ದಾವಣಗೆರೆ: ಜಿಲ್ಲೆಯ ಹಲವೆಡೆ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದ್ದು, ಕಟಾವಿಗೆ ಬಂದಿದ್ದ ಭತ್ತ ಚಾಪೆ ಹಾಸಿರುವುದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ.

ದಾವಣಗೆರೆ, ಚನ್ನಗಿರಿ ಹಾಗೂ ಹರಿಹರ ತಾಲ್ಲೂಕಿನ ಹಲವೆಡೆ ಉತ್ತಮವಾಗಿ ಬೆಳೆದಿದ್ದ ಭತ್ತದ ಫಸಲಿನ ಕಟಾವಿಗೆ ರೈತರು ಸಿದ್ಧತೆ ನಡೆಸಿದ್ದರು. ಮಳೆ, ಗಾಳಿಗೆ ಭತ್ತದ ಬೆಳೆ ಚಾಪೆ ಹಾಸಿದೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಳೆದ ಬಾರಿ ಬರದಿಂದ ಕಂಗೆಟ್ಟ ರೈತರು ಈ ಬಾರಿ ಉತ್ತಮ ವರ್ಷಧಾರೆಯಾಗಿದ್ದನ್ನು ಕಂಡು ಉತ್ತಮ ಇಳುವರಿಯ ಜತೆಗೆ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ, ಅತಿವೃಷ್ಟಿಯಿಂದ ರೈತರ ಕನಸು ಕಮರಿದೆ.

ಭತ್ತ ಚಾಪೆ ಹಾಸಿರುವುದರಿಂದ ಕಟಾವಿಗೆ ತೊಂದರೆ ಎದುರಿಸುವಂತಾಗಿದೆ. 20 ದಿನಗಳಲ್ಲಿ ಕೊಯ್ಲಿಗೆ ರೈತರು ಸಿದ್ಧತೆ ನಡೆಸಿದ್ದರು. ಈ ಹಂತದಲ್ಲಿ ಬೆಳೆ ಚಾಪೆ ಹಾಸಿದ್ದು, ರೈತರು ಕಂಗಾಲಾಗಿದ್ದಾರೆ.

ಭತ್ತದ ಗದ್ದೆಗಳಲ್ಲಿ ನೀರು ನಿಂತಿದ್ದು, ಚಾಪೆ ಹಾಸಿದ ಭತ್ತ ಕೊಳೆಯಲು ಆರಂಭಿಸಿದೆ. ಅದು ಕೊಯ್ಯಲೂಬಾರದು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ದಾವಣಗೆರೆ ತಾಲ್ಲೂಕಿನ ಜರೆಕಟ್ಟೆ, ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆ, ಸಾಲಕಟ್ಟೆ ಸೇರಿದಂತೆ ಕೆಲ ಭಾಗದಲ್ಲಿ ಸುರಿದ ಗಾಳಿ ಮಳೆಗೆ ಭತ್ತದ ಬೆಳೆ ಹಾನಿಗೀಡಾಗಿದೆ. ಕೆಲವೆಡೆ ಭತ್ತದ ಗದ್ದೆಗಳು ಜಲಾವೃತವಾಗಿವೆ.

ಜರೆಕಟ್ಟೆಯ ಹಲವು ರೈತರ ಜಮೀನಿನಲ್ಲಿ ಭತ್ತ ಹಾನಿಗೀಡಾಗಿದ್ದು, ಎಸ್.ಕೆ. ಮಂಜುನಾಥ್ ಅವರ ಮೂರುವರೆ ಎಕರೆ, ಕೆ.ಕೆ. ಬುದ್ಧಿವಂತಪ್ಪ ಅವರ 4.33 ಎಕರೆ, ಗೌಡ್ರು ನಾಗರಾಜ ಅವರ 2.15 ಎಕರೆ, ಪಿ.ಎಂ. ಪರುಶಪ್ಪ ಅವರ 2 ಎಕರೆ, ಮುದ್ದಿ ಹನುಮಂತಪ್ಪ ಅವರು 3 ಎಕರೆಯಲ್ಲಿ ಬೆಳೆದಿದ್ದ ಫಸಲು ಕೈಗೆಟುಕದಂತಾಗಿದೆ.

ಜಿಲ್ಲೆಯಲ್ಲಿ ಹಿಂಗಾರು ಮಳೆಗೆ 60 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ 65,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ.

‘ಕಳೆದ ವರ್ಷ ಬರದಿಂದ ಬೆಳೆ ಕೈಗೆ ಬರಲಿಲ್ಲ. ಈ ಬಾರಿ ಉತ್ತಮ ಮಳೆಯಾದ ಕಾರಣ 5 ಎಕರೆಯಲ್ಲಿ ಭತ್ತ ಬೆಳೆದಿದ್ದೆವು. ಬಹುತೇಕ ಬೆಳೆ ಹಾನಿಗೀಡಾಗಿದೆ. ಏನು ಮಾಡುವುದು ದಿಕ್ಕೇ ತೋಚುತ್ತಿಲ್ಲ. ಪ್ರತಿ ಬಾರಿ ಒಂದಿಲ್ಲೊಂದು ಅನಾಹುತವಾಗುತ್ತದೆ ಎಂದು’ ‘ಪ್ರಜಾವಾಣಿ’ ಎದುರು ಕಣ್ಣೀರು ಹಾಕಿದರು ಜರೆಕಟ್ಟೆಯ ರೈತಮಹಿಳೆ ಚಂದ್ರಮ್ಮ ವೀರಪ್ಪ.

