ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ: ಅರ್ಥಪೂರ್ಣ ಅಕ್ಷರ ಜಾತ್ರೆ ಇಂದು, ನಾಳೆ

ಕೆ.ಎಸ್‌.ಶರ್ಮಾ ಅವರ ಸರ್ವಾಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ
ಎಲ್.ಮಂಜುನಾಥ
Published : 6 ಮಾರ್ಚ್ 2024, 4:47 IST
Last Updated : 6 ಮಾರ್ಚ್ 2024, 4:47 IST
ಫಾಲೋ ಮಾಡಿ
Comments
ಸಾಹಿತ್ಯ ಸಮ್ಮೇಳನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ₹5 ಲಕ್ಷ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ₹1.75ಲಕ್ಷ ಅನುದಾನ ನೀಡಿದೆ. ಇದರಲ್ಲಿಯೇ ಎಲ್ಲವನ್ನೂ ನಿಭಾಯಿಸಬೇಕು.
ಲಿಂಗರಾಜ ಅಂಗಡಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ
ಸಾಹಿತ್ಯ ಚಟುವಟಿಕೆಯ ಪರಿಚಾರಕ ಶರ್ಮಾ...
ಜಿಲ್ಲೆಯ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಎಸ್‌.ಶರ್ಮಾ ಅವರ ವ್ಯಕ್ತಿತ್ವ ಅಸಮಾನ್ಯವಾದದ್ದು. ಅವರು ಸಾಹಿತ್ಯವಷ್ಟೇ ಅಲ್ಲ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಪರಿಚಯ ಹೀಗಿದೆ. ಕುವಲಯ ಶ್ಯಾಮ ಶರ್ಮಾ (ಕೆ.ಎಸ್‌.ಶರ್ಮಾ) ಅವರು 1934ರ ಸೆಪ್ಟೆಂಬರ್ 30ರಂದು ಎಂಬಾರ್‌ ಭಾಷ್ಯಾಚಾರ್ ಮತ್ತು ಸಂಪತ್ತಮ್ಮಾ ಅವರ ಪುತ್ರರಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಬೆಂಗಳೂರಿನಲ್ಲಿ ಪೂರ್ಣಗೊಳಿಸಿ ನಂತರ ಧಾರವಾಡದಲ್ಲಿ ಪದವಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದರು. ಪಿಎಚ್‌.ಡಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದರು. ಮಾರ್ಕ್ಸ್‌ವಾದಿಯಾದ ಶರ್ಮಾ ಅವರಿಗೀಗ ವಯಸ್ಸು 90. ಬದುಕಿನ ಬಹುತೇಕ ದಿನಗಳನ್ನು ಅವರು ದ.ರಾ.ಬೇಂದ್ರೆಯವರ ಒಡನಾಡಿಯಾಗಿ ಸಾಹಿತ್ಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಬೇಂದ್ರೆಯವರ ನೂರಾರು ಕವನಗಳನ್ನು ಮರು ಮುದ್ರಣ ಮಾಡಿದ್ದಾರೆ. ಅಧ್ಯಾಪಕ ವಿಮರ್ಶಕ ಸಾಹಿತಿ ಹಾಗೂ ಪ್ರಕಾಶಕರಾಗಿ ಹೀಗೆ ಸಾಹಿತ್ಯ ಕ್ಷೇತ್ರದ ವಿವಿಧ ವಲಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ಸಾಹಿತ್ಯದ ಪರಿಚಾರಕರಾಗಿದ್ದಾರೆ. ಇಂಗ್ಲಿಷ್‌ ಭಾಷೆ ರಾಜ್ಯಶಾಸ್ತ್ರ ಕಾನೂನು ಶಾಸ್ತ್ರದ ಅಧ್ಯಾಪಕರಾಗಿ ಹಾಗೂ ಹುಬ್ಬಳ್ಳಿಯ ಜೆಎಸ್‌ಎಸ್‌ ಸಕ್ರಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾಗಿಯೂ ಸೇವೆ ಸೇವೆ ಸಲ್ಲಿಸಿದ್ದಾರೆ. ಸುಮಾರು 24 ವಿವಿಧ ಕಾರ್ಮಿಕ ಸಂಘಗಳ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ಸಾಹಿತ್ಯ ಕೃಷಿ: ಮಾರ್ಕ್ಸ್‌–ಮಾರ್ಕ್ಸ್‌ವಾದ ಲೆನಿನ್‌– ಗಾಂಧಿ ಲೆನಿನ್‌ ವಾದ– ಗಾಂಧಿವಾದ ಮಹಿಳಾ ವಿಮೋಚನೆ ಸಮಾಜವಾದಿ ಮಹಿಳೆ ಚಿಂತನ ಮಂಥನ ಡಾ.ವಾಮನ ಬೇಂದ್ರೆಯವರ ಸಹಯೋಗದಲ್ಲಿ ವರಕವಿ ಡಾ.ದ.ರಾ.ಬೇಂದ್ರೆಯವರ ಕವನ ಸಂಕಲನಗಳ ಹಾಗೂ ಸಮಗ್ರ ಸಾಹಿತ್ಯ ಸಂಪುಟಗಳ ಪ್ರಕಾಶನ ಕಾರ್ಯವನ್ನು ನಡೆಸಿದ್ದಾರೆ. ಇವರದೇ ಅದ ಕಾವ್ಯನಾಮವಾದ ‘ಕುವಲಯ’ ಇದರ ಅಡಿಯಲ್ಲಿ ‘ಕುವಲಯ ಕಾವ್ಯಧಾರೆ ಮಿಂಚುಕಥೆಗಳು ಹರಟೆಗಳು ನಾಟಕಗಳು ಕಂಡ ಅಂದತ್ತ ಕ್ರಾಂತಿ ಜ್ವಾಲೆ ರಾಜ್ಯವ್ಯವಸ್ಥೆ: ಮಾರ್ಕ್ಸ್‌ವಾದಿ ದೃಷ್ಟಿಕೋನ ಪ್ರಬಂಧ ಕುವಲಯ ಚಿಂತನೆಗಳು: ಸಂಪುಟ–1 ಮತ್ತು 2 ಅಂಕಣ ಲೇಖನಗಳ ಸಂಗ್ರಹ. ಕವನ ಸಂಕಲನ ಹತ್ತಾರು ಇಂಗ್ಲಿಷ್‌ ಕೃತಿಗಳನ್ನೂ ಹೊರತಂದಿದ್ದಾರೆ.  ಸಂದ ಗೌರವಗಳು: ‘ಸೋವ್ಹಿಯಟ್‌ ಲ್ಯಾಂಡ್‌ ನೆಹರೂ ಪ್ರಶಸ್ತಿ–1973 (ಸಾಹಿತ್ಯ) ಕೇಂದ್ರ ಸರ್ಕಾರದ ಬಹುಮಾನ ಚಾಲುಕ್ಯ ಪ್ರಶಸ್ತಿ (ಸಮಾಜ ಸೇವೆ) ವಿಶ್ವೇಶ್ವರಯ್ಯ ನವರತ್ನ ಪರಿತೋಷಕ ಕನ್ನಡ ಶ್ರೀ ಕಾರ್ಮಿಕ ರತ್ನ ಹಲವು ಪ್ರಶಸ್ತಿಗಳಿಗೆ ಅವರು ಪಾತ್ರರಾಗಿದ್ದಾರೆ. ಸ್ಥಾಪಿಸಿದ ಸಂಸ್ಥೆ: ಕೆ.ಎಸ್‌.ಶರ್ಮಾ ಔದ್ಯೋಗಿಕ ತರಬೇತಿ ಕೇಂದ್ರ ಕೆ.ಎಸ್‌.ಶರ್ಮಾ ಶಿಶುವಿಹಾರ ಕೆ.ಎಸ್‌.ಶರ್ಮಾ ಪ್ರಾಥಮಿಕ ಶಾಲೆ ಕೆ.ಎಸ್‌.ಶರ್ಮಾ ಕಲ್ಯಾಣ ಸಭಾ ಭವನ ಜ್ಞಾನಪೀಠ ಪ್ರಶಸ್ತಿ ವಿಜೇತ ವರಕವಿ ಡಾ.ದ.ರಾ.ಬೇಂದ್ರೆ ಸಂಶೋಧನ ಸಂಸ್ಥೆ ದ.ರಾ.ಬೇಂದ್ರೆ ಸಂಗೀತ ಅಕಾಡೆಮಿ ಕಾರ್ಲ್‌ಮಾರ್ಕ್ಸ್‌ ನೆನಪಿನ ಕ್ರಾಂತಿಕಾರಿ ಸ್ಮಾರಕ ಕೇಂದ್ರ. 
ಕೆ.ಎಸ್‌.ಶರ್ಮಾ 
ಕೆ.ಎಸ್‌.ಶರ್ಮಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT