ಮೂಡುಬಿದಿರೆ: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಮನೆಗೆ ಕಲ್ಲು ಎಸೆದವರನ್ನು ಪೊಲೀಸರು ಬಂಧಿಸಬೇಕು ಎಂದು ಮೂಡುಬಿದಿರೆ ವಲಯ ಕಥೋಲಿಕ್ ಸಭಾ ಸದಸ್ಯರು ಆಗ್ರಹಿಸಿದರು.

ಕಥೋಲಿಕ್ ಕೌನ್ಸಿಲ್ ಆಫ್ ಕರ್ನಾಟಕದ ಇದರ ಸದಸ್ಯ ಆಲ್ವಿನ್ ಮಿನೇಜಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕ್ರೈಸ್ತ ಸಮುದಾಯದ ಪ್ರಬಲ ನಾಯಕರಾಗಿರುವ ಐವನ್ ಡಿಸೋಜ ರಾಜಕೀಯವಾಗಿ ಹಾಗೂ ಸಂಘಟನಾತ್ಮಕವಾಗಿ ಬೆಳೆಯುತ್ತಿರುವುದನ್ನು ಸಹಿಸದ ಕೋಮುವಾದಿಗಳು ಮಂಗಳೂರಿನಲ್ಲಿರುವ ಅವರ ಮನೆಗೆ ಕಲ್ಲು ಎಸೆದಿದ್ದಾರೆ. ಈ ಘಟನೆಯನ್ನು ಖಂಡಿಸುತ್ತೇವೆ’ ಎಂದರು. ಬಾಂಗ್ಲಾ ಘಟನೆ ಕುರಿತು ಐವನ್ ನೀಡಿದ ಹೇಳಿಕೆ ಬಗ್ಗೆ ಕೇಳಿದಾಗ, ‘ಆ ಬಗ್ಗೆ ಐವನ್ ಅವರು ಈಗಾಗಲೇ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅದರ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ’ ಎಂದರು.

ಐವನ್ ಡಿಸೋಜ ಅವರ ವೆಲೆನ್ಶಿಯಾದಲ್ಲಿರುವ ಮನೆಯಿಂದ ಮಂಗಳೂರು ಬಿಜೆಪಿ ಕಚೇರಿವರೆಗೆ ಆ.23ರಂದು ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ಮೂಡುಬಿದಿರೆಯ ಕ್ರೈಸ್ತರು ಪಾಲ್ಗೊಳ್ಳಲ್ಲಿದ್ದಾರೆ ಎಂದರು.

ಕಥೋಲಿಕ್ ಸಭಾ ಮೂಡುಬಿದಿರೆ ವಲಯ ಅಧ್ಯಕ್ಷ ಆಲ್ವಿನ್ ರಾಡ್ರಿಗಸ್, ಕಾರ್ಯದರ್ಶಿ ರೋಶನ್ ಮಿರಾಂದ, ಪ್ರಮುಖರಾದ ಆಗ್ನೇಸ್ ಡಿಸೋಜ, ವಿಲ್ಫ್ರೆಡ್ ಮೆಂಡೋನ್ಸ, ರಿಚರ್ಡ್ ಕಾರ್ಡೋಜಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.