ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರಯಾನ–3: ವಿಜ್ಞಾನಿಗಳ ಪರಿಶ್ರಮ ತೆರೆದಿಟ್ಟ ಕೊನೆಯ 15 ನಿಮಿಷ

Published : 13 ಸೆಪ್ಟೆಂಬರ್ 2023, 6:43 IST
Last Updated : 13 ಸೆಪ್ಟೆಂಬರ್ 2023, 6:43 IST
ಫಾಲೋ ಮಾಡಿ
Comments

ದಾವಣಗೆರೆ: ‘ಚಂದ್ರಯಾನ–3ರ ಕೊನೆಯ 15 ನಿಮಿಷಗಳು ಇಸ್ರೊ ವಿಜ್ಞಾನಿಗಳ ಬುದ್ಧಿಮತ್ತೆ ಹಾಗೂ ಸತತ, ನಿಖರ ಪರಿಶ್ರಮವನ್ನು ಇಡೀ ಜಗತ್ತಿಗೆ ತೆರೆದಿಟ್ಟಿತು’ ಎಂದು ಬೆಂಗಳೂರಿನ ಇಸ್ರೋದ ಯು.ಆರ್. ರಾವ್ ಸ್ಯಾಟಲೈಟ್‌ ಕೇಂದ್ರದ ವಿಜ್ಞಾನಿ ಶಿವಕುಮಾರ ಎಸ್‌.ಪಾಟೀಲ ಹೇಳಿದರು.

ಇಲ್ಲಿನ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಒಂದನೇ ಸೆಮಿಸ್ಟರ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸೋಮವಾರ ನಡೆದ ಸ್ಟೂಡೆಂಟ್ ಇಂಡಕ್ಷನ್ ಪ್ರೊಗ್ರ್ಯಾಮ್ ಭಾಗ–1ರಲ್ಲಿ ಚಂದ್ರಯಾನ–3 ಯಶಸ್ಸು ಮತ್ತು ಆದಿತ್ಯ ಎಲ್‌–1ನ ಸದುಪಯೋಗ ಕುರಿತು ಅವರು ಮಾತನಾಡಿದರು.

‘ಚಂದ್ರಯಾನ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ಎಲ್ಲಾ ವಿಜ್ಞಾನಿಗಳಿಗೂ ಇತ್ತು. ಆದರೆ ಅನುಮಾನವಿದ್ದಿದ್ದು ಹೊರಗಿನವರಿಗೆ ಮಾತ್ರ’ ಎಂದರು.

‘ವಿದ್ಯಾರ್ಥಿಗಳಿಗೆ ನಿಖರ ಗುರಿ ಮತ್ತು ಅದನ್ನು ತಲುಪಲು ಸರಿಯಾದ ಪ್ರಯತ್ನ ಮಾಡಿದರೆ ಯಾವುದೂ ಕಷ್ಠ ಎನಿಸುವುದಿಲ್ಲ’ ಎಂದರು.

‘ವಿಜ್ಞಾನಿಗಳು ಹಾಗೂ ಶ್ರೇಷ್ಠ ವ್ಯಕ್ತಿಗಳು ನಮಗೆ ಮಾದರಿಯಾಗಬೇಕು. ಆಗ ಮಾತ್ರ ಗುರಿಯನ್ನು ತಲುಪಲು ಸಾಧ್ಯ’ ಎಂದು ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಅರವಿಂದ್, ಕಾರ್ಯಾಗಾರದ ಸಂಯೋಜಕ ಕೆ.ಎಸ್.ಬಸವರಾಜಪ್ಪ, ಗಿರಿಜಾ ಶಿವಕುಮಾರ್ ಪಾಟೀಲ್, ಮಲ್ಲಿಕಾರ್ಜುನ, ಸಿ.ಪಿ.ಅನಿಲ್‌ಕುಮಾರ್, ಸಿ.ಆರ್.ನಿರ್ಮಲ ಇದ್ದರು. ಟಿ.ಕೃಷ್ಣಕುಮಾರ್ ಸ್ವಾಗತಿಸಿದರು. ಪ್ರಸನ್ನಕುಮಾರ್ ಜೆ.ಕೆ. ವಂದಿಸಿದರು. ಪ್ರೊ.ಮಾಳವಿಕಾ ಹಾಗೂ ಪ್ರೊ.ಪಲ್ಲವಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT