ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊನ್ನಾಳಿ ಪಿಕಾರ್ಡ್ ಬ್ಯಾಂಕ್‌ಗೆ ₹75 ಲಕ್ಷ ಲಾಭ: ಕೆ.ತಿಮ್ಮೇಶಪ್ಪ ಆರುಂಡಿ

ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕೆ.ತಿಮ್ಮೇಶಪ್ಪ ಆರುಂಡಿ
Published : 20 ಸೆಪ್ಟೆಂಬರ್ 2024, 15:35 IST
Last Updated : 20 ಸೆಪ್ಟೆಂಬರ್ 2024, 15:35 IST
ಫಾಲೋ ಮಾಡಿ
Comments

ಹೊನ್ನಾಳಿ: ‘ಪ್ರಸಕ್ತ ಸಾಲಿನಲ್ಲಿ ನಮ್ಮ ಬ್ಯಾಂಕ್ ₹ 75.55 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಕಳೆದ ಸಾಲಿಗಿಂತ ₹ 29.54 ಲಕ್ಷ ಹೆಚ್ಚು ಲಾಭಗಳಿಸಿದೆ’ ಎಂದು ಪಿಕಾರ್ಡ್ ಬ್ಯಾಂಕ್‌ ಅಧ್ಯಕ್ಷ ಕೆ.ತಿಮ್ಮೇಶಪ್ಪ ಆರುಂಡಿ ಹೇಳಿದರು.

ಶುಕ್ರವಾರ ಪಿಕಾರ್ಡ್ ಬ್ಯಾಂಕ್‌ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಸರ್ಕಾರದಿಂದ ₹ 75 ಲಕ್ಷದಷ್ಟು ಬಡ್ಡಿರೂಪದ ಸಹಾಯಧನ ಬರಬೇಕಾಗಿದ್ದು, ಈ ಸಹಾಯಧನದ ಮೊತ್ತವನ್ನು ಸೇರಿಸಿದರೆ ಒಟ್ಟು ₹ 1.55 ಕೋಟಿ ಲಾಭಾಂಶವನ್ನು ಗಳಿಸಿದಂತಾಗುತ್ತದೆ’ ಎಂದು ಹೇಳಿದರು.

‘1938ರಲ್ಲಿ ಸ್ಥಾಪನೆಯಾದ ನಮ್ಮ ಬ್ಯಾಂಕ್ 86ನೇ ವಾರ್ಷಿಕ ಮಹಾಸಭೆಯನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ’ ಎಂದ ಅವರು, ‘ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಾದ್ಯಂತ ತನ್ನ ವ್ಯಾಪ್ತಿಯನ್ನು ಹೊಂದಿದ್ದು, ಶೇ 86.1ರಷ್ಟು ಸಾಲ ವಸೂಲಾತಿ ಗುರಿ ಸಾಧಿಸಿದ್ದೇವೆ’ ಎಂದು ಹೇಳಿದರು.

ಸಭೆಯಲ್ಲಿ 2023– 24ನೇ ಸಾಲಿನ ಆಡಳಿತ ವರದಿಯನ್ನು ನಿರ್ದೇಶಕರಾದ ಟಿ.ಜಿ.ರಮೇಶ್‌ಗೌಡ ಮಂಡಿಸಿ ಅಂಗೀಕಾರ ಪಡೆದುಕೊಂಡರು.

ಬ್ಯಾಂಕ್‌ ಕಾರ್ಯದರ್ಶಿ ಕೆ.ವಿಶಾಲಾಕ್ಷಮ್ಮ, ಉಪಾಧ್ಯಕ್ಷ ಆರ್.ನಾಗಪ್ಪ, ನಿರ್ದೇಶಕರಾದ ಎಂ.ಜಿ.ಬಸವರಾಜಪ್ಪ, ಎಲ್‌.ಕೆ.ಚಂದ್ರಪ್ಪ, ಎಚ್‌.ಪಿ. ವಿಜಯ್‌ಕುಮಾರ್, ಕೆ.ವಿ.ನಾಗರಾಜ್, ಎ.ನಾಗೇಂದ್ರಪ್ಪ, ಎ.ಎಚ್. ಚಂದ್ರಪ್ಪ, ಎಂ.ಆರ್. ಹನುಮಂತಪ್ಪ, ಕೆ.ವಿ.ಸರೋಜಮ್ಮ ಸಿದ್ದಪ್ಪ ಬಣ್ಣಜ್ಜಿ, ಮಮತಾ ರಮೇಶ್, ಎಲ್.ಕೆ. ಚಂದ್ರಪ್ಪ ಉಪಸ್ಥಿತರಿದ್ದರು.

ರೈತ ಮುಖಂಡ ಹಿರೇಮಠದ ಬಸವರಾಜಪ್ಪ ರೈತ ಗೀತೆ ಹಾಡಿದರು.

೨ಇಪಿ : ಹೊನ್ನಾಳಿ ಪಿಕಾರ್ಡ್ ಬ್ಯಾಂಕ್ ನ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಅಧ್ಯಕ್ಷರಾದ ಕೆ. ತಿಮ್ಮೇಶಪ್ಪ ಆರುಂಡಿ ಮಾತನಾಡಿದರು. 
೨ಇಪಿ : ಹೊನ್ನಾಳಿ ಪಿಕಾರ್ಡ್ ಬ್ಯಾಂಕ್ ನ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಅಧ್ಯಕ್ಷರಾದ ಕೆ. ತಿಮ್ಮೇಶಪ್ಪ ಆರುಂಡಿ ಮಾತನಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT