ಹೊನ್ನಾಳಿ: ದೇವನಾಯ್ಕನಹಳ್ಳಿ ವೃತ್ತದಲ್ಲಿ ಸೋಮವಾರ ದಾಸ ಶ್ರೇಷ್ಠ ಕನಕದಾಸರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಯಿತು.

ಕನಕದಾಸರ ಪುತ್ಥಳಿಯನ್ನು ಹಿರೇಕಲ್ಮಠದಿಂದ ಮೆರವಣಿಗೆ ಮೂಲಕ ದೇವನಾಯ್ಕಹಳ್ಳಿ ವೃತ್ತಕ್ಕೆ ತರಲಾಯಿತು. ಶ್ರಾವಣ ಸೋಮವಾರ ರಾಜಯೋಗದಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಕುರುಬ ಸಮಾಜದ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರನ್ನು ಆಹ್ವಾನಿಸಿ ಅದ್ಧೂರಿ ಕಾರ್ಯಕ್ರಮವನ್ನು ಮಾಡಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ಈ ಸಂದರ್ಭದಲ್ಲಿ ತಿಳಿಸಿದರು.

ಕನಕದಾಸರ ಕಂಚಿನ ಪುತ್ಥಳಿಯು 8.25 ಅಡಿ ಎತ್ತರವನ್ನು ಹೊಂದಿದ್ದು ₹ 10 ಲಕ್ಷ ವೆಚ್ಚದಲ್ಲಿ ಇದನ್ನು ತಯಾರಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.

ಈ ಸಂದಭದಲ್ಲಿ ಇನ್‌ಸೈಟ್ ಐಎಎಸ್ ಸಂಸ್ಥಾಪಕರು, ನಿರ್ದೇಶಕರೂ ಆದ ಜಿ.ಬಿ. ವಿನಯ್‍ಕುಮಾರ್, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿ.ಸಿದ್ದಪ್ಪ, ಎಚ್.ಎ. ಉಮಾಪತಿ, ಎಚ್.ಬಿ. ಶಿವಯೋಗಿ, ಫಾಲಾಕ್ಷಪ್ಪ, ರಾಜು ಕಡಗಣ್ಣಾರ, ರಂಜಿತ್, ಗಾಳಿ ನಾಗರಾಜ್, ಎಸ್.ಎಸ್. ಬೀರಪ್ಪ ಸೇರಿದಂತೆ ಕುರುಬ ಸಮಾಜದ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.