ಮಂಗಳೂರು: ನಗರದ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಡಾಲ್ಫಿನ್ ಮೀನಿನ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಮಧ್ಯಾಹ್ನ ಎರಡು ಗಂಟೆಯ ವೇಳೆ ಅಲೆಗಳ ಜೊತೆಯಲ್ಲಿ ಮೀನಿನ ಮೃತದೇಹ ದಡಕ್ಕೆ ಸೇರಿದೆ. ಸಂಜೆ ವೇಳೆ ಹೊಂಡ ತೋಡಿ ಸಮುದ್ರದ ಬದಿಯಲ್ಲೇ ಹೂತು ಹಾಕಲಾಯಿತು.

ಫಾತಿಮಾ ಚರ್ಚ್ ಭಾಗದಲ್ಲಿ ಭಾರಿ ಗಾತ್ರದ ಮೀನು ದಡಕ್ಕೆ ಬಂದು ಬಿದ್ದಾಗ ಅಲ್ಲಿದ್ದವರು ಕುತೂಹಲದಿಂದ ಅದರತ್ತ ಓಡಿದ್ದರು. ಫೆರಿ ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಬ್ಲೂ ಫ್ಲ್ಯಾಗ್ ಯೋಜನೆಯ ಕಾರ್ಮಿಕರು, ತಣ್ಣೀರು ಬಾವಿ ಬೀಚ್ ನಿರ್ವಹಣೆ ಮಾಡುತ್ತಿರುವ ಯೋಜಕ್ ಸಂಸ್ಥೆಯ ಸಿಬ್ಬಂದಿ ಮತ್ತು ಲೈಫ್ ಗಾರ್ಡ್‌ಗಳು ಮೀನಿನ ಶವವನ್ನು ಹಗ್ಗದಲ್ಲಿ ಕಟ್ಟಿ ಎಳೆದು ಮರಳಿನ ಮೇಲೆ ತಂದಿಟ್ಟರು.

ನಂತರ ಪಣಂಬೂರು ಪೊಲೀಸರಿಗೂ ಕರಾವಳಿ ಕಾವಲು ಪಡೆಯವರಿಗೂ ಅರಣ್ಯ ಇಲಾಖೆಗೂ ಮಾಹಿತಿ ನೀಡಲಾಯಿತು. ಅಧಿಕಾರಿಗಳು ಸ್ಥಳಕ್ಕೆ ಬಂದ ನಂತರ ಅರಣ್ಯ ಇಲಾಖೆಯ ಪರವಾಗಿ ರೀಫ್ ವಾಚ್ ಮರೈನ್ ಕನ್ಸರ್ವೇಷನ್ ಸಂಸ್ಥೆಯ ಕರ್ನಾಟಕ ಸಂಯೋಜಕಿ ತೇಜಸ್ವಿನಿ ಅವರು ಮೀನಿನ ಮರಣೋತ್ತರ ಪರೀಕ್ಷೆ ನಡೆಸಿದರು.

‘ಎಲ್ಲ ಪ್ರಕ್ರಿಯೆ ಮುಗಿದ ನಂತರ ಐದು ಅಡಿ ಆಳದ ಹೊಂಡ ತೋಡಿ ಮೀನನ್ನು ಅದರಲ್ಲಿ ಮುಚ್ಚಿದ್ದೇವೆ. ಈ ಕಾರ್ಯದಲ್ಲಿ ಈಜುಗಾರರು, ಬ್ಲೂ ಫ್ಲ್ಯಾಗ್ ಕಾರ್ಮಿಕರು ಮತ್ತು ಯೋಜಕ್‌ನ ಸಿಬ್ಬಂದಿ ಪಾಲ್ಗೊಂಡಿದ್ದರು’ ಎಂದು ಯೋಜಕ್‌ನ ಸಂಯೋಜಕ ಕೆ.ಪದ್ಮನಾಭ ಪಣಿಕ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊಳೆತ ಮೀನಿನ ಸಾವಿಗೆ ನಿಖರ ಕಾರಣಗಳನ್ನು ತಿಳಿಯುವುದು ಕಷ್ಟಸಾಧ್ಯ. ಈ ಡಾಲ್ಫಿನ್ ಹಸಿವು, ಆಮ್ಲಜನಕ ಸಿಗದೆ ಮತ್ತು ಸೋಂಕಿನಿಂದ ಸತ್ತಿರಬಹುದು ಎಂದು ಅಂದಾಜಿಸಲಾಗಿದೆ. ಮೀನುಗಾರರ ಬಲೆಯಲ್ಲಿ ಸಿಲುಕಿ ಆಹಾರ ಸಿಗದೆ ಬಳಲಿರುವ ಸಾಧ್ಯತೆ ಇದೆ. ಬಲೆಯಲ್ಲಿ ಸಿಲುಕಿದ್ದರಿಂದ ಮೇಲೆ ಬಂದು ಉಸಿರಾಡಲು ಸಾಧ್ಯವಾಗದೆಯೂ ಇರಬಹುದು. ಸ್ವಲ್ಪ ಸೋಂಕು ಕೂಡ ಇತ್ತು’ ಎಂದು ತೇಜಸ್ವಿನಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.