ಕಾರ್ಕಳ: ಇಲ್ಲಿನ ಅನಂತಶಯನದ ಪ್ರಕಾಶ್ ಹೋಟೆಲ್‌ನ ಸಂಭ್ರಮ ಸಭಾಂಗಣದಲ್ಲಿ ಲೇಖಕಿ ಲಾವಣ್ಯ ಪ್ರಭೆ ಅವರ ಸಾಮಾಜಿಕ ಜಾಲತಾಣ ಪ್ರತಿಲಿಪಿಯ ‘ದ್ವಿದಳ’ ಕಾದಂಬರಿಯನ್ನು ಲೋಕಾರ್ಪಣೆ ಗೊಳಿಸಲಾಯಿತು.

ಕೃತಿ ಲೋಕಾರ್ಪಣೆ ಮಾಡಿದ ಪತ್ರಕರ್ತ ಮನೋಹರ್ ಪ್ರಸಾದ್ ಮಾತನಾಡಿ, ಕಾದಂಬರಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅವಳಿ ಕಾದಂಬರಿಗಳು ಒಂದು ಪುಸ್ತಕದಲ್ಲಿ ಮೂಡಿಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಇದು ಕಾರ್ಕಳದ ಹೆಮ್ಮೆ’ ಎಂದರು.

ಮೂಡಬಿದಿರೆಯ ವಿಶ್ರಾಂತ ಪ್ರಾಂಶುಪಾಲ ಅಜಿತ್ ಪ್ರಸಾದ್ ಅವರು ಕಾದಂಬರಿ ಕುರಿತು ಮಾತನಾಡಿದರು.

ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಮಿತ್ರಪ್ರಭಾ ಹೆಗಡೆ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಲಿಪಿ ಸಂಪಾದಕ ಅಕ್ಷಯ್ ಬಾಳೆಗೆರೆ ಅವರು, ಸಾಮಾಜಿಕ ಜಾಲತಾಣ ಪ್ರತಿಲಿಪಿ ಪತ್ರಿಕೆ ಕೊಟ್ಟ ವೇದಿಕೆಯನ್ನು ಲೇಖಕಿ ಲಾವಣ್ಯ ಪ್ರಭೆ ಸಮೃದ್ಧವಾಗಿ ಬಳಸಿಕೊಂಡಿದ್ದು, ಅವರು ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದರು. ಸಂಗೀತಾ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.