ನಲ್ಲಿ ಸರ್ಫರ್‌ಗಳು ತಾಲೀಮು ನಡೆಸುತ್ತಿರುವುದು– ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ತಣ್ಣೀರುಬಾವಿ ಬೀಚ್‌ನಲ್ಲಿ ತಲೆಯೆತ್ತಿರುವ ಬಿದಿರು ಮನೆಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ತಣ್ಣೀರು ಬಾವಿ ಬೀಚ್‌ನಲ್ಲಿ ಹುಲ್ಲಿನ ಕೊಡೆಗಳ ಕೆಳಗೆ ವಿರಾಮ ಕುರ್ಚಿಗಳು ಕುಳಿತು ಪ್ರವಾಸಿಗರು ಸಮುದ್ರದ ಸೊಬಗನ್ನು ವೀಕ್ಷಿಸಬಹುದು
– ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಸಸಿಹಿತ್ಲು ಬೀಚ್‌ನಲ್ಲಿ ವಸ್ತ್ರ ಬದಲಾಯಿಸುವ ಕೊಠಡಿ ಶೌಚಾಲಯದಂತಹ ಕನಿಷ್ಠ ಸೌಲಭ್ಯ ಕೊಟ್ಟರೆ ಸಾಕು ಹೆಚ್ಚೇನೂ ನಿರೀಕ್ಷೆ ಇಲ್ಲ.
ನೇಹಾ ಸರ್ಫರ್ಮೀನಾಕ್ಷಿ ಮುಂಬೈಯಿಂದ ಪ್ರವಾಸಕ್ಕೆ ಬಂದಿದ್ದ ಯುವತಿ
ಸಸಿಹಿತ್ಲು ಬೀಚ್ ಪ್ರಶಾಂತವಾಗಿದೆ. ಮುಂಬೈ ಬೀಚ್‌ಗಳಿಗೆ ಹೋಲಿಸಿದರೆ ಸ್ವಚ್ಛತೆಯ ದೃಷ್ಟಿಯಿಂದಲೂ ಉತ್ತಮವಾಗಿದೆ. ಇಷ್ಟು ಸುಂದರ ಸ್ಥಳವನ್ನು ಅದ್ಭುತವಾಗಿ ರೂಪಿಸಬಹುದಿತ್ತು.
ಮೀನಾಕ್ಷಿ ಮುಂಬೈಯಿಂದ ಪ್ರವಾಸಕ್ಕೆ ಬಂದಿದ್ದ ಯುವತಿಆನಂದ ಬಾಕಳ ಸ್ಪೀಡ್ ಬೋಟ್ ಚಾಲಕ
ಪಣಂಬೂರು ಬೀಚ್‌ನಲ್ಲಿ ವೈವಿಧ್ಯ ವಾಟರ್ ಗೇಮ್ಸ್‌ಗಳಿವೆ. ಹೀಗಾಗಿ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಆನಂದ ಬಾಕಳ ಸ್ಪೀಡ್ ಬೋಟ್ ಡ್ರೈವರ್ತಣ್ಣೀರುಬಾವಿ ಬೀಚ್‌ಗೆ ಬಂದಾಗ ಗೋವಾಕ್ಕೆ ಹೋದಷ್ಟೇ ರೋಮಾಂಚನವಾಯಿತು. ಸುಂದರವಾಗಿ ಸೃಷ್ಟಿಸಿದ ಬೀಚ್ ಅನ್ನು ಇದೇ ರೀತಿ ಉಳಿಸಿಕೊಳ್ಳುವುದು ಮುಖ್ಯ. ಅನತಿ ದೂರದಲ್ಲಿರುವ ಪಾರ್ಕ್ ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ.
ರಾಜು ಉದ್ಯೋಗಿ‘ನಿರಂತರ ಚಟುವಟಿಕೆ; ಪ್ರಚಾರಕ್ಕೆ ಸಹಕಾರಿ’
ಕಡಲ ತೀರದಲ್ಲಿ ನಿರಂತರ ಚಟುವಟಿಕೆಗಳು ನಡೆಯುತ್ತಿದ್ದರೆ ಸಹಜವಾಗಿ ಆ ಪ್ರದೇಶ ಆನ್‌ಲೈನ್ ಸರ್ಚ್‌ನಲ್ಲಿ ಮೊದಲು ಲಭ್ಯವಾಗುತ್ತದೆ. ಅಲ್ಲಿಗೆ ಬರುವ ಪ್ರವಾಸಿಗರು ಚಿತ್ರಗಳು ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಆ ಪ್ರದೇಶದ ಹೆಸರು ಆನ್‌ಲೈನ್‌ನಲ್ಲಿ ಸದಾ ಚಾಲ್ತಿಯಲ್ಲಿರುತ್ತದೆ. ಕೋವಿಡ್ ನಂತರ ಕಡಲ ತೀರದಲ್ಲಿ ನಡೆಯುವ ಉತ್ಸವಗಳು ಗಣನೀಯವಾಗಿ ಇಳಿಕೆಯಾಗಿವೆ. ಬೀಚ್ ಫೆಸ್ಟ್ ಫುಡ್ ಫೆಸ್ಟ್ ಗಾಳಿಪಟ ಉತ್ಸವ ಇಂತಹ ಹತ್ತಾರು ಚಟುವಟಿಕೆಗಳು ನಡೆಯುತ್ತಿರಬೇಕು ಎನ್ನುತ್ತಾರೆ ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಯತೀಶ್ ಬೈಕಂಪಾಡಿ. ಚಟುವಟಿಕೆ ಆಧಾರಿತ ಪ್ರಚಾರ ಹೆಚ್ಚು ಪರಿಣಾಮಕಾರಿ. ಹೀಗಾಗಿ ಸಮುದ್ರ ಕಿನಾರೆಗಳಲ್ಲಿ ನಡೆಯುವ ಕಾರ್ಯಕ್ರಮಗಳು ಬ್ರ್ಯಾಂಡ್ ಸೃಷ್ಟಿಸಲು ಸಹಕಾರಿಯಾಗುತ್ತವೆ. ಜೊತೆಗೆ ನೈಟ್ ಸಫಾರಿ ಬೆಳದಿಂಗಳ ಊಟದಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇವೆಲ್ಲಕ್ಕೂ ಅವಕಾಶವಾಗಲು ಮುಖ್ಯವಾಗಿ ಬೆಳಕಿನ ವ್ಯವಸ್ಥೆ ಬೇಕಾಗುತ್ತದೆ. ರಾತ್ರಿ ನಿರಂತರ ವಿದ್ಯುತ್ ಅನ್ನು ಆಡಳಿತವೇ ಒದಗಿಸುವಂತಾಗಬೇಕು. ಕಡಲತೀರಗಳಲ್ಲಿ ಉತ್ಪತ್ತಿಯಾಗುವ ಕಸ ದೈನಂದಿನ ನೆಲೆಯಲ್ಲಿ ನಿರ್ವಹಣೆಯಾದರೆ ಸ್ವಚ್ಛ ಕಿನಾರೆ ಕಲ್ಪನೆ ಸಾಕಾರವಾಗುತ್ತದೆ ಎಂಬುದು ಅವರ ಸಲಹೆ. ಕೆನರಾ ಚೇಂಬರ್ ಆಫ್ ಕಾಮರ್ಸ್ ‘ಎಲಿವೇಟ್ ಮಂಗಳೂರು’ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಇದರ ಮೊದಲ ಆದ್ಯತೆ ನಿಗದಿತ ಉದ್ಯಮಗಳ ಅವಧಿ ವಿಸ್ತರಣೆ ಮಾಡುವುದಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.