ದಾವಣಗೆರೆ: ಶೇ 5ರ ಅನುದಾನದಲ್ಲಿ ತಮಗೂ ಸಮಾನ ಅವಕಾಶ ನೀಡುವಂತೆ ‘ದಾವಣಗೆರೆ ಜಿಲ್ಲಾ ಕಿವುಡರ ಸಂಘ’ದ ಆಶ್ರಯದಲ್ಲಿ ವಾಕ್ ಹಾಗೂ ಶ್ರವಣ ದೋಷವುಳ್ಳವರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜಯದೇವ ವೃತ್ತದಲ್ಲಿ ಬೆಳಿಗ್ಗೆ ಸೇರಿದ ವಾಕ್ ಹಾಗೂ ಶ್ರವಣ ದೋಷವುಳ್ಳವರು, ಅಂಗವಿಕಲರಿಗಾಗಿ ಮೀಸಲಿಟ್ಟಿರುವ ಶೇ 5ರ ಅನುದಾನದಲ್ಲಿ ತಮಗೆ ಸರಿಯಾಗಿ ಸೌಲಭ್ಯಗಳು ಸಿಗದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಬೇಡಿಕೆ ಇರುವ ಫಲಕಗಳನ್ನು ಹಿಡಿದು ಪಿ.ಬಿ. ರಸ್ತೆ ಮೂಲಕ ಐದು ಕಿ.ಮೀ ದೂರದ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆಯಲ್ಲಿ ತೆರಳಿದರು. ಹಲವು ಸಂಜ್ಞೆಗಳ ಮೂಲಕವೇ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಗಮನ ಸೆಳೆದರು.

ವಾಕ್ ಹಾಗೂ ಶ್ರವಣ ದೋಷವುಳ್ಳವರ ಮಾರ್ಗದರ್ಶಕ ಹರೀಶ್, ‘ಕೈ–ಕಾಲು, ಕಣ್ಣು ಇಲ್ಲದವರನ್ನಷ್ಟೇ ಅಂಗವಿಕಲರು ಎಂದು ಹೆಚ್ಚಾಗಿ ಪರಿಭಾವಿಸಲಾಗುತ್ತಿದೆ. ಶ್ರವಣ ದೋಷವುಳ್ಳವರ ಸಮಸ್ಯೆ ಆಡಳಿತ ವರ್ಗಕ್ಕೆ ಕಂಡು ಬರುತ್ತಿಲ್ಲ. ತ್ರಿಚಕ್ರ ವಾಹನ, ಲ್ಯಾಪ್ಟಾಪ್ ಸೇರಿ ಇನ್ನಿತರ ಸೌಲಭ್ಯಗಳಿಂದ ಈ ಸಮುದಾಯ ವಂಚಿತವಾಗುತ್ತಿದೆ. ಇದರಿಂದಾಗಿ ತಂದೆ–ತಾಯಿಯ ಆಶ್ರಯದಲ್ಲೇ ಇರುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅಂಗವಿಕಲರಿಗೆ ₹ 1,400 ಮಾಸಾಶನ ನೀಡಲಾಗುತ್ತಿದ್ದು, ಇದರಿಂದ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದನ್ನು ಕನಿಷ್ಠ ₹ 3000ಕ್ಕೆ ಹೆಚ್ಚಿಸಬೇಕು. ವಾಕ್ ಮತ್ತು ಶ್ರವಣ ದೋಷವುಳ್ಳವರು ಸಾಮಾನ್ಯ ವ್ಯಕ್ತಿಯನ್ನು ವಿವಾಹವಾದರೆ ನೀಡುತ್ತಿರುವ ₹ 50 ಸಾವಿರ ಪ್ರೋತ್ಸಾಹ ಧನವನ್ನು ಶ್ರವಣದೋಷವುಳ್ಳವರನ್ನು ಮದುವೆಯಾದರೂ ನೀಡಬೇಕು. ಉತ್ತಮ ಗುಣಮಟ್ಟದ ಶ್ರವಣ ಸಾಧನ ಖರೀದಿಸಲು ₹ 25 ಸಾವಿರ ಸಹಾಯಧನ ನೀಡಬೇಕು. ಬೇರೆ ರಾಜ್ಯಗಳಲ್ಲಿ ಡಿ.ಎಲ್ಗಳನ್ನು ನೀಡಲಾಗುತ್ತಿದ್ದು, ರಾಜ್ಯದಲ್ಲೂ ತಮಗೆ ಡಿ.ಎಲ್ ವಿತರಿಸಬೇಕು. ಗುಮಾಸ್ತ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ವಾಕ್ ಮತ್ತು ಶ್ರವಣದೋಷವುಳ್ಳವರು ಜಿಲ್ಲಾಧಿಕಾರಿಗೆ ಮನವಿ ಮೂಲಕ ಒತ್ತಾಯಿಸಿದರು.

ಜಿಲ್ಲಾ ಅಂಗವಿಕರ ಕಲ್ಯಾಣಾಧಿಕಾರಿ, ಜಿಲ್ಲಾ ಆಸ್ಪತ್ರೆಯಲ್ಲಿರುವ ವೈದ್ಯರು, ಮಹಾನಗರ ಪಾಲಿಕೆಯ ಕೆಲ ಅಧಿಕಾರಿಗಳು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಅವರನ್ನು ವರ್ಗಾವಣೆ ಮಾಡಬೇಕು ಎಂದು ಅವರು ಕೋರಿದರು.

ಜಿಲ್ಲಾ ಕಿವುಡರ ಸಂಘದ ಗೌರವಾಧ್ಯಕ್ಷ ಟಿ. ನಾಗರಾಜ್, ಉಪಾಧ್ಯಕ್ಷ ಎಚ್.ಆರ್. ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಕೆ.ಪಿ. ರಾಜಶೇಖರ್, ಜಂಟಿ ಕಾರ್ಯದರ್ಶಿ ಪಿ.ಆರ್. ರಾಕೇಶ್, ಖಜಾಂಚಿ ಎನ್. ಪ್ರದೀಪ್, ಶಂಕರ್, ಎ.ಬಿ. ಮಂಜುನಾಥ, ಜಿ. ಚೈತ್ರಾ, ಆಸೀಫ್ ಎಸ್., ಕಲ್ಲೇಶ್ ಎಂ.ಆರ್ ಅವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.