‘ಭತ್ತದ ಬೆಳೆ ಹಾನಿ ಬಗ್ಗೆ ಬಗ್ಗೆ ಸಚಿವರು, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪರಿಹಾರ ನೀಡಿದರೆ ಅನುಕೂಲವಾಗುತ್ತದೆ’ ಎಂದು ಚಂದ್ರಮ್ಮ ಅವರ ಪತಿ ವೀರಪ್ಪ ನುಡಿದರು.

‘20 ದಿನಗಳಲ್ಲಿ ಭತ್ತದ ಕಟಾವಿಗೆ ಸಿದ್ಧತೆ ನಡೆಸಿದ್ದೆ. ಏಕಾಏಕಿ ಸುರಿದ ಮಳೆಯಿಂದ ಎರಡೂವರೆ ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಎಕರೆಗೆ ₹ 40,000 ಖರ್ಚು ಮಾಡಿದ್ದೆ. ಈಗ ದಿಕ್ಕು ತೋಚದಂತಾಗಿದೆ’ ಎಂದು ರೈತ ಪರಶುರಾಂ ಡಿ.ಕೆ. ಹೇಳಿದರು.

‘ಒಂದು ಗಂಟೆಗೆ ಯಂತ್ರದ ಬಾಡಿಗೆ ₹ 2,500ರಿಂದ ₹ 3,000 ದೆರ ಇದೆ. ಭತ್ತ ಚಾಪೆ ಹಾಸಿರುವುದರಿಂದ ಯಂತ್ರದಲ್ಲಿ ಕಟಾವು ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಸಾಮಾನ್ಯವಾಗಿ ಭತ್ತ ಕಟಾವಿಗೆ ಒಂದು ಗಂಟೆಯಾದರೆ, ಚಾಪೆ ಹಾಸಿದ ಭತ್ತಕ್ಕೆ 3 ಗಂಟೆ ಬೇಕಾಗುತ್ತದೆ. ಇದರಿಂದ ಕೂಲಿ ಹೆಚ್ಚು ಕೊಡಬೇಕಾಗಿದೆ’ ಎಂದು ಕೆ.ಕೆ. ಬುದ್ಧಿವಂತಪ್ಪ ಹೇಳಿದರು.

‘ಬೆಳೆ ನಷ್ಟ ಪರಿಹಾರ ಹೆಚ್ಚಿಸಿ’

ಪ್ರಕೃತಿ ವಿಕೋಪ ಸಂಬಂಧ ನೀಡುವ ಬೆಳೆ ನಷ್ಟ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಇದನ್ನು ಹೆಚ್ಚಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

‘ಭತ್ತದ ಬೆಳೆ ಹಾನಿಗೆ ಎಕರೆಗೆ ₹ 7000 ಕೊಡುತ್ತಾರೆ. ಬಿತ್ತನೆ ಬೀಜ ಗೊಬ್ಬರ ಸಾಗಣೆ ವೆಚ್ಚ ಎಲ್ಲ ಸೇರಿ ಒಂದು ಎಕರೆ ಭತ್ತ ಬೆಳೆಯಲು ₹ 30000ದಿಂದ ₹ 40000 ಖರ್ಚು ಬರುತ್ತದೆ. ಖರ್ಚು ಆದ ಪರಿಹಾರವನ್ನೂ ನೀಡುವುದಿಲ್ಲ. ಕನಿಷ್ಠ ₹ 25000 ಬೆಳೆ ಹಾನಿ ಪರಿಹಾರ ನೀಡಿದರೆ ಅನುಕೂಲವಾಗುತ್ತದೆ’ ಎಂದು ರೈತ ಸಂಜೀವಕುಮಾರ್ ಒತ್ತಾಯಿಸಿದರು.

‘ಸರ್ಕಾರ ವೈಜ್ಞಾನಿಕ ಬೆಳೆಹಾನಿಗೆ ಪರಿಹಾರ ನೀಡಬೇಕು. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಹಳೆ ಕಾಲದ ಪದ್ಧತಿಯ ಪರಿಹಾರದಿಂದ ಜೀವನ ಮಟ್ಟ ಸುಧಾರಿಸುವುದಿಲ್ಲ. 50 ಕ್ವಿಂಟಲ್ ಭತ್ತ ಬಂದರೆ ಮಳೆ ಹಾನಿಯಿಂದ 20 ಕ್ವಿಂಟಲ್ ಭತ್ತ ಹಾನಿಯಾದರೆ ಉಳಿದ ಭತ್ತದ ನಷ್ಟವನ್ನು ತುಂಬಿಕೊಡಬೇಕು’ ಎಂದು ರೈತರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.