ದಾವಣಗೆರೆ: ನಗರದಲ್ಲಿ ಮಾಹಿತಿ ತಂತ್ರಜ್ಞಾನದ ಕೇಂದ್ರ ಸ್ಥಾಪಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಲೋಕಸಭೆಯಲ್ಲಿ ಈ ಸಂಬಂಧ ಮಾತನಾಡಿದ ಅವರು, ‘ದಾವಣಗೆರೆ ಕರ್ನಾಟಕ ರಾಜ್ಯದ ಮಧ್ಯಕೇಂದ್ರವಾಗಿದ್ದು, ಇಲ್ಲಿ ಐಟಿ ಹಬ್ ಸ್ಥಾಪನೆಗೆ ಬೇಕಾದಂತಹ ಎಲ್ಲಾ ಮೂಲಸೌಲಭ್ಯಗಳು ದೊರೆಯಲಿವೆ. ದಾವಣಗೆರೆಯು ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯ ಅಭಿವೃದ್ಧಿಶೀಲ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಐಟಿ ವ್ಯವಹಾರವನ್ನು ಹೊಸ ಕೇಂದ್ರವಾಗಿ ಕೊಂಡೊಯ್ಯಲು ಇದು ಸೂಕ್ತ ತಾಣ’ ಎಂದರು.

‘ಬೆಂಗಳೂರಿನಿಂದ ರಸ್ತೆ ಮತ್ತು ರೈಲಿನ ಮೂಲಕ ಇಲ್ಲಿಗೆ 3.5ರಿಂದ 4 ಗಂಟೆಗಳ ಪ್ರಯಾಣ. ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ಹೊಂದಿದೆ. ವಿಮಾನ ನಿಲ್ದಾಣವಿರುವ ಶಿವಮೊಗ್ಗ ಮತ್ತು ಹುಬ್ಬಳ್ಳಿ ನಗರಗಳು ಇಲ್ಲಿಗೆ ಸಮೀಪದಲ್ಲಿವೆ. ಇಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿ ನೂರಾರು ಕೈಗಾರಿಕೆಗಳಿವೆ. ನಗರವು ದೊಡ್ಡ ಪ್ರಮಾಣದ ಮತ್ತು ಸಾರ್ವಜನಿಕ ವಲಯದ ಉದ್ಯಮ ಹೊಂದಿದ್ದು, ದಾವಣಗೆರೆ ಸುತ್ತ ಹಲವು ಎಂಜಿನಿಯರಿಂಗ್ ಕಾಲೇಜುಗಳಿದ್ದು, ಅತ್ಯುತ್ತಮ ಶೈಕ್ಷಣಿಕ ಪರಿಸರ ವ್ಯವಸ್ಥೆ ಹೊಂದಿದೆ’ ಎಂದು ಗಮನ ಸೆಳೆದರು.

‘ಸ್ಟಾರ್ಟ್‌ಅಪ್‍ಗಳು ಮತ್ತು ಟೆಕ್ ಕಂಪನಿಗಳಿಂದ ಹೊಸತನವನ್ನು ಉತ್ತೇಜಿಸಲು ನಗರವು ಪರಿಪೂರ್ಣವಾಗಿದೆ. ದಾವಣಗೆರೆಯನ್ನು ಐಟಿ ಕೇಂದ್ರವನ್ನಾಗಿ ಮಾಡುವುದರಿಂದ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡಿದಂತಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.