ಹರಿಹರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಟೀಕಿಸಿರುವುದನ್ನು ಖಂಡಿಸಿ ಹಾಗೂ, ಹಲವು ಮಸೀದಿಗಳನ್ನು ಧ್ವಂಸ ಮಾಡಬೇಕು ಎಂದು ಕರೆ ನೀಡಿರುವ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆಯನ್ನು ಹುಡುಕಿಕೊಂಡು ಹೋಗಿ ಚಪ್ಪಲಿಯಿಂದ ಸೇವೆ ಮಾಡುತ್ತೇವೆ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಎಸ್.ರಾಮಪ್ಪ ಎಚ್ಚರಿಕೆ ನೀಡಿದರು.

‘13 ಬಾರಿ ರಾಜ್ಯದ ಬಜೆಟ್ ಮಂಡಿಸಿದ, ಎರಡು ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯನವರ ಸಾರ್ವಜನಿಕ ಬದುಕಿನಷ್ಟು ವಯಸ್ಸು ಕಾಣದ ಅನಂತ ಕುಮಾರ್ ಹೆಗಡೆ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ. ಅವರು ಆಡಿರುವ ಸಂವಿಧಾನ ವಿರೋಧಿ ಮಾತುಗಳಿಗೆ ತಕ್ಷಣವೇ ನಾಡಿನ ಜನರ ಕ್ಷಮೆ ಯಾಚಿಸಬೇಕು. ತಪ್ಪಿದಲ್ಲಿ ಅವರನ್ನು ಹುಡುಕಿಕೊಂಡು ಹೋಗಿ ಚಪ್ಪಲಿ ಸೇವೆ ಮಾಡಲಾಗುವುದು’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂವಿಧಾನ ವಿರೋಧಿ ಹೇಳಿಕೆ ಮೂಲಕ ನಾಡಿನ ವಿವಿಧ, ಜಾತಿ, ಧರ್ಮೀಯರ ನಡುವೆ ಸಂಘರ್ಷ ಸೃಷ್ಟಿಸುತ್ತಿರುವ ಹೆಗಡೆಯನ್ನು ಪಕ್ಷದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಪಕ್ಷದ ಮುಖಂಡರಾದ ಶಂಕರ್ ಖಟಾವ್‌ಕರ್, ರೇವಣಸಿದ್ದಪ್ಪ, ಮುಖಂಡರಾದ ಬಿ.ಮೊಹಮ್ಮದ್ ಫೈರೋಜ್, ಸುರೇಶ್ ಹಾದಿಮನಿ, ಟಿ.ಜೆ.ಮುರುಗೇಶಪ್ಪ, ಬಾಲಾಜಿ, ಹನಗವಾಡಿ ಹನುಮಂತಪ್ಪ, ನಗರಸಭೆ ಮಾಜಿ ಸದಸ್ಯ ಹಂಚಿನ ನಾಗಣ್ಣ, ವೀರಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.