ಮೂಡಿಗೆರೆ: ಯುಗಾದಿ ಹಬ್ಬವನ್ನು ಆಚರಿಸಲು ತಾಲ್ಲೂಕಿನಾದ್ಯಂತ ಸೋಮವಾರ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬರದ ನಡುವೆಯೂ ಹಬ್ಬದ ಆಚರಣೆಗಾಗಿ ಮನೆಗಳನ್ನು ಸುಣ್ಣ, ಬಣ್ಣಗಳಿಂದ ಸಿಂಗರಿಸಲಾಗಿದ್ದು, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.

ಯುಗಾದಿಗಾಗಿ ಹೂವು, ಹಣ್ಣು, ತರಕಾರಿ, ಮಾವು, ಬೇವಿನ ಸೊಪ್ಪು ಖರೀದಿ ಜೋರಾಗಿದ್ದು, ಹಬ್ಬದ ವ್ಯಾಪಾರಕ್ಕಾಗಿ ಬೇಲೂರು, ಚಿಕ್ಕಮಗಳೂರು, ಸಕಲೇಶಪುರ ಭಾಗಗಳಿಂದ ಹೂವು, ಹಣ್ಣು ಮಾರಾಟಗಾರರು ಬಂದಿದ್ದು, ಕೆ.ಎಂ.ರಸ್ತೆ ಬದಿಯಲ್ಲಿ ವ್ಯಾಪಾರ ಚುರುಕಾಗಿತ್ತು.

ಹೊರ ಊರುಗಳಲ್ಲಿ ನೆಲೆಸಿರುವ ಸ್ಥಳೀಯರು ಹಬ್ಬಕ್ಕಾಗಿ ಬರತೊಡಗಿದ್ದು, ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು ಭಾಗಗಳಿಂದ ಬರುವ ಬಸ್ಗಳು ತುಂಬಿತುಳುಕುತ್ತಿದ್ದವು.

ದೇವಾಲಯಗಳಲ್ಲಿ ವಿಶೇಷ ಪೂಜೆ: ಯುಗಾದಿ ವಿಶೇಷ ಆಚರಣೆಗೆ ದೇವಾಲಯಗಳು ಸಿದ್ಧಗೊಂಡಿದ್ದು, ತಾಲ್ಲೂಕಿನ ದೇವರುಂದ ಪ್ರಸನ್ನ ರಾಮೇಶ್ವರ ದೇವಾಲಯದಲ್ಲಿ ವಾರ್ಷಿಕ ವಿಶೇಷ ಜಾತ್ರೆಗೆ ಸಿದ್ಧತೆ ನಡೆಸಲಾಗಿದೆ. ಉತ್ಸವದ ಅಂಗವಾಗಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ರಥೋತ್ಸವ ನಡೆಯಲಿದೆ. ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪಂಚಾಂಗ ಶ್ರವಣಕ್ಕೆ ತಯಾರಿ ನಡೆಸಲಾಗಿದ್ದು, ದೇವಾಲಯದಲ್ಲಿ ವಿಶೇಷ ಪೂಜೆಗೂ ಅವಕಾಶ ಕಲ್ಪಿಸಲಾಗಿದೆ. ವೇಣುಗೋಪಾಲಸ್ವಾಮಿ, ಆಂಜನೇಯ, ಪರಿಮಳಮ್ಮ, ಗಂಗಾಧರೇಶ್ವರ, ಹಳೆಮೂಡಿಗೆರೆ ಗಣಪತಿ ದೇವಾಲಯಗಳಲ್ಲೂ ಹಬ್ಬದ ಅಂಗವಾಗಿ ವಿಶೇಷ ಪೂಜೆಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.