ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ಸೋಮವಾರವೂ ಭಾರಿ ಜನಸಂದಣಿ ಕಂಡು ಬಂತು.

ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದ ಮಂಜುನಾಥ ದೇವಸ್ಥಾನ, ಕಟೀಲಿನ ದುರ್ಗಾಪರಮೇಶ್ವರಿ ದೇವಸ್ಥಾನ, ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಕದ್ರಿ ಮಂಜುನಾಥ, ಉಡುಪಿಯ ಶ್ರೀಕೃಷ್ಣ ದೇವಸ್ಥಾನ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ, ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಸ್ಥಾನಗಳು ಭಕ್ತರಿಂದ ಗಿಜಿಗುಡುತ್ತಿದ್ದವು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಲಕ್ಷಕ್ಕೂ ಅಧಿಕ ಮಂದಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಷಷ್ಠಿ ಜಾತ್ರೆಯ ದಿನಕ್ಕಿಂತಲೂ ಹೆಚ್ಚು ಪ್ರವಾಸಿಗರಿದ್ದರು. ಭಕ್ತರ ದಟ್ಟಣೆ ವಿಪರೀತ ಜಾಸ್ತಿಯಾಗಿದ್ದರಿಂದ ದೇವಳದ ಪ್ರವೇಶ ದ್ವಾರಗಳನ್ನು ಕೆಲ ಕಾಲ ಮುಚ್ಚಬೇಕಾದ ಅನಿವಾರ್ಯ ಎದುರಾಯಿತು. ದೇವಸ್ಥಾನದ ಹೊರಾಂಗಣವನ್ನು ಪ್ರವೇಶಿಸುವುದಕ್ಕೂ ಭಕ್ತರು ಪ್ರಯಾಸ ಪಡಬೇಕಾಯಿತು. ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಮುಂಜಾನೆಯೇ ಭಕ್ತರು ಕಿಕ್ಕಿರಿದು ಸೇರಿದ್ದರು. ಭಾನುವಾರ ರಾತ್ರಿ ಬಂದಿದ್ದ ಕೆಲ ಪ್ರವಾಸಿಗರು ದೇವಸ್ಥಾನದ ರಥಬೀದಿಯಲ್ಲೇ ಮಲಗಿದ್ದರು.

ಧರ್ಮಸ್ಥಳದ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆ 5 ಗಂಟೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ದೇವರ ದರ್ಶನಕ್ಕಾಗಿ ಭಕ್ತರು ತಾಸುಗಟ್ಟಲೆ ಕಾಯಬೇಕಾಯಿತು.

ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ, ಮಲ್ಪೆ, ಕಾಪು, ಪಡುಬಿದ್ರಿ, ಮರವಂತೆ ಬೀಚ್‌ಗಳಿಗೂ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದರು.

ಹೋಟೆಲ್, ಹೋಮ್ ಸ್ಟೇ ಭರ್ತಿ: ಬಹುತೇಕ ಹೋಟೆಲ್ ಹಾಗೂ ಹೋಮ್ ಸ್ಟೇಗಳಲ್ಲಿ ಈಗ ಕೊಠಡಿಗಳು ಬಾಡಿಗೆಗೆ ಸಿಗುತ್ತಿಲ್ಲ. ಕೆಲವು ಹೋಟೆಲ್ ಹಾಗೂ ಹೋಂ ಸ್ಟೇಗಳು ಬಾಡಿಗೆ ದರವನ್ನೂ ಎರಡು–ಮೂರು ಪಟ್ಟು ಹೆಚ್ಚಿಸಿವೆ. ಬಹುತೇಕ ದೇವಸ್ಥಾನಗಳ ಯಾತ್ರಿನಿವಾಸ ಹಾಗೂ ವಸತಿಗೃಹಗಳಲ್ಲಿ ಬಾಡಿಗೆ ಕೊಠಡಿಗಳು ಭರ್ತಿಯಾಗಿವೆ.

ಪ್ರವಾಸ ಅರ್ಧದಲ್ಲೇ ಮೊಟಕು: ಲಾಡ್ಜ್‌ಗಳಲ್ಲಿ ಬಾಡಿಗೆ ಕೊಠಡಿಯ ದುಬಾರಿ ದರ ಕೇಳಿ ಪ್ರವಾಸಿಗರು ಕಂಗಾಲಾಗಿದ್ದಾರೆ. ಐದಾರು ದಿನಗಳ ಪ್ರವಾಸದ ಯೋಜನೆ ಹಾಕಿಕೊಂಡು ಬಂದ ಕೆಲವರು ವಸತಿ ವ್ಯವಸ್ಥೆ ಆಗದ ಕಾರಣ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಮರಳುತ್ತಿದ್ದಾರೆ.

ಮಂಗಳೂರು–ಬೆಂಗಳೂರು ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಕಾರುಗಳು ಸಾಲುಗಟ್ಟಿ ಸಾಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.