ಮಂಗಳೂರು: ಯೆನೆಪೋಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಪದವಿ ಪ್ರದಾನ ಸಮಾರಂಭ ಈಚೆಗೆ ನಡೆಯಿತು. ಸುಮಾರು 160 ವಿದ್ಯಾರ್ಥಿಗಳು ಫಾರ್ಮಸಿ ಪದವಿ, ಡಿಪ್ಲೊಮಾ ಇನ್ ಫಾರ್ಮಸಿ ಪದವಿ ಪಡೆದರು.

ಕಾಲೇಜಿನ ಡೀನ್ ಡಾ. ಮೊಹಮ್ಮದ್ ಗುಲ್ಜಾರ್ ಅಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ಬೆಂಗಳೂರಿನ ಅಲ್ ಅಮೀನ್ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಡಿ ಸಲಾಹುದ್ದೀನ್ ಮಾತನಾಡಿ, ‘ಬದಲಾದ ತಂತ್ರಜ್ಞಾನ ಯುಗದಲ್ಲಿ ಫಾರ್ಮಸಿ ಕ್ಷೇತ್ರವು ಹೆಚ್ಚು ಮಹತ್ವ ಪಡೆದಿದೆ. ಈ ಕ್ಷೇತ್ರದಲ್ಲಿ ಇರುವ ಅವಕಾಶಗಳಷ್ಟೇ ಸವಾಲುಗಳೂ ಇವೆ. ದೇಶದ ಆರ್ಥಿಕತೆ ಸುಧಾರಣೆಯಲ್ಲಿ ಫಾರ್ಮಸಿಗಳ ಪಾತ್ರ ದೊಡ್ಡದು’ ಎಂದರು. ಗ್ರೂಪ್ ಫಾರ್ಮಾಸ್ಯುಟಿಕಲ್ಸ್ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಅತ್ತಾವರ ಇದ್ದರು.

ವಿದ್ಯಾರ್ಥಿಗಳ ಪಾಲಕರು, ಶಿಕ್ಷಣ ಸಂಸ್ಥೆಯ ಪ್ರಮುಖರು, ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ 650ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.