ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನರಿಂಗಾನ: ಮೋರ್ಲ-ಬೋಳದ ಲವಕುಶ ಜೋಡುಕರೆ ಕಂಬಳೋತ್ಸವಕ್ಕೆ ಕುದಿ ಮುಹೂರ್ತ

Published : 8 ಜುಲೈ 2024, 7:04 IST
Last Updated : 8 ಜುಲೈ 2024, 7:04 IST
ಫಾಲೋ ಮಾಡಿ
Comments

ಮುಡಿಪು: ಉಳ್ಳಾಲ ತಾಲ್ಲೂಕಿನ ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನ ಗ್ರಾಮದ ಮೋರ್ಲ-ಬೋಳದ ಲವಕುಶ ಜೋಡುಕರೆ ಮೂರನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವಕ್ಕೆ ಭಾನುವಾರ ಕುದಿ ಮುಹೂರ್ತ ನಡೆಯಿತು.

ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ, ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಕುದಿ ಮುಹೂರ್ತ ನೆರವೇರಿಸಿದರು. ‘ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆಯ ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ, ಎರಡು ವರ್ಷ ಕಂಬಳ ಯಶಸ್ವಿಯಾಗಿ ನಡೆದಿದೆ. ಇದೀಗ ಮೂರನೆಯ ವರ್ಷಕ್ಕೆ ಸಿದ್ಧತೆ ನಡೆದಿದ್ದು, ಕೋಣಗಳಿಗೆ ಓಟದ ತರಬೇತಿಗಾಗಿ  ಕುದಿ ಮುಹೂರ್ತ ನಡೆದಿದೆ.

ಆಗಸ್ಟ್‌ನಲ್ಲಿ ಕುದಿ ಮುಹೂರ್ತ ನಡೆಯಬೇಕಿತ್ತಾದರೂ ಕಂಬಳದ ಕೋಣಗಳ ಯಜಮಾನರ ಬೇಡಿಕೆಗೆ ಅನುಗುಣವಾಗಿ ಜುಲೈ ತಿಂಗಳ ಮೊದಲ ವಾರದಲ್ಲೇ ಕುದಿ ಮುಹೂರ್ತ ನಡೆದಿದೆ. ಜನವರಿ ಎರಡನೇ ವಾರದಲ್ಲೇ ಕಂಬಳ‌ ನಡೆಯಲಿದೆ ಎಂದು ಪ್ರಶಾಂತ್‌ ಕಾಜವ ಹೇಳಿದರು.

‌ಕಂಬಳ ಸಮಿತಿ ಉಪಾಧ್ಯಕ್ಷ ಮೋರ್ಲಗುತ್ತು ಚಂದ್ರಹಾಸ್ ಶೆಟ್ಟಿ, ನರಿಂಗಾನ‌ ಗ್ರಾಮ ಪಂಚಾಯಿತಿ ಅಧ್ಯಕ್ಷ, ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ನವಾಝ್ ನರಿಂಗಾನ, ಕಂಬಳ ಸಮಿತಿ‌ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಮೋರ್ಲ, ಪ್ರಧಾನ ಸಂಚಾಲಕ ಗಿರೀಶ್ ಆಳ್ವ ಮೋರ್ಲ, ಯಕ್ಷಗಾನ ಅಕಾಡೆಮಿ ಸದಸ್ಯ ಗುರಿರಾಜ್ ಭಟ್ ಕೈರಂಗಳ,  ಸಂಚಾಲಕರಾದ ಮುರಳೀಧರ ಶೆಟ್ಟಿ ಮೋರ್ಲ, ಸುಂದರ ಪೂಜಾರಿ ಕೋಡಿಮಜಲು,
ಕಾರ್ಯದರ್ಶಿ ಪ್ರೇಮಾನಂದ ರೈ ನೆತ್ತಿಲಕೋಡಿ, ಜಗದೀಶ್ ಶೆಟ್ಟಿ ಮೋರ್ಲ, ಗುತ್ತಿಗೆದಾರ ಅರುಣ್ ಡಿಸೋಜ ನಟ್ಟಿಹಿತ್ಲು, ಐತಪ್ಪ ಶೆಟ್ಟಿ ದೇವಂದಪಡ್ಪು, ರವಿ ಪೂಜಾರಿ ಮುಡಿಮಾರು, ಗಂಗಾಧರ ಶೆಟ್ಟಿ ನೆತ್ತಿಲಕೋಡಿ, ಶಿವಪ್ರಸಾದ್ ಚೌಕ, ಮಾಧವ ಪೂಜಾರಿ ಕುದ್ಕೋರಿ ಹಾಗೂ ಕೋಣದ ಯಜಮಾನರುಗಳು ಭಾಗವಹಿಸಿದ್ದರು.  ಸತೀಶ್ ಕುಮಾರ್ ಪುಂಡಿಕಾಯಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT