ಮಂಗಳೂರು: ಪುತ್ತೂರಿನ ಮುರದಲ್ಲಿರುವ ‘ಶಿವಸದನ ಆಶ್ರಯ ಧಾಮ’ಕ್ಕೆ ಎಂಆರ್‌ಪಿಎಲ್ ಸಂಸ್ಥೆಯು ₹ 40 ಲಕ್ಷ ಮೊತ್ತದಲ್ಲಿ ಹೊಸ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ಒದಗಿಸಿದ್ದು, ಇದನ್ನು ಇದೇ 27ರಂದು ಎಂಆರ್‌ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ (ಯೋಜನೆ) ಬಿಎಚ್‌ವಿ ಪ್ರಸಾದ್ ಲೋಕಾರ್ಪಣೆಗೊಳಿಸುವರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿದ ಆಶ್ರಯಧಾಮದ ಕಾರ್ಯದರ್ಶಿ ಕರುಣ್ ರಾವ್ ಬೆಳ್ಳೆ, ‘ಶಿವಸದನದಲ್ಲಿ 55 ಹಿರಿಯ ನಾಗರಿಕರು ಮತ್ತು 50 ವಿಶೇಷ ಸಾಮರ್ಥ್ಯದವರ ವಾಸ್ತವ್ಯದ ಸೌಕರ್ಯವನ್ನು ಹೊಂದಿದೆ. ಹಿರಿಯ ನಾಗರಿಕರು ಹಾಗೂ ವಿಶೇಷ ಸಾಮರ್ಥ್ಯದವರು ಸೇರಿ ಪ್ರಸ್ತುತ 40 ಈ ಆಶ್ರಯ ಪಡೆದಿದ್ದಾರೆ’ ಎಂದರು.

‘ಶಿವಸದನ ಕಟ್ಟಡ ನಿರ್ಮಾಣ ಮತ್ತು ನಿರ್ವಹಣೆಗೆ ಅಂದಾಜು ₹5.5 ಕೋಟಿ ವೆಚ್ಚವಾಗಲಿದೆ. ₹ 4.35 ಕೋಟಿ ದೇಣಿಗೆ ಸಂಗ್ರಹವಾಗಿದೆ. ಉಳಿದ ₹1.15 ಕೋಟಿಯನ್ನು ದಾನಿಗಳಿಂದ ಸಂಗ್ರಹಿಸಲಾಗುತ್ತಿದೆ. ಅವಶ್ಯಕತೆ ಇರುವ 10 ಮಂದಿಗೆ ಇಲ್ಲಿ ಉಚಿತ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಿದ್ದೇವೆ. ಪ್ರತಿ ತಿಂಗಳು ವಿದ್ಯುತ್‌ಗೆ ₹ 40 ಸಾವಿರಕ್ಕೂ ಹೆಚ್ಚು ವೆಚ್ಚವಾಗುತ್ತಿತ್ತು. ಸೌರ ವಿದ್ಯುತ್ ಘಟಕ ಅಳವಡಿಕೆಯಿಂದ ನಿರ್ವಹಣಾ ವೆಚ್ಚ ಕಡಿಮೆಯಾಗಲಿದೆ’ ಎಂದರು.

‘ಸುಬ್ರಹ್ಮಣ್ಯ ಸಭಾ ಚಾರಿಟಬಲ್ ಟ್ರಸ್ಟ್ ನಿರ್ವಹಿಸುವ ಈ ಆಶ್ರಯಧಾಮದಲ್ಲಿ ಯಾವುದೇ ಜಾತಿ ಬೇಧ ವಿಲ್ಲದೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುತ್ತೇವೆ. ಇಲ್ಲಿ ಸಸ್ಯಾಹಾರವನ್ನು ಮಾತ್ರ ನೀಡುತ್ತೇವೆ. ಹಿರಿಯರ ಆರೋಗ್ಯ ತಪಾಸಣೆ ಹಾಗೂ ಶುಶ್ರೂಷಕರ ವ್ಯವಸ್ಥೆ ಇದೆ. ಭಿನ್ನ ಸಾಮರ್ಥ್ಯದವರಿಗೆ ವಿವಿಧ ಚಟುವಟಿಕೆಗಳನ್ನೂ ಹಮ್ಮಿಕೊಳ್ಳುತ್ತೇವೆ’ ಎಂದರು.

ಟ್ರಸ್ಟ್‌ನ ಅಧ್ಯಕ್ಷ ಹರ್ಷ ಕುಮಾರ್ ಕೇದಿಗೆ, ಉಪಾಧ್ಯಕ್ಷೆ ಸುಮಂಗಲಾ ಪ್ರಭಾಕರ್, ನಿರ್ದೇಶಕರಾದ ಕೆ. ಪ್ರಭಾಕರ ರಾವ್, ಚಂದ್ರಕಾಂತ್ ರಾವ್ ಇನ್ನಾ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.