ಮಂಗಳೂರು: ‘ರ್ಯಾಂಕ್ ಬರುವ ನಿರೀಕ್ಷೆ ಇತ್ತು. ಆದರೆ, 2ನೇ ರ್ಯಾಂಕ್ ಬರಬಹುದೆಂದು ಊಹಿಸಿರಲಿಲ್ಲ’ ಎಂದು ರೀತಮ್ ಬಿ. ಪ್ರತಿಕ್ರಿಯಿಸಿದರು.

ಬಿ.ಎಸ್ಸಿ (ಕೃಷಿ)ಯಲ್ಲಿ 2ನೇ ರ್ಯಾಂಕ್, ನಿಸರ್ಗ ಚಿಕಿತ್ಸೆ ಮತ್ತು ಯೋಗ ವಿಜ್ಞಾನ, ಪಶು ವಿಜ್ಞಾನ ಮತ್ತು ‘ಬಿ’ ಫಾರ್ಮಾ ವಿಭಾಗದಲ್ಲಿ 3ನೇ ರ್ಯಾಂಕ್ ಪಡೆದಿರುವ ರೀತಮ್, ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿ. ಅವರು ಕೋಲಾರದಲ್ಲಿ ರೇಡಿಯಾಲಜಿಸ್ಟ್ ಆಗಿರುವ ಡಾ. ಬಯ್ಯಪ್ಪರೆಡ್ಡಿ ಮತ್ತು ಭಾರತಿ ದಂಪತಿ ಪುತ್ರ.

‘ಕೋವಿಡ್–19 ಕಾರಣಕ್ಕೆ ಆನ್ಲೈನ್ ಕೋಚಿಂಗ್ ಪಡೆಯುತ್ತಿದ್ದೆ. ಕಾಲೇಜಿನಲ್ಲಿ ನಿರಂತರವಾಗಿ ನಡೆಸುತ್ತಿದ್ದ ಅಣಕು ಪರೀಕ್ಷೆ ನೆರವಾಯಿತು. ದಿನಕ್ಕೆ 8–10 ತಾಸು ಅಭ್ಯಾಸ ಮಾಡುತ್ತಿದ್ದೆ. ನೀಟ್ ಪರೀಕ್ಷೆ ಬರೆದಿದ್ದು, ಅದರಲ್ಲೂ ಒಳ್ಳೆಯ ರ್ಯಾಂಕ್ ಬರುವ ನಿರೀಕ್ಷೆ ಇದೆ. ವೈದ್ಯಕೀಯ ಶಿಕ್ಷಣ ಓದುವ ಆಸಕ್ತಿ ಇದೆ. ಸಾಧನೆ ಮಾಡಲು ಬಯಸುವವರು ಪ್ರಥಮ ಪಿಯುಸಿಯಿಂದಲೇ ಕಠಿಣ ಅಭ್ಯಾಸ ಆರಂಭಿಸಬೇಕು’ ಎಂಬುದು ರೀತಮ್ ಸಲಹೆ.

ಇದನ್ನೂ ಓದಿ:CET Results | ಸಿಇಟಿ ಫಲಿತಾಂಶ ಪ್ರಕಟ: ಮೈಸೂರಿನ ಮೇಘನ್ ಎಚ್.ಕೆ. ಪ್ರಥಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.