ಮಂಗಳೂರು: ‘ಧರ್ಮದ ಮೂಲ ಎಲ್ಲಿಯೂ ಸಿಗುವುದಿಲ್ಲ. ದೈವ, ಭೂತದ ಬಗ್ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ನಂಬಿಕೆ ಇದೆ. ಈ ಬಗ್ಗೆ ವಿವಾದ ಸೃಷ್ಟಿಸುವ ಅಗತ್ಯವಿಲ್ಲ‘ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.

ನಗರದಲ್ಲಿ ಶುಕ್ರವಾರ ರಾತ್ರಿ ತಮ್ಮ ಕುಟುಂಬದವರೊಂದಿಗೆ ಕಾಂತಾರ ಸಿನಿಮಾ ವೀಕ್ಷಿಸಿದ ನಂತರ ಅವರು ಮಾತನಾಡಿದರು.

‘ದೈವವು ಹಿಂದೂ ಧರ್ಮದ ಆಚರಣೆ ಅಲ್ಲ‘ ಎಂಬ ನಟ ಚೇತನ್ ಅವರ ಹೇಳಿಕೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಧರ್ಮದ ಭಾಗ ಹೌದೋ ಅಲ್ಲವೋ ನನಗೆ ಗೊತ್ತಿಲ್ಲ. ನಮ್ಮ ಜಿಲ್ಲೆಯ ಮೂಲಸ್ವಭಾವ ಅರಿಯದೇ ಮಾತನಾಡುವುದು ಸರಿಯಲ್ಲ. ಧರ್ಮದ ಮೂಲ ಎಲ್ಲಿಯೂ ಸಿಗುವುದಿಲ್ಲ. ನಂಬಿಕೆ, ಆಚರಣೆ ಸ್ವಾಭಾವಿಕವಾಗಿ ಬೆಳೆದು ಬಂದಿವೆ. ದೈವಾರಾಧನೆ ಮೇಲೆ ನಮ್ಮಗೆ ನಂಬಿಕೆ ಇದೆ. ಇದನ್ನು ಧರ್ಮದ ಜೊತೆ ತಳಕುಹಾಕಿ ವಿಮರ್ಶೆ ಮಾಡುವ ಅಗತ್ಯವಿಲ್ಲ’ ಎಂದರು.

ಕಾಂತಾರ ಸಿನಿಮಾ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಸಿನಿಮಾ ತಂಡವನ್ನುಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.