ಮುಡಿಪು: ‘ಕಾಂಗ್ರೆಸ್ ಸುದೀರ್ಘ ಆಡಳಿತ ಅವಧಿಯಲ್ಲಿ ಕೇವಲ ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯ ಕೊಡುಗೆಯನ್ನು ಮಾತ್ರ ನೀಡಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ವಿಶ್ವಶಕ್ತಿಯಾಗಿ ಬೆಳೆಯುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದರು.

ಕಂಬಳ ಪದವಿನಲ್ಲಿ ಬುಧವಾರ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ನೂತನ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಸಚಿವ ಎಸ್. ಅಂಗಾರ ಮಾತನಾಡಿ, ’ದಕ್ಷಿಣ ಕನ್ನಡದ ಏಳು ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮಂಗಳೂರು ಕ್ಷೇತ್ರದಲ್ಲಿ ಮಾತ್ರ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ ಎಂಬ ಕೊರಗು ಇದೆ. ಆದರೆ, ಮೋದಿಯವರ ಅಭಿವೃದ್ಧಿ ಹಾಗೂ ಕಾರ್ಯಕರ್ತರ ಪರಿಶ್ರಮದೊಂದಿಗೆ ಮುಂದಿನ ಬಾರಿ ಇಲ್ಲಿಯೂ ಅಧಿಕಾರ ಪಡೆಯಲಿದ್ದೇವೆ’ ಎಂದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ, ‘ಚುನಾವಣಾ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಜನರು ಸಾವಿರಾರು ಸಂಖ್ಯೆಯಲ್ಲಿ ಸೇರಿರುವುದು ಬಿಜೆಪಿ ವಿಜಯೋತ್ಸವಕ್ಕೆ ಮುನ್ನುಡಿಯಾಗಲಿದೆ’ ಎಂದರು.

ಶಾಸಕ ಪ್ರತಾಪ್ ಸಿಂಹ, ಅಲೆಮಾರಿ ಮತ್ತು ಅರೆ ಅಲೆಮಾರಿನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮುಖಂಡ ಈಶ್ವರ್ ಕಟೀಲು , ಹರಿಕೃಷ್ಣ ಬಂಟ್ವಾಳ್ , ಕಸ್ತೂರಿ ಪಂಜ, ಜಿಲ್ಲೆಯ ಪ್ರಭಾರಿ ರಾಜೇಶ್, ಮೀನುಗಾರಿಕ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮಾಜಿಶಾಸಕ ಜಯರಾಮ ಶೆಟ್ಟಿ, ರಾಮದಾಸ್ ಬಂಟ್ವಾಳ, ಸತೀಶ್ ಕುಂಪಲ, ಧನಲಕ್ಷ್ಮೀ ಗಟ್ಟಿ, ಟಿ.ಜಿ.ರಾಜಾರಾಂ ಭಟ್, ಗುರುದತ್ತ್, ಮಹೇಶ್ ಚೌಟ ಚಕ್ರಕೋಡಿ, ಜಯರಾಮ ಶೆಟ್ಟಿ ಕಂಬಳಪದವು ಇದ್ದರು. ಚಂದ್ರಹಾಸ್ ಪಂಡಿತ್ಹೌಸ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.