ಮೂಲ್ಕಿ: ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟ ಅ.ಗೌ.ಕಿನ್ನಿಗೋಳಿ ಅವರ ಸಾಹಿತ್ಯ ಹೆಚ್ಚು ಪ್ರಚಾರಕ್ಕೆ ಬಂದು ಎಲ್ಲರೂ ಓದುವಂತಾಗಬೇಕು. ನೂರು ಪುಸ್ತಕಗಳನ್ನು ಬರೆದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿರುವ ಬಿ.ಜನಾರ್ದನ ಭಟ್ ಅವರಿಗೆ ಸರ್ಕಾರ ಹಾಗೂ ಸಾರ್ವಜನಿಕ ವಲಯದಿಂದ ಹೆಚ್ಚಿನ ಗೌರವ ಸಿಗುವಂತಾಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ನ ಮೂಲ್ಕಿ ತಾಲ್ಲೂಕು ಘಟಕದ ಸಂಯೋಜನೆಯಲ್ಲಿ ಕಿನ್ನಿಗೋಳಿಯಲ್ಲಿ ಸಾಹಿತಿ ಅ.ಗೌ.ಕಿನ್ನಿಗೋಳಿ ಅವರ ಶತಮಾನೋತ್ಸವ ಆಚರಣೆ ಹಾಗೂ ಸಾಹಿತಿ ಬಿ.ಜನಾರ್ದನ ಭಟ್ಟ ಅವರ 99, 100, 101ನೇ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಜನಾರ್ದನ ಭಟ್ಟ ಅವರ 99ನೇ ಕೃತಿ ಕಪ್ಪೆ ಹಿಡಿಯುವವನು ಕಥಾ ಸಂಕಲನವನ್ನು ಸಾಹಿತಿ, ಮೂಡುಬಿದಿರೆ ಬಿ.ರಾಮಚಂದ್ರ ಆಚಾರ್ಯ, 100ನೇ ಕೃತಿ ಕನ್ನಡ ಕಾದಂಬರಿ ಮಾಲೆಯನ್ನು ಹರಿಕೃಷ್ಣ ಪುನರೂರು, 101ನೇ ಕೃತಿ ಹೊಸನೋಟಗಳ ಸಮಾಜ ವಿಮರ್ಶಕ ಅ.ಗೌ.ಕಿನ್ನಿಗೋಳಿ ಕೃತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ..ಶ್ರೀನಾಥ್ ಬಿಡುಗಡೆ ಮಾಡಿದರು.

ಅ.ಗೌ.ಕಿನ್ನಿಗೋಳಿ ಅವರ ಸಂಸ್ಮರಣೆಯನ್ನು ಜನಾರ್ದನ ಭಟ್ ನಡೆಸಿದರು.

ಜಯಂತಿ, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಸುಧಾಕರ ಶೆಟ್ಟಿ, ಕಸಾಪ ಮೂಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಮಿಥುನ ಕೊಡೆತ್ತೂರು ಭಾಗವಹಿಸಿದ್ದರು.

ಬಾಲಕೃಷ್ಣ ಉಡುಪ, ಪಾಂಡುರಂಗ ಭಟ್ ಕಟೀಲು, ಆಶ್ವೀಜಾ ಉಡುಪ, ಅಚ್ಯುತ ಗೌಡರ ಕಾವ್ಯಗಾಯನ ಮಾಡಿದರು. ಕಸಾಪ ಕಾರ್ಯದರ್ಶಿ ಜೊಸ್ಸಿ ಪಿಂಟೊ ಸ್ವಾಗತಿಸಿದರು. ಪ್ರಕಾಶ್ ಆಚಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.