ಪುತ್ತೂರು (ದಕ್ಷಿಣ ಕನ್ನಡ): ‘ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಬಡವರು ಮನೆ, ಅನ್ನ, ಬಟ್ಟೆ, ಬೆಳಕು ಇಲ್ಲದೆ ಕೊರಗಬಾರದು. ಈ ನಿಟ್ಟಿನಲ್ಲಿ ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ನಿಂದ ಈಗಾಗಲೇ ನೋಂದಣಿಯಾಗಿರುವ 600 ಮಂದಿ ಬಡವರಿಗೆ ನಿವೇಶನ ನೀಡಲಾಗುವುದು. ಇದಕ್ಕಾಗಿ ವಿಟ್ಲ ಭಾಗದಲ್ಲಿ 5 ಎಕರೆ ಭೂಮಿ ಖರೀದಿ ಮಾಡಲಾಗಿದೆ’ ಎಂದು ಶಾಸಕ ಅಶೋಕ್ ಕುಮಾರ್ ಇಲ್ಲಿ ಹೇಳಿದರು.

ಪುತ್ತೂರು ನಗರಸಭೆಯ ಹಳೆಯ ಕಚೇರಿ ಕಟ್ಟಡದಲ್ಲಿ ಸೋಮವಾರ ಆರಂಭಿಸಲಾದ ಶಾಸಕರ ಕಚೇರಿ ಉದ್ಘಾಟನಾ ಸಮಾರಂಭದ ಬಳಿಕ ಅವರು ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿದರು.

‘ಪ್ರತಿ ಕುಟುಂಬಕ್ಕೆ 3 ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಾಣ ಮಾಡಲಾಗುವುದು. ಜತೆಗೆ, ಗ್ರಾಮೀಣ ಭಾಗದಲ್ಲಿ 1 ಸಾವಿರ ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ನಿವೇಶನ ಕಾದಿರಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

ಸಹಾಯಕರಿಗೆ ₹2.25 ಲಕ್ಷ ಸಂಬಳ

ವಿವಿಧ ಕೆಲಸಗಳಿಗಾಗಿ ಶಾಸಕರ ಕಚೇರಿಗೆ ಬರುವ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಆಪ್ತ ಸಹಾಯಕರು ಮಾತ್ರವಲ್ಲದೆ ಇತರ 7 ಮಂದಿ ಸಹಾಯಕರನ್ನು ನಿಯೋಜಿಸಲಾಗಿದೆ. ವೈದ್ಯಕೀಯ, ಕಂದಾಯ, ನಗರ ಸಮಸ್ಯೆ ಸೇರಿ ಪ್ರತಿ ಇಲಾಖೆಗೆ ಸಂಬಂಧಿಸಿ ಜನರ ಕೆಲಸಗಳನ್ನು ಅವರು ಮಾಡಲಿದ್ದಾರೆ. ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ಗೆ ಸಂಬಂಧಿಸಿ ಇಬ್ಬರು ಸಹಾಯಕರಿದ್ದಾರೆ. ತಮ್ಮ ಕೆಲಸಗಳಿಗಾಗಿ ಬೆಂಗಳೂರಿಗೆ ಹೋಗುವವರಿಗೆ ಅನುಕೂಲವಾಗುವಂತೆ ಅಲ್ಲಿಯೂ ಇಬ್ಬರು ಸಹಾಯಕರನ್ನು ನಿಯೋಜಿಸಲಾಗಿದೆ. ಪ್ರತಿ ತಿಂಗಳು ಸಹಾಯಕರಿಗೆ ಒಟ್ಟು ₹2.25 ಲಕ್ಷವನ್ನು ವೈಯಕ್ತಿಕವಾಗಿ ನೀಡುತ್ತಿದ್ದೇನೆ ಎಂದು ಅಶೋಕ್ಕುಮಾರ್ ರೈ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.